ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಧೇನು ನಗರ: ನಾಮಫಲಕದಲ್ಲಿ ದೋಷ, ಸ್ಥಳೀಯರ ಆಕ್ಷೇಪ

Last Updated 4 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಆರ್. ಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಬಿ. ನಾರಾಯಣಪುರ ಬಳಿಯ ಕಾಮಧೇನು ನಗರದ ಕೆಲವು ಮುಖ್ಯರಸ್ತೆಗಳ ನಾಮಫಲಕಗಳಲ್ಲಿ ದೊಡ್ಡ ತಾಯಪ್ಪ ಬಡಾವಣೆ ಎಂಬುದಾಗಿ ನಮೂದಿಸಿರುವುದಕ್ಕೆ ಸ್ಥಳೀಯ ನಿವಾಸಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

`ಹಲವು ವರ್ಷಗಳಿಂದ ಕಾಮಧೇನು ನಗರದಲ್ಲಿ ನೆಲೆಸಿದ್ದೇವೆ. ಕಚೇರಿ ಇತರೆ ವ್ಯವಹಾರಗಳಿಗೆ ಕಾಮಧೇನು ನಗರ ಹೆಸರಿನ ವಿಳಾಸವನ್ನೇ ನೀಡಲಾಗಿದೆ. ಬಡಾವಣೆಯ 1ರಿಂದ 5ನೇ ಮುಖ್ಯರಸ್ತೆವರೆಗಿನ ನಾಮಫಲಕಗಳಲ್ಲಿ ಕಾಮಧೇನು ನಗರ ಎಂಬುದಾಗಿ ನಮೂದಿಸಲಾಗಿದೆ. ಆದರೆ ತಾಯಪ್ಪ ಎಂಬ ಪ್ರಭಾವಿ ವ್ಯಕ್ತಿಯು 6 ಮತ್ತು7ನೇ ಮುಖ್ಯರಸ್ತೆಯ ನಾಮಫಲಕಗಳಿಗೆ ದೊಡ್ಡ ತಾಯಪ್ಪ ಬಡಾವಣೆ ಎಂಬ ಹೆಸರು ನಮೂದಿಸಿ ಗೊಂದಲ ಮೂಡಿಸುತ್ತಿದ್ದಾರೆ~ ಎಂದು ಸ್ಥಳೀಯರು ಆರೋಪಿಸಿದ್ದಾರೆ.

`ಈ ವಿಷಯವನ್ನು ಸ್ಥಳೀಯ ಶಾಸಕ ಎನ್.ಎಸ್. ನಂದೀಶ್‌ರೆಡ್ಡಿ ಹಾಗೂ ಬಿಬಿಎಂಪಿ ಸದಸ್ಯೆ ಮಂಜುಳಾದೇವಿ ಅವರ ಗಮನಕ್ಕೆ ತರಲಾಯಿತು. ಅವರ ಸೂಚನೆ ಮೇರೆಗೆ ನವೆಂಬರ್ 28ರಂದು ಬಿಬಿಎಂಪಿ ಅಧಿಕಾರಿಗಳು 6 ಮತ್ತು 7ನೇ ಮುಖ್ಯರಸ್ತೆ ಹಾಗೂ ಸಂಬಂಧಪಟ್ಟ ಅಡ್ಡರಸ್ತೆಗಳ ನಾಮಫಲಕಗಳಲ್ಲಿ ನಮೂದಿಸಲಾಗಿದ್ದ ದೊಡ್ಡತಾಯಪ್ಪ ಬಡಾವಣೆ ಎಂಬುದನ್ನು ಅಳಿಸಿಹಾಕಿದರು. ಆದರೆ ಇದಕ್ಕೆ ಕಾರಣರಾದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ~ ಎಂದು ತಿಳಿಸಿದ್ದಾರೆ.

ಗೂಂಡಾಗಿರಿ: `ನ. 29ರಂದು ಗೂಂಡಾಗಳೊಂದಿಗೆ ಸ್ಥಳಕ್ಕೆ ಆಗಮಿಸಿದ ತಾಯಪ್ಪ, ಸ್ಥಳೀಯ ನಿವಾಸಿಗಳಿಗೆ ಬೆದರಿಕೆಯೊಡ್ಡಿದ್ದರು. ಅದೇ ದಿನ ಸಂಜೆ ಎಲ್ಲ ನಾಮಫಲಕಗಳಲ್ಲೂ ದೊಡ್ಡ ತಾಯಪ್ಪ ಬಡಾವಣೆ ಎಂದು ನಮೂದಿಸಲಾಗಿದೆ. ತಾಯಪ್ಪ ಮತ್ತು ಸಹಚರರ ಗೂಂಡಾಗಿರಿಯಿಂದ ಭಯದ ವಾತಾವರಣ ಸೃಷ್ಟಿಯಾಗಿದೆ~ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

`ಪಾಸ್‌ಪೋರ್ಟ್ ಸೇರಿದಂತೆ ಅಗತ್ಯವೆನಿಸಿರುವ ಎಲ್ಲ ದಾಖಲೆಗಳ ವಿಳಾಸದಲ್ಲೂ ಕಾಮಧೇನು ನಗರ ಎಂದು ದಾಖಲಾಗಿದೆ. ಇದೀಗ ಪ್ರಭಾವಿ ವ್ಯಕ್ತಿಗಳು ಬಡಾವಣೆಗೆ ಸಂಬಂಧಪಡದ ವ್ಯಕ್ತಿಯ ಹೆಸರನ್ನು ರಸ್ತೆಗಳ ನಾಮಫಲಕಗಳಲ್ಲಿ ನಮೂದಿಸಿರುವುದರಿಂದ ಗೊಂದಲ ಮೂಡಿದೆ. ಕೂಡಲೇ ಬಿಬಿಎಂಪಿ ಆಡಳಿತ ಇತ್ತ ಗಮನ ಹರಿಸಿ ಕಾಮಧೇನುನಗರ ಎಂಬ ಹೆಸರನ್ನೇ ನಾಮಫಲಕಗಳಲ್ಲಿ ನಮೂದಿಸಲು ಕ್ರಮ ಕೈಗೊಳ್ಳಬೇಕು~ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT