ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಕಳ: ಪುರಸಭೆಯಿಂದ ತ್ವರಿತ ಕೆಲಸ

Last Updated 1 ಜೂನ್ 2011, 8:35 IST
ಅಕ್ಷರ ಗಾತ್ರ

ಕಾರ್ಕಳ(ಬಜಗೋಳಿ): ಪುರಸಭಾ ಸದಸ್ಯರು ಕಾರ್ಕಳ ಮುಖ್ಯರಸ್ತೆ ಮತ್ತು ವಾರ್ಡ್ ರಸ್ತೆಗಳ ದುರಸ್ತಿಗೆ ಒತ್ತಾಯಿಸಿ ವಾರಗಟ್ಟಲೆ ಕಾದರೂ ಕೆಲಸ ಆಗುವುದಿಲ್ಲ ಎನ್ನುವ ಪರಿಸ್ಥಿತಿಯಲ್ಲಿ ರಿಕ್ಷಾ ಚಾಲಕರು ಇದೇ ಪುರಸಭೆ ಕೈಯಲ್ಲಿ ಮೂರೇ ದಿನಗಳಲ್ಲಿ ಕಾಮಗಾರಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಕಳ ಆನೆಕೆರೆ ಬಳಿ ಅಕ್ರಮ ಅಂಗಡಿಗಳನ್ನು ಭಾಗಶಃ ತೆರವುಗೊಳಿಸಿದ ಸ್ಥಳದಲ್ಲಿ ಪುರಸಭೆ ಫಟಾಫಟ್ ರಸ್ತೆಗೆ ಡಾಂಬರೀಕರಣ ಕೆಲಸಕ್ಕೆ ಆರಂಭಿಸಿದ್ದು ರಿಕ್ಷಾ ಚಾಲಕರ ಕ್ಷಿಪ್ರ ಬೇಡಿಕೆಗೆ ಆದ್ಯತೆಯಿಂದ ಪರಿಹಾರ ನೀಡಿದೆ. ಹಳೆಯ ಕಾಮಗಾರಿಗಳು ಮತ್ತು ಪುರಸಭಾ ವಾರ್ಡ್‌ಗಳಲ್ಲಿ ಪುರಸಭಾ ಸದಸ್ಯರೇ ನಿರಂತರ ಒತ್ತಾಯ ನಡೆಸಿದರೂ ಪುರಸಭಾಡಳಿತ ಈ ಪರಿ ತರಾತುರಿ ತೋರಿದ್ದಿಲ್ಲ.

ಅಂತೂ ಪುರಸಭಾ ಸದಸ್ಯರಾಗಿರುವುದಕ್ಕಿಂತ ರಿಕ್ಷಾ ಚಾಲಕರಾಗಿದ್ದರೆ ಪುರಸಭೆಯ ಕೈಯಲ್ಲಿ ಕೆಲಸ ಮಾಡಿಸಿಕೊಳ್ಳಬಹುದು ಎಂದು ಸದಸ್ಯ ಪ್ರಕಾಶ್ ರಾವ್ ಪ್ರತಿಕ್ರಿಯಿಸಿದ್ದಾರೆ.

ಆನೆಕೆರೆ ಬಳಿ ಪುರಸಭೆ ಅಕ್ರಮ ಅಂಗಡಿಗಳನ್ನು ತೆರವುಗೊಳಿಸಿದ ಜಾಗವನ್ನು ಸರಿಪಡಿಸಿದೆ ಹಾಗೇ ಬಿಟ್ಟಿತ್ತು. ಆದರೆ ಅಲ್ಲಿ ರಸ್ತೆ ವಿಸ್ತರಿಸಿ ಡಾಂಬರೀಕರಣ ಕೈಗೊಳ್ಳುವಂತೆ ರಿಕ್ಷಾಚಾಲಕರು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ನಡೆಸಿ ಸರಿಯಾಗಿ 3 ದಿನಗಳ ಒಳಗಾಗಿ   ಟೆಂಡರ್ ಪ್ರಕ್ರಿಯೆಗಾಗಿಯೂ ಕಾಯದೆ ಸುಮಾರು 7 ಲಕ್ಷ ಕಾಮಗಾರಿಯನ್ನು ಪುರಸಭೆ ಆರಂಭಿಸಿತ್ತು.

ಕಳೆದ ಒಂದು ತಿಂಗಳ ಹಿಂದೆ ಕಾರ್ಕಳ ಪುರಸಭಾ ಸದಸ್ಯರಾದ ಪ್ರಕಾಶ್ ರಾವ್ ಮತ್ತು ರವೀಂದ್ರ ಮೊಯಿಲಿ ಸಾರ್ವಜನಿಕರೊಂದಿಗೆ ಪುರಸಭಾ ಸಭಾಂಗಣದಲ್ಲಿ ತಕ್ಷಣ ರಸ್ತೆ ದುರಸ್ತಿಗೆ ಆಗ್ರಹಿಸಿ ಧರಣಿ ಕುಳಿತು ಬಳಿಕ ಪುರಸಭಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT