ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಟಗಿ:ಗಂಗೆಸ್ಥಳಕ್ಕೆ ಇಂದು

Last Updated 22 ಅಕ್ಟೋಬರ್ 2012, 6:00 IST
ಅಕ್ಷರ ಗಾತ್ರ

ಕಾರಟಗಿ: ಇಲ್ಲಿಯ ಜೆಪಿ ನಗರದ ಶ್ರೀದೇವಿ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವವು ವೈಭವದಿಂದ ನಡೆದಿದೆ. ಸೋಮವಾರ ದುರ್ಗಾಷ್ಠಮಿ ನಿಮಿತ್ಯ ಗಂಗೆಸ್ಥಳಕ್ಕೆ ಹೋಗಿಬರುವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ.

ಡೊಳ್ಳು, ತಾಷಾ, ವಾದ್ಯಮೇಳ, ಭಜನೆಗಳೊಂದಿಗೆ ಪೂರ್ಣಕುಂಭ ಹೊತ್ತ ಮಹಿಳೆಯರೊಂದಿಗೆ ಶರಣಬಸವೇಶ್ವರ ದೇವಾಲಯದಿಂದ ಗಂಗೆಸ್ಥಳದ ಕಾರ್ಯಕ್ರಮ ಆರಂಭಗೊಳ್ಳಲಿದೆ. ಹಳೆಯ ನಾಡಕಛೇರಿ ರಸ್ತೆ, ರಾಜ್ಯ ಹೆದ್ದಾರಿ, ಕನಕದಾಸ ವೃತ್ತ, ನವಲಿ ರಸ್ತೆ ಮಾರ್ಗವಾಗಿ ದೇವಾಲಯ ತಲುಪಲಿದೆ.

ಬೆಳಿಗ್ಗೆ ದೇವಾಲಯದಲ್ಲಿ ವಿಶೇಷ ಪೂಜೆ ಅಲಂಕಾರ ಸಹಿತ ವಿವಿಧ ದಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯುವುದು. ಬುಧವಾರ 11 ಜೋಡಿ ಸಾಮೂಹಿಕ ವಿವಾಹಗಳು, ಗುರುವಾರ ರಥೋತ್ಸವ ನಡೆಯಲಿದೆ. ಮಹಿಳೆಯರೇ ರಥ ಎಳೆಯುವುದು ಇಲ್ಲಿಯ ವಿಶೇಷವಾಗಿದೆ.

ಇಲ್ಲಿಯ ವೆಂಕಟೇಶ್ವರ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವ ಆರಂಭಗೊಂಡಿದ್ದು, ಪ್ರತಿದಿನ ನಂದಾದೀಪ, ಪಂಚಾಮೃತಾಭಿಷೇಕ, ನೈವೇದ್ಯ, ಸಂಜೆ ವೆಂಕಟೇಶ್ವರ ಮಹಾತ್ಮೆ ಪುರಾಣ ಪ್ರವಚನ ನಡೆಯಲಿದೆ. ಮಂಗಳವಾರ ರಥೋತ್ಸವ ನಡೆಯಲಿದೆ.

ಇಲ್ಲಿಯ ಸಾಲೋಣಿಯಲ್ಲಿಯ ಹುಲಿಗೆಮ್ಮ ದೇವಾಲಯದಲ್ಲಿ ಪ್ರತಿದಿನ ಬೆಳಿಗ್ಗೆ ವಿಶೇಷ ಅಲಂಕಾರ, ಕುಂಕುಮಾರ್ಚನೆ, ಪುಷ್ಪಾರ್ಚನೆ, ನೈವೇದ್ಯ, ಮಹಾಮಂಗಳಾರತಿ ಕಾರ್ಯಕ್ರಮಗಳು ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT