ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿಗೆ ಗುದ್ದಲಿ ಪೂಜೆ

ಎಸ್‌ಸಿಪಿ ಯೋಜನೆಯಡಿಯ ರಸ್ತೆ ಅಭಿವೃದ್ಧಿ
Last Updated 3 ಜೂನ್ 2013, 7:04 IST
ಅಕ್ಷರ ಗಾತ್ರ

ಪಾಂಡವಪುರ:  ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದ ಪರಿಶಿಷ್ಟ ಕಾಲೋನಿಯಲ್ಲಿ ರೂ. 75ಲಕ್ಷ ವೆಚ್ಚದ ಎಸ್‌ಸಿಪಿ ಯೋಜನೆಯಡಿಯ  ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಭಾನುವಾರ ಗುದ್ದಲಿ ಪೂಜೆ ನೆರವೇರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಇಪಿ ಯೋಜನೆಯಡಿ 4 ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಕ್ಯಾತನಹಳ್ಳಿಯಲ್ಲಿ ರೂ. 20ಲಕ್ಷ, ಹರವು ಗ್ರಾಮದಲ್ಲಿ ರೂ. 15 ಲಕ್ಷ, ಚಿಕ್ಕಾಯಿರಹಳ್ಳಿಯಲ್ಲಿ ರೂ. 25ಲಕ್ಷ ಹಾಗೂ ಡಾಮಡಹಳ್ಳಿಯಲ್ಲಿ ರೂ.15ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದರು.

ಗುಣಮಟ್ಟ ಕಾಯ್ದುಕೊಳ್ಳಿ : ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಜತೆಗೆ ಕೆಲಸವನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದು ಪುಟ್ಟಣ್ಣಯ್ಯ ಅವರು, ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು. ಜಿ.ಪಂ. ಸದಸ್ಯ ಎ.ಎಲ್. ಕೆಂಪೂಗೌಡ, ಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಹೇಮಾವತಿ, ಮಾಜಿ ಉಪಾಧ್ಯಕ್ಷ ರಮೇಶ್, ರೈತ ಸಂಘದ ಗ್ರಾಮ ಘಟಕ ಅಧ್ಯಕ್ಷ ರವಿಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ಎಸ್. ದಯಾನಂದ್, ಮುಖಂಡರಾದ ಬಿ.ಟಿ.ಮಂಜು, ಅಮೃತಿ ರಾಜಶೇಖರ್, ವಿಜಯಕುಮಾರ್, ಗುತ್ತಿಗೆದಾರ ವಿಜೇಂದ್ರಮೂರ್ತಿ, ಕಾವೇರಿ ನೀರಾವರಿ ನಿಗಮದ ಎಇಇ ಗುರುಮೂರ್ತಿ, ಎಇ ಗೋವಿಂದ ರಾಜು, ಆನಂದ್, ಜ್ಞಾನಮೂರ್ತಿ, ಜೆಇ ಹೊನ್ನೋಜಿರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT