ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಿಕ್ಸ್‌ನಲ್ಲಿ ಕನ್ನಡದ ಕತೆಗಳು

Last Updated 3 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಾಹಿತಿಗಳಾದ ಚನ್ನವೀರ ಕಣವಿ, ಪ್ರೊ. ಹಂಪ ನಾಗರಾಜಯ್ಯ, ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಮತ್ತಿತರರು ಕನ್ನಡದ ಉತ್ತಮ ಕತೆಗಳನ್ನು ಕಾಮಿಕ್ಸ್ ರೂಪದಲ್ಲಿ ಹೊರತರಲು ಚಿಂತಿಸಿದ್ದಾರೆ.

ಈ ಯೋಜನೆಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರೂ ಸಾಥ್ ನೀಡಿದ್ದಾರೆ.

ಈ ಯೋಜನೆಯ ಕುರಿತು ಮಾತುಕತೆ ನಡೆಸಲು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರನ್ನು ಗೃಹ ಕಚೇರಿ `ಕೃಷ್ಣಾ~ದಲ್ಲಿ ಮಂಗಳವಾರ ಭೇಟಿ ಮಾಡಿದ ಡಾ. ಕಂಬಾರ, ಕಣವಿ, ಸಿದ್ಧರಾಮಯ್ಯ ಅವರು, ಯೋಜನೆಗೆ ಬೆಂಬಲ ನೀಡುವಂತೆ ಕೋರಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್ ಅವರೂ ನಿಯೋಗದಲ್ಲಿದ್ದರು.

`ಈ ಯೋಜನೆಯಲ್ಲಿ ಕನ್ನಡದ ಉತ್ತಮ ಕತೆಗಳನ್ನು ತಲಾ 30 ಪುಟಗಳ ಕಾಮಿಕ್ಸ್ ರೂಪದಲ್ಲಿ ತರಲಾಗುವುದು. ಚಿತ್ರ, ಕತೆಗಳ ಮೂಲಕ ಮಕ್ಕಳಿಗೆ ನಾಡಿನ ಸಂಸ್ಕೃತಿಯನ್ನು ತಿಳಿಸುವ ಪ್ರಯತ್ನ ಇದು~ ಎಂದು ಡಾ. ಕಂಬಾರ ಅವರು `ಪ್ರಜಾವಾಣಿ~ಗೆ ತಿಳಿಸಿದರು.

ಯೋಜನೆಯ ಕುರಿತು ಆಸಕ್ತಿ ತೋರಿರುವ ಸದಾನಂದ ಗೌಡರು, ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಕಾಮಿಕ್ಸ್ ಪುಸ್ತಕಗಳನ್ನು ಸರ್ಕಾರವೇ ಖರೀದಿಸುವ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT