ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕನಿಷ್ಠೆ ಬೆಳೆಸಿಕೊಳ್ಳಿ:ಪಾಪು

Last Updated 27 ಮಾರ್ಚ್ 2011, 9:45 IST
ಅಕ್ಷರ ಗಾತ್ರ

ಬಸವಕಲ್ಯಾಣ: ಕಾಯಕನಿಷ್ಠೆ ಬೆಳೆಸಿಕೊಂಡರೆ ಮಾತ್ರ ಬಸವಣ್ಣನವರು ತೋರಿದ ಮಾರ್ಗದಲ್ಲಿ ನಡೆದಂತಾಗುತ್ತದೆ ಎಂದು ಹಿರಿಯ ಪತ್ರಕರ್ತರಾದ ನಾಡೋಜ ಪಾಟೀಲ ಪುಟ್ಟಪ್ಪ ಅವರು ಅಭಿಪ್ರಾಯಪಟ್ಟರು.

ಇಲ್ಲಿನ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಬಸವ ಉತ್ಸವದ ಅಂಗವಾಗಿ ಶನಿವಾರ ಮಧ್ಯಾಹ್ನ ‘ಸತ್ಯ ಶುದ್ಧ ಕಾಯಕ, ದಾಸೋಹ, ಪ್ರಸಾದ’ ವಿಷಯದ ಬಗ್ಗೆ ಹಮ್ಮಿಕೊಂಡ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಕೆಲಸಕ್ಕೆ ಯಾರೂ ಮಹತ್ವ ಕೊಡುತ್ತಿಲ್ಲ. ಯುವಕರು ಮೈಗಳ್ಳ ಆಗುತ್ತಿರುವ ಕಾರಣ ಕೃಷಿ ಕಾರ್ಯಕ್ಕೆ ಜನರು ಸಿಗುತ್ತಿಲ್ಲ ಎಂದರು. ದುಡಿಯುವ ಮನಸ್ಸು ಎಲ್ಲರದ್ದಾಗಬೇಕು. ಪ್ರಾವಿಣ್ಯತೆ ಗಳಿಸಿಕೊಂಡು ಪ್ರತಿಯೊಂದು ಕ್ಷೇತ್ರದಲ್ಲಿ ಮುನ್ನುಗ್ಗಬೇಕು ಎಂದರು.

ಭ್ರಷ್ಟಾಚಾರದ ವಿರುದ್ಧ ಸಿಡಿದೇಳಬೇಕು. ನ್ಯಾಯದ ಪಕ್ಷಪಾತಿ ಆಗಬೇಕು. ದಾಸೋಹ ಭಾವನೆ ಎಲ್ಲರಲ್ಲಿ ಬರಬೇಕು ಎಂದರು. ಬಸವಣ್ಣನವರ ಘನತೆ ಹೆಚ್ಚಾಗಲು ನಾವೂ ಅಧ್ಯಾತ್ಮಿಕವಾಗಿ ಎತ್ತರಕ್ಕೆ ಏರಬೇಕಾಗುತ್ತದೆ. ಬಸವಣ್ಣನವರ ತತ್ವದ ಕೊಲೆ ಅವರ ಅನುಯಾಯಿಗಳಿಂದಲೇ ಆಗುತ್ತಿದೆ ಎಂದು ಕಿಡಿ ಕಾರಿದರು. ಮಠಾಧೀಶರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಮಾಜ ಸೇವೆ ಮಾಡಬೇಕು ಎಂದು ಹೇಳಿದರು.

ರಾಷ್ಟ್ರೀಯ ರೈತ ಸಂಘಗಳ ಒಕ್ಕೂಟದ ಅಧ್ಯಕ್ಷ ಬಸವರಾಜ ತಂಬಾಕೆ, ಭಾಲ್ಕಿ ಬಸವಲಿಂಗ ಪಟ್ಟದ್ದೇವರು, ಶಿವರಾಜ ಪಾಟೀಲ ಮಾತನಾಡಿದರು. ಡಾ.ಶಿವಗಂಗಾ ರುಮ್ಮಾ ಆರ್ಥಿಕ ಸಮಾನತೆಗೆ ಕಾಯಕ ಸೂತ್ರ ಕುರಿತು ಉಪನ್ಯಾಸ ನೀಡಿದರು.

ಚಿತ್ರದುರ್ಗ ಬಸವ ಮಾಚಿದೇವ ಸ್ವಾಮಿ ಉಪಸ್ಥಿತರಿದ್ದರು. ಚನ್ನಬಸವ ಶರಣರು, ಮಾಣಿಕಪ್ರಭು ಸೋನಾರ, ನಿವೇದಿತಾ ಪಾಟೀಲ ವಚನ ಸಂಗೀತ ಹಾಡಿದರು. ಕಾಶಿನಾಥ ಗೋಕಳೆ ಸ್ವಾಗತಿಸಿದರು. ವಿಜಯಲಕ್ಷ್ಮಿ ಗಡ್ಡೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT