ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕ ನಿರತ ಕೋಲೆ ಬಸವ ಕುಟುಂಬ!

Last Updated 3 ಜೂನ್ 2013, 8:40 IST
ಅಕ್ಷರ ಗಾತ್ರ

ಶನಿವಾರಸಂತೆ: ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ, ಬೈಪಾಸ್‌ರಸ್ತೆಯಲ್ಲಿ ಸ್ತ್ರೀ ಪುರುಷರು, ಮಕ್ಕಳಾದಿಯಾಗಿ ಅಲಂಕೃತ ಬಸವನ ಪ್ರದರ್ಶನ ನೀಡುತ್ತಿರುವುದು ಕೆಲವು ದಿನಗಳಿಂದ ಸಾಮಾನ್ಯ ದೃಶ್ಯವಾಗಿದೆ. ತಿರುಪತಿಯಿಂದ ಬಂದ ಕೋಲೆ ಬಸವನನ್ನು ಆಡಿಸುವ ಜನಾಂಗದ ಕುಟುಂಬಗಳು ಪಟ್ಟಣದಲ್ಲಿ ಬೀಡು ಬಿಟ್ಟಿವೆ.

`ಎಂಥಾ ಅನುಕೂಲಸ್ಥನೇ ಆಗಿರ್ಲಿ ವರ್ಷದಲ್ಲಿ 2 ತಿಂಗಳು ಬಸವನನ್ನು ಆಡಿಸಲೇ ಬೇಕು. ನಾವು ವ್ಯವಸಾಯ ಮಾಡುವವರು. ನಮ್ಗೂ ಮನೆ-ಮಠ, ಆಸ್ತಿಪಾಸ್ತಿ ಎ್ಲ್ಲಲ ಇದೆ. ಮಕ್ಕಳೂ ಶಾಲೆಗೆ ಹೋಗುತ್ತಾರೆ. ಆದ್ರೂ ಸಂಪ್ರದಾಯದಂತೆ ವರ್ಷದಲ್ಲಿ 2 ತಿಂಗಳು ಬಸವನನ್ನು ಆಡಿಸುತ್ತಾ ಊರೂರು ತಿರುಗ್ತೀವಿ' ಎನ್ನುತ್ತಾರೆ ಸುಬ್ಬಣ್ಣ ಮತ್ತು ಗಂಗಪ್ಪ.

ಕೋಲೆ ಬಸವನ ಜನಾಂಗದವರು ಪ್ರತಿವರ್ಷ ಏಪ್ರಿಲ್ ಇಲ್ಲವೇ ಮೇ ತಿಂಗಳಲ್ಲಿ ಶನಿವಾರಸಂತೆ ಹಾಗೂ ಸುತ್ತಮುತ್ತಲ ಪಟ್ಟಣಗಳಲ್ಲಿ ಬೀಡು ಬಿಟ್ಟು ಬಸವನನ್ನು ಆಡಿಸುವ ಕಾಯಕ ಮಾಡಿ ಹಿಂದಿರುಗುತ್ತಾರೆ. ಹಾಗಾಗಿ ಈ ಜನ ಇಲ್ಲಿನವರಿಗೆ ಚಿರಪರಿಚಿತರು. ಮನೆ, ಅಂಗಡಿಗಳ ಮುಂದೆ ಅಲಂಕೃತ ಬಸವನನ್ನು ಕರೆತಂದು ವಾದ್ಯ ನುಡಿಸುತ್ತಾರೆ.

ರಾಮ-ಸೀತೆ ಮದುವೆ ಇತ್ಯಾದಿ ಪೌರಾಣಿಕ ಆಟಗಳನ್ನು ಆಡಿಸುತ್ತಾರೆ. ಪ್ರತಿಯಾಗಿ ಜನರು ಗೋವುಗಳ ಮೇಲಿನ ಭಕ್ತಿಯಿಂದ ಹಣ, ದವಸ, ಧಾನ್ಯ ನೀಡುತ್ತಾರೆ. ಬೇಸಿಗೆ ಕಾಲದಲ್ಲಿ 2-3 ಕುಟುಂಬದವರು ಒಟ್ಟಾಗಿ ಸೇರಿ ಕೋಲೆ ಬಸವಣ್ಣನೊಂದಿಗೆ ಕರ್ನಾಟಕದಾದ್ಯಂತ ಸಂಚರಿಸುತ್ತಾರೆ. ಊರ ಹೊರಭಾಗದಲ್ಲೋ, ಸಂತೆ ಮಾಳದಲ್ಲೋ ಟೆಂಟ್ ಹಾಕುತ್ತಾರೆ. ಒಂದೆರಡು ದಿನ ಅಲ್ಲೇ ಉಳಿದು ಪ್ರದರ್ಶನ ಮುಗಿದ ನಂತರ ಮುಂದಿನೂರಿಗೆ ಪಯಣಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT