ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ ಬಳಕೆ ಹೆಚ್ಚಳ

Last Updated 24 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): 2009-10ನೇ ಸಾಲಿನಲ್ಲಿ ದೇಶದ ಒಟ್ಟು ಕಾಫಿ ಬಳಕೆ ಶೇ 7ರಷ್ಟು ಹೆಚ್ಚಿದ್ದು, 1,03,500 ಟನ್‌ಗಳಷ್ಟಾಗಿದೆ ಎಂದು ಅಂತರರಾಷ್ಟ್ರೀಯ ಕಾಫಿ ಒಕ್ಕೂಟ (ಐಸಿಒ) ಹೇಳಿದೆ.

2009ರಲ್ಲಿ ದೇಶದಲ್ಲಿ 96,300 ಟನ್‌ಗಳಷ್ಟು ಕಾಫಿ ಬಳಕೆ ದಾಖಲಾಗಿತ್ತು. ಭಾರತೀಯ ಕಾಫಿ ಮಂಡಳಿ 2010ನೇ ಸಾಲಿನಲ್ಲಿ 1,08,000 ಟನ್‌ಗಳಷ್ಟು ಕಾಫಿ ಬಳಕೆ ಅಂದಾಜಿಸಿದೆ.

ಏಷ್ಯಾದ 3ನೇ ಅತಿ ದೊಡ್ಡ ಕಾಫಿ ಉತ್ಪಾದಕ ದೇಶ ಭಾರತವಾಗಿದ್ದು, ಒಟ್ಟು ಉತ್ಪಾದನೆಯೂ ವರ್ಷದಿಂದ ವರ್ಷಕ್ಕೆ ಶೇ 6ರಷ್ಟು ಹೆಚ್ಚಿದೆ. ಅಂತರರಾಷ್ಟ್ರೀಯ ಕಾಫಿ ಒಕ್ಕೂಟದ ಪ್ರಕಾರ, 2010ರಲ್ಲಿ ಜಾಗತಿಕವಾಗಿ ಕಾಫಿ ಬಳಕೆ ಶೇ 2ರಷ್ಟು ಹೆಚ್ಚಿದ್ದು, 135 ದಶಲಕ್ಷ ಚೀಲಗಳಷ್ಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT