ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರಕ್ಕೆ ರಾತ್ರಿ ರೈಲು ಬೇಕು

Last Updated 26 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರಿನಿಂದ ಕಾರವಾರಕ್ಕೆ ಈಗ ವಾರದಲ್ಲಿ ಮೂರು ದಿನ ಹಗಲು ರೈಲು (ಬೆಳಿಗ್ಗೆ 7.30ಕ್ಕೆ) ಸಂಚರಿಸುತ್ತಿದೆ. ಆದರೆ ಅದು ಕುಂದಾಪುರಕ್ಕೆ ಬರುವಾಗ ರಾತ್ರಿ 8.45 ಆಗಿರುತ್ತದೆ. ಅಲ್ಲಿಂದ ಬೈಂದೂರು, ಭಟ್ಕಳ ಮೂಲಕ  ಕಾರವಾರಕ್ಕೆ ಬರುವ ವೇಳೆಗೆ ರಾತ್ರಿ 10 ಗಂಟೆ ದಾಟಿರುತ್ತದೆ. ಅಲ್ಲಿಂದ ಸುತ್ತಮುತ್ತಲ ಊರುಗಳಿಗೆ ಹೋಗುವ ಪ್ರಯಾಣಿಕರಿಗೆ ಬಸ್ಸಿನ ಅನುಕೂಲತೆಗಳಿಲ್ಲ. ಹೀಗಾಗಿ ಹಗಲು ರೈಲಿನಲ್ಲಿ ಸಂಚರಿಸಲು ಜನರು ಹಿಂಜರಿಯುತ್ತಾರೆ.

ಆದರೆ ಬೆಂಗಳೂರಿನಿಂದ ರಾತ್ರಿ ರೈಲು ಆರಂಭವಾದರೆ ಬೆಳಗಿನ ವೇಳೆಗೆ ಕುಂದಾಪುರ, ಬೈಂದೂರು, ಭಟ್ಕಳ, ಕಾರವಾರಗಳಲ್ಲಿ ಇಳಿದು ತಂತಮ್ಮ ಊರುಗಳಿಗೆ ಹೋಗುವ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ರೈಲ್ವೆ ಇಲಾಖೆಯ  ಅಧಿಕಾರಿಗಳು ಜನ ಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳು ಇದರ ಬಗ್ಗೆ ಗಮನಹರಿಸಿ ರಾತ್ರಿ ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT