ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಕರ್ತರ ಮೇಲಿದ್ದ ಮೊಕದ್ದಮೆ ವಜಾ

Last Updated 11 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಚನ್ನಪಟ್ಟಣ: ರೇಷ್ಮೆ ಬೆಳೆಗಾರರನ್ನು ಬೆಂಬಲಿಸಿ ಪ್ರತಿಭಟಿಸಿ ಬಂಧನಕ್ಕೊಳಗಾಗಿ ಜೈಲು ಸೇರಿದ್ದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯ ಘಟಕ ರಮೇಶ್‌ಗೌಡ ಹಾಗೂ ನೂರಾರು ಕಾರ್ಯಕರ್ತರ ಮೇಲಿದ್ದ ಎಲ್ಲಾ ಮೊಕದ್ದಮೆಗಳನ್ನು ವಜಾಗೊಳಿಸಿದ್ದಲ್ಲದೆ ರೇಷ್ಮೆ ಗೂಡು ಧಾರಣೆಯ ಪ್ರತಿ ಕೆ.ಜಿ.ಗೆ 30ರೂ ಬೆಂಬಲ ಬೆಲೆ ಘೋಷಿಸಿದ ಸರ್ಕಾರದ ಕ್ರಮವನ್ನು ಶ್ಲಾಘಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿ ಗುರುವಾರ ವಿಜಯೋತ್ಸವ ಆಚರಿಸಿದರು.

ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ವಿಜಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ರಾಜ್ಯ ಸರ್ಕಾರ ರೇಷ್ಮೆ ಗೂಡು ಧಾರಣೆಯ ಪ್ರತಿ ಕೆ.ಜಿ.ಗೆ 30ರೂ ಬೆಂಬಲ ಬೆಲೆ ಘೋಷಿಸಿದೆ, ಈ ನಿಗಧಿತ ಬೆಲೆ ಪ್ರತಿ ಕೆ.ಜಿ.ಯ 160ರೂ ಆಗಬೇಕು ಎಂದು ಆಗ್ರಹಿಸಿದರು.

ಸಂಕಷ್ಟದಲ್ಲಿರುವ ರೇಷ್ಮೆ ಬೆಳೆಗಾರರು ರೇಷ್ಮೆ ಗೂಡಿಗೆ ಸರ್ಕಾರ ನೀಡುತ್ತಿರುವ 30ರೂ ಬೆಂಬಲ ಬೆಲೆ ಗೂಡಿನ ದರ ಎಷ್ಟೆ ಬೆಲೆಗೆ ಹೋದರೂ ಈ ಬೆಲೆ ನಿಗಧಿಯಾಗಬೇಕು. ಅಲ್ಲದೆ ಈಗಿರುವ 30ರೂ ಬೆಂಬಲ ಕನಿಷ್ಠ 100ರೂ ನೀಡಿ ರೇಷ್ಮೆ ಬೆಳೆಗಾರರಿಗೆ ಸ್ಪಂದಿಸಬೇಕೆಂದು ಆಗ್ರಹ ಪಡಿಸಿದರು.

ರೈತರಿಗೆ ಅನ್ಯಾಯವಾಗುತ್ತಿರುವುದ ಘಟಿಸಿ  ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಳೆ ಭಾನುವಾರ ರಸ್ತೆ ತಡೆಯಲ್ಲಿ ಭಾಗವಹಿಸಿದವರನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿಟ್ಟಿದ್ದನ್ನು ಅವರು ಖಂಡಿಸಿದರು.

ಈ ಸಂದರ್ಭದಲ್ಲಿ ಹಿರಿಯ ಕನ್ನಡ ಪರ ಹೋರಾಟಗಾರ ಸಿಂ.ಲಿಂ. ನಾಗರಾಜು, ಜೆಡಿಎಸ್ ಮುಖಂಡರುಗಳಾದ ಗರಕಹಳ್ಳಿ ಕೃಷ್ಣೇಗೌಡ, ಧರಣೇಶ್ ರಾಂಪುರ,  ಮರಿ ಅಂಕೇಗೌಡ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮಂಗಳಮ್ಮ ,ಕೋಶಾಧ್ಯಕ್ಷೆ ಕೆ.ಟಿ. ಲಕ್ಷ್ಮಮ್ಮ, ತಾಲ್ಲೂಕು ಘಟಕದ ಅಧ್ಯಕ್ಷ ಬೇವೂರು ಯೋಗೀಶ್, ಮುದಗೆರೆ ಗ್ರಾ.ಪಂ. ಸದಸ್ಯ ಜೆ.ಕೆ. ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ಟ್ಯಾಕ್ಸಿ ಘಟಕದ ಅಧ್ಯಕ್ಷ ಮೆಂಗಳ್ಳಿ ಮಹೇಶ್, ಯುವ ಘಟಕದ ಜಿಲ್ಲಾಧ್ಯಕ್ಷರು ರಂಜಿತ್‌ಕುಮಾರ್, ಬೋರ್‌ವೆಲ್ ಪುಟ್ಟು ಮೊಗೇನಹಳ್ಳಿ ತಿಮ್ಮೇಗೌಡ, ತ್ರಿಪುರ ಸುಂದರ, ಅತಗೂರು ಹೋಬಳಿ ಘಟಕದ ಅಧ್ಯಕ್ಷರು ಕಾರ್ಯಕರ್ತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT