ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕ ತತ್ವದ ಪಾಠ ಬೋಧಿಸಿ: ಬಿದರಿ

Last Updated 16 ಸೆಪ್ಟೆಂಬರ್ 2013, 7:58 IST
ಅಕ್ಷರ ಗಾತ್ರ

ಗದಗ: ಧರ್ಮ ಮತ್ತು ಜಾತಿ ಆಧಾರದ ಮೇಲೆ ಸಮಾಜ ಒಡೆ ಯುವ ಪಕ್ಷ ಮತ್ತು ವ್ಯಕ್ತಿಗೆ ಜನರು ಧಿಕ್ಕಾರ ಕೂಗಬೇಕು ಎಂದು ಸಮಾಜ ವಾದಿ ಪಕ್ಷದ ರಾಜ್ಯಾಧ್ಯಕ್ಷ ಶಂಕರ ಬಿದರಿ ಹೇಳಿದರು.

ಬೆಟಗೇರಿಯಲ್ಲಿ ಕನ್ನಡ ಜಾನಾಭಿವೃದ್ಧಿ ವೇದಿಕೆ ಭಾನುವಾರ ಏರ್ಪಡಿ ಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಜಿಲ್ಲಾ ಅತ್ಯತ್ತಮ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದ ಅವರು, ದೇಶದಲ್ಲಿ ಚುನಾವಣಾ ಆಯೋಗದ ಪ್ರಕಾರ ಎಲ್ಲ ಪಕ್ಷಗಳು ಜಾತ್ಯತೀತ.

ಆದರೆ ಎಲ್ಲ ಪಕ್ಷಗಳು ಜಾತಿಯತೇ ಮಾಡುತ್ತಿವೆ. ಶಿಕ್ಷಕರು ಮಕ್ಕಳಿಗೆ ನಾವೇಲ್ಲ ಭಾರತೀ ಯರು ಎಂಬ ಪಾಠವನ್ನು ಹೇಳಬೇಕು. ಸಮಾಜಕ್ಕೆ ತ್ಯಾಗ ಮಾಡಿದ ವ್ಯಕ್ತಿಗಳನ್ನು ಗೌರವಿಸುತ್ತೇವೆ. ನಿಸರ್ಗದ ವಿರುದ್ಧ ಕೆಲಸ ಮಾಡುವವರ ಪೋಟೋಗಳು ಚರಂಡಿಯಲ್ಲಿ ಬಿದ್ದಿರುತ್ತವೆ ಎಂದು ತಿಳಿಸಿದರು.

ಸರ್ಕಾರ ಅಕ್ಕಿ ಹಾಗೂ ಮನೆ ಉಚಿತವಾಗಿ ನೀಡಬಹುದು. ಎಲ್ಲರೂ ನಿರೀಕ್ಷೇ ಮೀರಿ ಕಾರ್ಯ ಮಾಡಿದರೆ ಮಾತ್ರ ದೇಶದ ಸಂಪತ್ತು ಹೆಚ್ಚಾಗುತ್ತದೆ. ಆಗ ಮಾತ್ರ ಸಂಪತ್ತು ಹಂಚಿಕೆ ಮಾಡಲು ಸಾಧ್ಯ. ಮಕ್ಕಳಿಗೆ ಕಾಯಕ ತತ್ವದ ಪಾಠವನ್ನು ಶಿಕ್ಷಕರು ಬೋಧನೆ ಮಾಡಬೇಕು ಎಂದು ಸಲಹೆ ನೀಡಿದರು.

ನೆರೆಯ ದೇಶಗಳಿಗೆ ಹೋಲಿಸಿದರೆ ಭಾರತ ಪ್ರಗತಿಯಲ್ಲಿ ಸಾಕಷ್ಟು ಹಿಂದೆ ಉಳಿದಿದೆ. 2012ರ ಅಂಕಿ ಅಂಶ ಪ್ರಕಾರ ಇಟಲಿಯ ವಾರ್ಷಿಕ ವರ ಮಾನ 37 ಸಾವಿರ ಡಾಲರ್‌, ಕೊರಿಯಾ 31 ಸಾವಿರ ಡಾಲರ್‌, ಶ್ರೀಲಂಕಾ 6,200 ಡಾಲರ್‌ ಹಾಗೂ ಭಾರತದ ವಾರ್ಷಿಕ ವರಮಾನ 3,100 ಡಾಲರ್‌. ಇದಕ್ಕೆ ಕಾರಣ ಅತಿಯಾದ ಆಸೆ. ಎಲ್ಲವೂ ನನಗೆ ಬೇಕು ಎನ್ನುವುದು.

ಸಾವಿರಾರು ವರ್ಷಗಳು ವಿದೇಶಿಯರು ದೇಶವನ್ನು ಆಳಿದರು. ಹಿರಿಯರು ತ್ಯಾಗ ಮತ್ತು ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಆದರೆ ದೇಶ ಪ್ರಗತಿಯಲ್ಲಿ ಹಿನ್ನಡೆ ಸಾಧಿಸಿರುವುದು ಶೋಚನೀಯ ಎಂದು ನುಡಿದರು.

ಜಿಲ್ಲಾ ಅತ್ಯುತ್ತಮ ಶಿಕ್ಷಕರಿಗೆ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ವೇದಿಕೆ ಅಧ್ಯಕ್ಷ ಹಲ್ಲೇಶ ಎಚ್‌. ಬಜಂತ್ರಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಎಂ.ಕೆ. ಲಮಾಣಿ ಉಪನ್ಯಾಸ ನೀಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯೆ ಸುಮತಿ ಹುಯಿಲಗೋಳ, ನಗರಸಭೆ ಸದಸ್ಯರಾದ ಮಂಜುನಾಥ ಮುಳ ಗುಂದ, ರಾಘವೇಂದ್ರ ಯಳವತಿ್ತ, ದೇವಪ್ಪ ಇಟಗಿ ಹಾಜರಿದ್ದರು. ಎಸ್‌.ಎಸ್‌. ಗುಜ ಮಾಗಡಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT