ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ಮುಷ್ಕರ; 6 ವಾರ ಜೈಲು

Last Updated 4 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ಸಿಂಗಪುರ (ಪಿಟಿಐ): ಚೀನಾ ಮೂಲದ ಬಸ್ ಚಾಲಕನೊಬ್ಬನಿಗೆ ಸಿಂಗಪುರ ಕೋರ್ಟ್ ಆರು ವಾರಗಳ ಕಾಲ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಬೊ ಫೆಂಗ್ ಶಾನ್ (38) ಎಂಬ ಕಾರ್ಮಿಕ ಮುಷ್ಕರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕೆ ಕೋರ್ಟ್ ಆತನಿಗೆ ಈ ಶಿಕ್ಷೆ ವಿಧಿಸಿದೆ. ಕಳೆದ 26 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನವೆಂಬರ್ 26ರಂದು ಎಸ್‌ಎಂಆರ್‌ಟಿ ಕಂಪೆನಿಯ ಕಾರ್ಮಿಕರು ಮುಷ್ಕರ ಹಮ್ಮಿಕೊಂಡಿದ್ದರು. ಮುಷ್ಕರ ವಾಪಸು ಪಡೆಯುವಂತೆ  ಕಂಪೆನಿ ಸೂಚಿಸಿದರೂ ಮರುದಿನವೂ ಮುಷ್ಕರ ಮುಂದುವರೆಸಿದ್ದರು.

ಮುಷ್ಕರದಿಂದಾಗಿ ಸಾರಿಗೆ ಸಂಪರ್ಕಕ್ಕೆ ಅಡ್ಡಿಯಾಗಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಎಂದು ಕೋರ್ಟ್ ಹೇಳಿದೆ. ಶಿಕ್ಷೆಗೆ ಗುರಿಯಾದ ವ್ಯಕ್ತಿ ಜೊತೆಯಲ್ಲಿದ್ದ ಚೀನಾ ಮೂಲದ ನಾಲ್ಕು ಕಾರ್ಮಿಕರನ್ನು ಬಂಧಿಸಿ ಸೆರೆಯಲ್ಲಿಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT