ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯವೈಖರಿ ಬದಲಾಗಲಿ

Last Updated 3 ಫೆಬ್ರುವರಿ 2011, 15:50 IST
ಅಕ್ಷರ ಗಾತ್ರ


‘ನನ್ನನ್ನು ಕೊಲ್ಲಿಸಲು ಮಾಟ ಮಾಡಿಸುತ್ತಿದ್ದಾರೆ’ - ಮುಖ್ಯಮಂತ್ರಿ ಅವರ ಈ ಮಾತು ಕೇಳಿ ನಗಬೇಕೋ? ಅಳಬೇಕೋ? ತಿಳಿಯದಾಯಿತು. ಮಾಜಿ ಪ್ರಧಾನಿ ದೇವೇಗೌಡ ಮತ್ತು ಕುಟುಂಬವೇನೂ ಈ ವಿಷಯದಲ್ಲಿ ಕಡಿಮೆ ಇಲ್ಲ. ಅವರೂ ಕೂಡ ಹೋರಾಟದ ಮೂಲಕ ಜನರ ಬಳಿ ಹೋಗಿ ಸರ್ಕಾರದ ವಿರುದ್ಧ ಹೋರಾಡುವುದರ ಬದಲು ಬರೀ ಹೋಮ - ಹವನ ಪೂಜೆಗಳಲ್ಲೇ ನಿರತರಾಗಿದ್ದಾರೆ.

ಯಡಿಯೂರಪ್ಪನವರಿಗೆ ಜನರು ಅಧಿಕಾರ ನೀಡಿದ್ದೇಕೆ? ಪೂಜೆ ಪುನಸ್ಕಾರ ಮಾಡಿಕೊಂಡು ಗುಡಿ - ಗುಂಡಾರ ಸುತ್ತುವುದಕ್ಕೋ ಅಥವಾ ಆಡಳಿತ ನಡೆಸುವುದಕ್ಕೋ ತಿಳಿಯದು. ನಮ್ಮ ಸಂವಿಧಾನವೇ ವೈಜ್ಞಾನಿಕ - ವೈಚಾರಿಕ ಮನೋಭಾವಕ್ಕೆ ಒತ್ತು ನೀಡಿರುವಾಗ ಮುಖ್ಯಮಂತ್ರಿಯಾದವರು ಮೂಢನಂಬಿಕೆಗೆ ಬಲಿಯಾಗುವುದು ಎಂಥ ವಿಪರ್ಯಾಸ? ರಾಜಕಾರಣಿಗಳ ಇಂಥ ಅಸಂಬದ್ಧ ವರ್ತನೆಗಳಿಂದ ನಮಗೆ ಮುಕ್ತಿ ಎಂದು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT