ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮನ್‌ವೆಲ್ತ್‌ಗೆ ಕಮಲೇಶ್ ಶರ್ಮ ಪುನರಾಯ್ಕೆ

Last Updated 30 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಪರ್ತ್, (ಪಿಟಿಐ/ ಐಎಎನ್‌ಎಸ್):  ಭಾರತದ ಮಾಜಿ ರಾಜತಾಂತ್ರಿಕ ಅಧಿಕಾರಿ ಕಮಲೇಶ್ ಶರ್ಮ ಅವರನ್ನು ಕಾಮನ್‌ವೆಲ್ತ್ ಮಹಾ ಕಾರ್ಯದರ್ಶಿಯಾಗಿ ಪುನಃ ನೇಮಕ ಮಾಡಲಾಗಿದ್ದು, 2012ರಿಂದ ನಾಲ್ಕು ವರ್ಷಗಳ ಕಾಲ ಅವರು ಅಧಿಕಾರದಲ್ಲಿ ಇರುತ್ತಾರೆ.

ಕಾಮನ್‌ವೆಲ್ತ್ ರಾಷ್ಟ್ರಗಳ ಮುಖ್ಯಸ್ಥರ ಶೃಂಗಸಭೆಯಲ್ಲಿ 70 ವರ್ಷದ ಶರ್ಮ ಅವರನ್ನು ಮಹಾ ಕಾರ್ಯದರ್ಶಿ ಹುದ್ದೆಗೆ ಮರು ನೇಮಕ ಮಾಡಲು ಒಮ್ಮತದಿಂದ ಒಪ್ಪಿಕೊಳ್ಳಲಾಗಿದೆ.

2007ರಲ್ಲಿ ಉಗಾಂಡಾದ ಕಂಪಾಲಾದಲ್ಲಿ ನಡೆದ ಕಾಮನ್‌ವೆಲ್ತ್ ರಾಷ್ಟ್ರಗಳ ಮುಖ್ಯಸ್ಥರ ದೈವಾರ್ಷಿಕ ಶೃಂಗಸಭೆಯಲ್ಲಿ ಮೊದಲ ಬಾರಿಗೆ ಶರ್ಮ ಅವರನ್ನು ಮಹಾ ಕಾರ್ಯದರ್ಶಿ ಹುದ್ದೆಗೆ ಆಯ್ಕೆ ಮಾಡಲಾಗಿತ್ತು. 2008ರಲ್ಲಿ ಅವರು ನ್ಯೂಜಿಲೆಂಡ್‌ನಲ್ಲಿ ಸರ್ ಡಾನ್ ಮಕಿನನೊನ್ ಅವರಿಂದ ಅಧಿಕಾರ ವಹಿಸಿಕೊಂಡಿದ್ದರು.

ಇದಕ್ಕೆ ಮುನ್ನ, ಬ್ರಿಟನ್‌ನಲ್ಲಿನ ಭಾರತದ ಹೈ ಕಮಿಷನರ್ ಆಗಿಯೂ ಸೇವೆ ಸಲ್ಲಿಸಿದ ಅನುಭವ ಅವರಿಗಿದೆ.
`ಜೀವನದಲ್ಲಿ ನಿಮಗೆ ಎಷ್ಟು ವಯಸ್ಸಾಗಿದೆ ಎಂಬುದು ಮುಖ್ಯವಲ್ಲ, ಎಷ್ಟು ನವೀನ ರೀತಿಯಲ್ಲಿ ನೀವು ಚಿಂತಿಸುತ್ತೀರಿ ಎಂಬುದು ಮುಖ್ಯ~ ಎಂದು ತಮ್ಮ ಪುನರಾಯ್ಕೆಯಿಂದ ಸಂತಸಗೊಂಡಿರುವ ಶರ್ಮ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT