ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಕಳ: ಈದು ಕಂಬಳ ಸಂಪನ್ನ

Last Updated 16 ಫೆಬ್ರುವರಿ 2012, 6:15 IST
ಅಕ್ಷರ ಗಾತ್ರ

ಕಾರ್ಕಳ: ತಾಲ್ಲೂಕಿನ ಈದು ಮುಜಿಲ್ನಾಯ ದೈವಸ್ಥಾನದ ಬಾಕಿಮಾರು ಗದ್ದೆಯಲ್ಲಿ ಸಡಗರದಿಂದ ನಡೆದ ಜಯ-ವಿಜಯ ಜೋಡುಕರೆ ಕಂಬಳ ಭಾನುವಾರ ಸಂಪನ್ನಗೊಂಡಿತು.

ಸಮಾರೋಪದಲ್ಲಿ ಮೂಲ್ಕಿ ಮೂಡಬಿದಿರೆ ಶಾಸಕ ಅಭಯಚಂದ್ರ ಜೈನ್, ಇರ್ವತ್ತೂರು ಭಾಸ್ಕರ ಎಸ್.ಕೋಟ್ಯಾನ್, ಅಶೋಕ್ ಕುಮಾರ್ ಜೈನ್, ಜಯರಾಜ್ ಕಾಜವ, ಜಯವರ್ಮ ಜೈನ್ ಮಾಪಾಲು ಪಾಲ್ಗೊಂಡಿದ್ದರು. ತೀರ್ಪುಗಾರರಾಗಿ ಎಡ್ತೂರು ರಾಜೀವ ಶೆಟ್ಟಿ, ವಿಜಯ ಕುಮಾರ್ ಕಂಗಿನಮನೆ, ಸುಧಾಕರ ಶೆಟ್ಟಿ ಮುಗೆರೋಡಿ, ರೆಂಜಾಳದ ಅಪ್ಪು ಯಾನೆ ವಲೇರಿಯನ್ ಡೇಸಾ, ಪಂಜಾಳ ಸತೀಶ್ ಶೆಟ್ಟಿ, ಬಂಗಾಡಿ ಸುಧೀಶ್ ಕುಮಾರ್ ಆರಿಗ, ಸಿ.ಪಿ.ಅಧಿಕಾರಿ, ಅಜಿತ್ ಕುಮಾರ್ ಕೊಕ್ರಾಡಿ ಸಹಕರಿಸಿದರು.

ಕಂಬಳ ಫಲಿತಾಂಶ: ಕನೆಹಲಗೆ: ಸುರತ್ಕಲ್ ಸರ್ವೋತ್ತಮ ಮಾಧವ ಪ್ರಭು (ಓಡಿಸಿದವರು-ಪಣಪಿಲ ರಾಜವರ್ಮ ಮುದ್ಯ)-1. ಹಗ್ಗ ಹಿರಿಯ: ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್ ಎ (ಕೊಳಕೆ ಇರ್ವತ್ತೂರು ಆನಂದ)-1. ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್ ಬಿ - (ಮಾರ್ನಡ್ ರಾಜೇಶ್)-2; ಹಗ್ಗ ಕಿರಿಯ: ಕಾಂತಾವರ ಅಂಬೋಡಿಮಾರ್ ರಘುನಾಥ ದೇವಾಡಿಗ (ಬಂಗಾಡಿ ಪೊಡುಂಬ ಬಾಲಕೃಷ್ಣ ಗೌಡ)-1. ಬಾರ್ಕೂರು ಶಾಂತರಾಮ ಶೆಟ್ಟಿ (ಮಾಳ ಕಲ್ಲೇರಿ ಭರತ್‌ರಾಜ್ ಶೆಟ್ಟಿ)-2. ಅಡ್ಡ ಹಲಗೆ: ಮುಡಾರು ಶಾಂತಾಜೆ ರತ್ನವರ್ಮ ಜೈನ್ (ಮುಳಿಕಾರು ಕಿವುಡೇಲು ಅಣ್ಣಿ ದೇವಾಡಿಗ)-1. ಈದು ಮಕ್ಕಿಲ ಸನತ್ ಕುಮಾರ್ ಜೈನ್ (ನಾರಾವಿ ಯುವರಾಜ್ ಜೈನ್)-2. ನೇಗಿಲು ಹಿರಿಯ: ಅಲೆವೂರು ತೆಂಕುಮನೆ ರಾಘು ಶೆಟ್ಟಿ (ಕಡಂದಲೆ ಪ್ರಸಾದ್)-1;  ಮಾಳ ಹೊಸಮನೆ ರಘುರಾಮ ಶೆಟ್ಟಿ (ಬೆಳುವಾಯಿ ಪ್ರಕಾಶ್)-2. ನೇಗಿಲು ಕಿರಿಯ: ಅತ್ತೂರು ಗುಂಡ್ಯಡ್ಕ ಅಂಗದ್ ಕಾಮತ್ (ಒಕ್ಕಾಡಿ ಹಕ್ಕೇರಿ ಸುರೇಶ್ ಶೆಟ್ಟಿ)-1. ಮಾತಿಬೆಟ್ಟು ಶಾಂತಿರಾಜ್ ಜೈನ್ (ಮರೋಡಿ ಲಕ್ಷ್ಮಣ)-2.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT