ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಬೂಲ್: ಹೆಸರಿಲ್ಲದ ರಸ್ತೆಗಳು...!

Last Updated 15 ಜುಲೈ 2013, 19:59 IST
ಅಕ್ಷರ ಗಾತ್ರ

ಕಾಬೂಲ್ (ಎಫ್‌ಪಿ):  ಇಲ್ಲಿನ ಬಹುತೇಕ ರಸ್ತೆಗಳಿಗೆ ಹೆಸರೇ ಇಲ್ಲ. ಮನೆಗಳಿಗೆ ಗುರುತಿನ ಸಂಖ್ಯೆಗಳೂ ಇಲ್ಲ. ಹೀಗಾಗಿ ಅಂಚೆಯಣ್ಣಂದಿರು ಪತ್ರಗಳನ್ನು ಬಟವಾಡೆ ಮಾಡಲು ಪತ್ತೇದಾರಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಉಗ್ರರ ಆತ್ಮಹತ್ಯಾ ದಾಳಿ ಭೀತಿಯ ನಡುವೆ ಕೆಲಸ ಮಾಡಿ ಹೈರಾಣಾಗಿರುವ ಅಂಚೆಯವರಿಗೆ ಈಗ ವಿಳಾಸ ಹುಡುಕುವುದು ತಲೆನೋವಿನ ಕೆಲಸವಾಗಿದೆ.

`ನಾವು ವ್ಯಕ್ತಿಯೊಬ್ಬರಿಗೆ ಪತ್ರ ತಲುಪಿಸಬೇಕಾಗಿದೆ. ಈ ವ್ಯಕ್ತಿ ವಾಸವಾಗಿರುವುದು ಡಾ. ಹಸ್‌ಮತ್ ಅವರ ಮನೆಯ ಬಳಿ. ನನಗೆ ವಿಳಾಸವೇ ಗೊತ್ತಿಲ್ಲ. ಹೀಗಿರುವಾಗ ಈ ಪತ್ರವನ್ನು ತಲುಪಿಸುವುದಾದರೂ ಹೇಗೆ?' ಎಂದು ಪ್ರಶ್ನಿಸುತ್ತಾರೆ ಪೋಸ್ಟ್‌ಮನ್ ಮೊಹಮ್ಮದ್ ರಹೀಂ.

ಕಾಬೂಲ್‌ನಲ್ಲಿ 50 ಲಕ್ಷ ಜನರು ಇದ್ದಾರೆ. ಕೆಲವರು ಉದ್ಯೋಗ ಅರಸಿ ಬಂದರೆ, ಮತ್ತೆ ಕೆಲವರು ತಾಲಿಬಾನ್ ಬಂಡುಕೋರರಿಂದ ತಪ್ಪಿಸಿಕೊಂಡು ಬಂದು ಇಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಹೀಗೆ ಎಲ್ಲಿಂದಲೋ ಬಂದು ಇಲ್ಲಿ ಅನಧಿಕೃತವಾಗಿ ಮನೆ ಕಟ್ಟಿಕೊಂಡವರು ಸಾಕಷ್ಟು ಮಂದಿ ಇದ್ದಾರೆ.

ಸಮಗ್ರ ವಿಳಾಸ ವ್ಯವಸ್ಥೆ ರೂಪಿಸುವ ಸಲುವಾಗಿ ಸಂಪರ್ಕ ಸಚಿವಾಲಯವು ನೂತನ ಯೋಜನೆ ಜಾರಿಗೆ ತರುತ್ತಿದೆ. ಎರಡು ವರ್ಷಗಳಲ್ಲಿ ಈ ಕಾರ್ಯ ಮುಗಿಯಲಿದೆ. ನಂತರ ಇತರ ನಗರಗಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗುತ್ತದೆ. ರಹೀಂ ಅವರಂಥ ಅದೆಷ್ಟೋ ಪೋಸ್ಟ್‌ಮನ್‌ಗಳು ಈ ಯೋಜನೆ ಕಾರ್ಯರೂಪಕ್ಕೆ ಬರುವುದನ್ನೇ ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT