ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ದನಿ ಪಾರ್ವತಿ ಕೃಷ್ಣನ್‌

Last Updated 3 ಏಪ್ರಿಲ್ 2014, 20:15 IST
ಅಕ್ಷರ ಗಾತ್ರ

ತಮಿಳುನಾಡಿನ ಕಮ್ಯುನಿಸ್ಟ್ ನಾಯಕಿ ಪಾರ್ವತಿ ಕೃಷ್ಣನ್‌ ಮೂರು ಸಲ ಲೋಕಸಭೆಗೆ, ಒಂದು ಸಲ ರಾಜ್ಯ ಸಭೆಗೆ ಆಯ್ಕೆ­ಯಾ­ಗಿ­­ದ್ದರು. 1919 ರಲ್ಲಿ ಜನಿಸಿದ 94 ವರ್ಷ ಬದು­­ಕಿದ್ದ ಅವರು ಕೇರಳದಲ್ಲಿ ಕಾರ್ಮಿಕ ಚಳ­ವಳಿಯ ನೇತೃತ್ವ ವಹಿಸಿ­ದ್ದರು.

ಆಕ್ಸ್‌ಫರ್ಡ್‌ನಲ್ಲಿ ಬಿ.ಎ ಆನರ್ಸ್  ನಂತರ ಸಿಪಿಐ ಸೇರಿ­ದರು. 1950­ರ ಸುಮಾರಿಗೆ ಪಾರ್ವತಿ ಕೃಷ್ಣನ್‌  ಮತ್ತು ಅವರ ಪತಿ ಎನ್.ಕೃಷ್ಣನ್‌ ಕೊಯಮತ್ತೂರಿನ ವಾಳ್ಪರೆ ಭಾಗದ ಜವಳಿ ಮಿಲ್‌ ಮತ್ತು ಚಹಾ ತೋಟ­ಗಳ ಕಾರ್ಮಿಕರ ಮಧ್ಯೆ ಕೆಲಸ ಮಾಡಿ ಅವರ ಹಕ್ಕುಗಳಿ­ಗಾಗಿ ಹೋರಾಡಿ­ದರು.

ಅಲ್ಲಿನ ಮಿಲ್‌ ಕೆಲಸ­ಗಾರರ ಸಂಬಳ ಕುರಿತು ಇವರು ನಡೆಸಿದ ಹೋರಾಟ ಇಂದಿಗೂ ಗಮನಾರ್ಹ.ಲಂಡನ್‌ನಲ್ಲಿ ಉನ್ನತ ಅಧ್ಯಯನ ನಡೆಸಿದರು. ಸಾಕಷ್ಟು ಶ್ರೀಮಂತ ಕುಟುಂಬದಿಂದ ಬಂದ ಪಾರ್ವತಿ ಅವರು 80 ವರ್ಷ ತುಂಬುವವರೆಗೂ ಬಸ್‌ನಲ್ಲೇ ಪ್ರಯಾಣ ಮಾಡುತ್ತಿದ್ದರು.

ಪಾರ್ವತಿ ತುಂಬಾ ಓದುವ ಹವ್ಯಾಸ ಹೊಂದಿದ್ದರು. ಅವರ ಮನೆ ಎಲ್ಲಾ ರೀತಿಯ ಜನರಿಗೆ ಸದಾ ತೆರೆದಿರುತ್ತಿತ್ತು. ಇವರ ಸಹೋದರ ಮೋಹನ ಕುಮಾರ ಮಂಗಳಂ, ಇಂದಿರಾ ಗಾಂಧಿ ಸಂಪುಟ­­ದಲ್ಲಿ ಮಂತ್ರಿಯಾಗಿದ್ದರು. ಇವರು ರಾಜಕೀಯಕ್ಕೆ ಬಂದಾಗ ಇವರ ಕುಟುಂಬದವರು ಹೊಂದಿದ್ದ 5,000 ಎಕರೆ ಭೂಮಿ­ಯನ್ನು ಭೂರಹಿತರಿಗೆ ಹಂಚಲಾಯಿತು.


ಪಾರ್ವತಿ ಅವರು 1954ರಲ್ಲಿ ರಾಜ್ಯಸಭೆ ಪ್ರವೇಶಿಸಿದರು. ಮಹಿಳಾ ಹಕ್ಕುಗಳ ಹೋರಾಟ­ದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರ 1957 ಮತ್ತು 1977ರಲ್ಲಿ ಕೊಯಮತ್ತೂರಿನಿಂದ ಲೋಕ­ಸಭೆಗೆ ಆಯ್ಕೆಯಾಗಿದ್ದರು. 1974ರ ಉಪ­ಚುನಾವಣೆ­ಯಲ್ಲಿ ಕೂಡ ಗೆದ್ದು ಲೋಕ­ಸಭೆ ಪ್ರವೇಶಿಸಿ­ದ್ದರು.

ಮಹಿಳೆಯರ ಘನತೆಯ ವಿಷಯ ಬಂದರೆ ಬೆಂಕಿಯಾಗು­ತ್ತಿದ್ದ ಪಾರ್ವತಿ, ಲೋಕಸಭೆಯಲ್ಲಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಮಹಿಳೆಯ ಬಗ್ಗೆ ಹಗುರವಾಗಿ ಮಾತನಾಡಿ­ದಾಗ ಕ್ಷಮೆ ಕೇಳು­ವಂತೆ ಮಾಡಿದ್ದರು! ಮಹಿಳೆ­ಯರು ಸಾರ್ವ­ಜನಿಕ ರಂಗದಲ್ಲಿ ಮುಂದೆ ಬರಬೇಕು, ಅವರೇ ಉಳಿದವರಿಗೆ ಮಾದರಿಯಾಗ­ಬೇಕು ಎಂದೂ  ಅವರು ಪ್ರತಿಪಾದಿಸುತ್ತಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT