ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ಮಕ್ಕಳ ಸಿನಿಮಾ

Last Updated 11 ಜೂನ್ 2012, 19:30 IST
ಅಕ್ಷರ ಗಾತ್ರ

`ಮಾನವೀಕರಿಸಿ ಜಗವ, ಮಕ್ಕಳೀಕರಿಸಿ ಜಗವ~ ಎನ್ನುವ ಧ್ಯೇಯವನ್ನಿಟ್ಟುಕೊಂಡು ಮಕ್ಕಳಿಗಾಗಿ ಒಂದು ಸಿನಿಮಾ ರಚನೆಯಾಗಿದೆ. 26 ನಿಮಿಷಗಳ ಸಿನಿಮಾದಲ್ಲಿ ಬಾಲ ಕಾರ್ಮಿಕ ಮಕ್ಕಳ ನೋವು, ಸಂಕಟ, ಆ ಕಾರ್ಯಕ್ಕೆ ನೂಕಿದವರಿಗೆ ಒಂದು ನೀತಿ ಪಾಠ ಅಡಗಿದೆ.

`ಟ್ವಿನ್ಸ್ ರಿವೀಲಿಂಗ್ ದಿ ಮಿಥ್ ಆಫ್ ಚೈಲ್ಡ್ ಲೇಬರ್~ ಚಿತ್ರ ಬಾಲ ಕಾರ್ಮಿಕ ಮಕ್ಕಳ ಬವಣೆಗಳನ್ನು ಚಿತ್ರಿಸುತ್ತದೆ. ಕಲಾನಿರ್ದೇಶಕ ಜಾನ್ ದೇವರಾಜ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ಇಬ್ಬರು ಮಕ್ಕಳ ಜೀವನದ ಸುತ್ತ ಹೆಣೆಯಲಾಗಿದೆ.

`ಉಳ್ಳವರ ಮಕ್ಕಳಂತೇ ಇತರ ಮಕ್ಕಳನ್ನೂ ಕಾಣಬೇಕು. ಮಕ್ಕಳನ್ನು ದುಡಿಸಿಕೊಳ್ಳುವ ಮಾಲೀಕರು ಮಾನವೀಯತೆಯನ್ನು ಕಳೆದುಕೊಂಡಿದ್ದಾರೆ. ಅಂಥವರ ಮನಃ ಪರಿವರ್ತನೆಯಾಗಬೇಕು. ಅದು ಮಕ್ಕಳಿಂದ ಮಾತ್ರ ಸಾಧ್ಯ. ಅವರ ಕಷ್ಟಗಳಿಗೆ ಸಿರಿವಂತ ಮಕ್ಕಳೇ ಸ್ಪಂದಿಸಬೇಕು. ಎಲ್ಲರೂ ಎಲ್ಲರಿಂದಲೂ ಕಲಿಯುವಂತಾಗಬೇಕು ಎಂಬುದು ಈ ಚಿತ್ರದ ಉದ್ದೇಶ~ ಎನ್ನುತ್ತಾರೆ ಜಾನ್ ದೇವರಾಜ್. 


ಶಾಲಾ ಪಠ್ಯಕ್ರಮದಲ್ಲೂ ಬಾಲ ಕಾರ್ಮಿಕ ಪದ್ಧತಿಯನ್ನು ತೊಲಗಿಸುವಂತಹ ವಿಷಯಗಳನ್ನು ಅಳವಡಿಸಬೇಕು. ಚಿತ್ರ ಬಿಡುಗಡೆಯಾದ ನಂತರ ನಗರದ ಎಲ್ಲಾ ಶಾಲೆಗಳಲ್ಲೂ ಇದನ್ನು ಪ್ರದರ್ಶಿಸಬೇಕು ಎಂಬುದು ಸಂಘಟಕರ ಆಶಯ. ಬಾರ್ನ್ ಫ್ರೀ ಆರ್ಟ್ ಶಾಲೆ ಚಿತ್ರ ನಿರ್ಮಾಣ ಮಾಡಿದೆ. ರಸೀಲಾ ಮತ್ತು ಗಬ್ರೀಲಾ ಸಹೋದರಿಯರ ಪಾತ್ರದಲ್ಲಿ ನಟಿಸಿದ್ದಾರೆ. 

ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವಾದ ಇಂದು (ಜೂ.12) ಈ ಚಿತ್ರ ಪ್ರದರ್ಶನಗೊಳ್ಳಲಿದೆ.

ಸ್ಥಳ: ಕೆ. ಎಚ್. ಕಲಾಸೌಧ, ಹನುಮಂತನಗರ. ಬೆಳಿಗ್ಗೆ 11ಕ್ಕೆ. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT