ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ ಬೆಳೆಗಾರರಿಗೆ ರೂ. 189 ಲಕ್ಷ ಸಹಾಯಧನ

Last Updated 21 ಜನವರಿ 2011, 9:40 IST
ಅಕ್ಷರ ಗಾತ್ರ

ಮಡಿಕೇರಿ: ಕಾಫಿ ಮಂಡಳಿ ವತಿಯಿಂದ ಜಿಲ್ಲೆಯ ಕಾಫಿ ಬೆಳೆಗಾರರಿಗೆ 2010-11ನೇ ಸಾಲಿನ ಡಿಸೆಂಬರ್ ಅಂತ್ಯದವರೆಗೆ ಜಲ ಸಂವರ್ಧನೆ, ಕಾಫಿ ಗುಣಮಟ್ಟ ವೃದ್ಧಿಸುವುದು ಹಾಗೂ ಕಾಫಿ ಗಿಡಗಳ ಮರುನಾಟಿಗಾಗಿ ಸುಮಾರು ರೂ. 189.49 ಲಕ್ಷ ಸಹಾಯಧನ ವಿತರಿಸಲಾಗಿದೆ.

ಉತ್ತರ ಕೊಡಗಿನಲ್ಲಿ ಜಲ ಸಂವರ್ಧನೆಗೆ ಅಂದರೆ, ತೆರೆದ ಬಾವಿ ಹಾಗೂ ಕೊಳವೆಬಾವಿ ನಿರ್ಮಾಣ, ತುಂತುರು ನೀರಾವರಿ, ಸಣ್ಣ ಕೆರೆಗಳ ನಿರ್ಮಾಣ ಮತ್ತಿತರ ಉದ್ದೇಶಗಳಿ ಗಾಗಿ 32.89 ಲಕ್ಷ ರೂಪಾಯಿ ಸಹಾಯಧನ ವಿತರಿಸಲಾಗಿದೆ. ಈ ಉದ್ದೇಶಕ್ಕಾಗಿ ಒಟ್ಟು 519.65 ಹೆಕ್ಟೇರ್ ಪ್ರದೇಶಕ್ಕೆ ಈ ಸಹಾಯಧನ ವಿತರಿಸಲಾಗಿದ್ದು, 184 ಬೆಳೆಗಾರರು ಪ್ರಯೋಜನ ಪಡೆದುಕೊಂಡಿದ್ದಾರೆ.

ಅಂತೆಯೇ, ಕಾಫಿ ಗುಣಮಟ್ಟ ವೃದ್ಧಿಸುವ ಉದ್ದೇಶಕ್ಕಾಗಿ 35.74 ಲಕ್ಷ ಸಹಾಯಧನ ವಿತರಿಸಲಾಗಿದೆ. ಸುಮಾರು 708 ಹೆಕ್ಟೇರ್ ಪ್ರದೇಶಕ್ಕೆ ಈ ಸಹಾಯಧನ ನೀಡಲಾಗಿದ್ದು, ಒಟ್ಟು 252 ಮಂದಿ ಫಲಾನುಭ ವಿಗಳು ಪ್ರಯೋಜನ ಪಡೆದು ಕೊಂಡಿದ್ದಾರೆ.

ಕಾಫಿ ಗಿಡಗಳ ಮರು ನಾಟಿ ಉದ್ದೇಶಕ್ಕಾಗಿ ರೂ. 8.61 ಲಕ್ಷ ಸಹಾಯಧನ ನೀಡಲಾಗಿದೆ. 28 ಹೆಕ್ಟೇರ್ ಅರೇಬಿಕಾ ಹಾಗೂ 28 ಹೆಕ್ಟೇರ್ ರೋಬಸ್ಟಾ ಕಾಫಿ ಗಿಡಗಳ ಮರು ನಾಟಿಗೆ 38 ಮಂದಿ ಫಲಾನುಭವಿಗಳು ಸಹಾಯಧನದ ಲಾಭ ಪಡೆದುಕೊಂಡಿದ್ದಾರೆ.

ದಕ್ಷಿಣ ಕೊಡಗಿನಲ್ಲಿ: ವಿರಾಜಪೇಟೆ ತಾಲ್ಲೂಕು ವ್ಯಾಪ್ತಿಗೊಳಪಡುವ ದಕ್ಷಿಣ ಕೊಡಗಿನಲ್ಲಿ ಜಲಸಂವರ್ಧ ನೆಗಾಗಿ 1107.08 ಹೆಕ್ಟೇರ್ 66.91 ಲಕ್ಷ ರೂಪಾಯಿ ಸಹಾಯಧನ ನೀಡಲಾಗಿದ್ದು, 233 ಮಂದಿ ಫಲಾನುಭವಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ.

ಕಾಫಿ ಗುಣಮಟ್ಟ ವೃದ್ಧಿಗಾಗಿ 726.98 ಹೆಕ್ಟೇರ್ ಪ್ರದೇಶಕ್ಕೆ 41.09 ಲಕ್ಷ ರೂಪಾಯಿ ಸಹಾಯಧನ ನೀಡಲಾಗಿದೆ. 190 ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಕಾಫಿ ಗಿಡಗಳ ಮರು ನಾಟಿಗಾಗಿ 34.48 ಹೆಕ್ಟೇರ್‌ಗೆ 4.25 ಲಕ್ಷ ರೂಪಾಯಿ ಸಹಾಯಧನ ವಿತರಿಸಲಾಗಿದೆ.

2012ರವರೆಗೆ ಬೆಳೆಗಾರರಿಗೆ ಈ ಸಹಾಯಧನ ನೀಡಲಾಗುತ್ತದೆ. ಸದ್ಯಕ್ಕೆ ಹಣಕಾಸಿನ ಕೊರತೆ ಇಲ್ಲ. ಬೆಳೆಗಾರರಿಂದ ಸಹಾಯಧನಕ್ಕೆ ಬೇಡಿಕೆ ಬಂದಂತೆ ಮಂಡಳಿ ಅನುದಾನ ನೀಡಲಿದೆ ಎಂದು ಅವರು ಕಾಫಿ ಮಂಡಳಿಯ ಪ್ರಭಾರ ಉಪ ನಿರ್ದೇಶಕ ಎಸ್.ವಿ. ನಾಗರಾಜ್ ತಿಳಿಸಿದ್ದಾರೆ.

1700 ಮೆಟ್ರಿಕ್ ಟನ್ ಉತ್ಪಾದನೆ ಕುಂಠಿತ:  ಕಾಫಿ ಮಂಡಳಿಯು 2010-11ನೇ ಸಾಲಿನಲ್ಲಿ ಮಾನ್ಸೂನ್ ನಂತರದ ಅವಧಿಯಲ್ಲಿ ಜಿಲ್ಲೆಯಲ್ಲಿ ನಡೆಸಿದ ಅಂದಾಜಿನಂತೆ, 20,900 ಮೆಟ್ರಿಕ್ ಟನ್ ಅರೇಬಿಕಾ, 88,600 ಮೆಟ್ರಿಕ್ ಟನ್ ರೋಬಸ್ಟಾ ಕಾಫಿ ಸೇರಿದಂತೆ ಒಟ್ಟು 1,09,500 ಮೆಟ್ರಿಕ್ ಟನ್ ಕಾಫಿ ಉತ್ಪಾದನೆ ಯಾಗಬಹುದೆಂದು ನಿರೀಕ್ಷಿಸಲಾಗಿದೆ.
ಕಳೆದ ವರ್ಷ 21,550 ಮೆಟ್ರಿಕ್ ಟನ್ ಅರೇಬಿಕಾ ಹಾಗೂ 89,650 ಮೆಟ್ರಿಕ್ ಟನ್ ರೋಬಸ್ಟಾ ಸೇರಿದಂತೆ ಒಟ್ಟು 1,11,200 ಮೆಟ್ರಿಕ್ ಟನ್ ಕಾಫಿ ಉತ್ಪಾದನೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 1700 ಮೆಟ್ರಿಕ್ ಟನ್‌ಗಳಷ್ಟು ಕಾಫಿ ಉತ್ಪಾದನೆ ಕುಂಠಿತವಾಗುವ ಸಂಭವವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT