ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಾಗಾರ ತರಬೇತಿ ಶಿಬಿರ

Last Updated 24 ಜನವರಿ 2011, 19:30 IST
ಅಕ್ಷರ ಗಾತ್ರ

ನ್ಯಾಚುರೋಪತಿ ಕಾಲೇಜು
ನಿಸರ್ಗ ಚಿಕಿತ್ಸೆ ಹಾಗೂ ಯೋಗವನ್ನು ಜನಪ್ರಿಯಗೊಳಿಸಲು ಸಾಕಷ್ಟು ಕೊಡುಗೆ ನೀಡಿರುವ ಜಿಂದಾಲ್ ನಿಸರ್ಗ ಚಿಕಿತ್ಸಾ ಸಂಸ್ಥೆ, ಈ ಕ್ಷೇತ್ರದಲ್ಲಿ ಸಂಶೋಧನೆ ನಡೆಸಲು ಅನುಕೂಲವಾಗುವಂತೆ ಸ್ನಾತಕೋತ್ತರ ಕಾಲೇಜು ಆರಂಭಿಸಿದೆ. ಈ ಕಾಲೇಜಿನಲ್ಲಿ ನ್ಯಾಚುರೋಪತಿ ಹಾಗೂ ಯೋಗದಲ್ಲಿ ಎಂಡಿ ಅಧ್ಯಯನಕ್ಕೆ ಅವಕಾಶವಿದೆ.

ಮಂಗಳವಾರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಂದ ಕಾಲೇಜು ಉದ್ಘಾಟನೆ, ಅತಿಥಿಗಳು: ಆರ್. ಅಶೋಕ್, ಆರ್.ವಿ. ದೇಶಪಾಂಡೆ, ಐ.ಎಂ. ವಿಠಲ ಮೂರ್ತಿ, ಡಾ. ಎಚ್. ಆರ್. ನಾಗೇಂದ್ರ.

ಸ್ಥಳ: ಜಿಂದಾಲ್ ನೇಚರ್‌ಕ್ಯೂರ್ ಸಂಸ್ಥೆ, ತುಮಕೂರು ರಸ್ತೆ. ಸಂಜೆ 5.15

ನಾಳೆ ಗಾಳಿಪಟ ಸ್ಪರ್ಧೆ

ಬೆಂಗಳೂರು ಗಾರ್ಡನ್ ಸಿಟಿ ಜ್ಯೂನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ಬುಧವಾರ ಅರಮನೆ ಆವರಣದ ತ್ರಿಪುರವಾಸಿನಿ ಮೈದಾನದಲ್ಲಿ ‘ಆದೀಶ್ವರ ಗಾಳಿಪಟ’ ಉತ್ಸವ ಏರ್ಪಡಿಸಿದೆ. ಇದು ದಕ್ಷಿಣ ಏಷ್ಯಾದಲ್ಲೇ ಬೃಹತ್ ಗಾಳಿಪಟ ಉತ್ಸವವಾಗಿದ್ದು ದೇಶ, ವಿದೇಶಗಳ ಹವ್ಯಾಸಿಗಳು ಪಾಲ್ಗೊಳ್ಳಲಿದ್ದಾರೆ.

ಈ ಉತ್ಸವದ ಮೂಲಕ ಸಂಗ್ರಹವಾಗುವ ಹಣವನ್ನು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಲಾಗುವುದು. ದೇಣಿಗೆ ಪಾಸುಗಳು bookmyshow.com ನಲ್ಲಿ ಪಡೆಯಬಹುದು. ವಿವರಗಳಿಗೆ 3989 5050.

ವಾರ್ಷಿಕೋತ್ಸವ
ಅರಕೆರೆಯ ಶ್ರೀ ಶಾರದ ವಿದ್ಯಾನಿಕೇತನ 10ನೇ ವಾರ್ಷಿಕೋತ್ಸವದ ಅಂಗವಾಗಿ ಹಲವು ಕಾರ್ಯಕ್ರಮ ಆಯೋಜಿಸಿದೆ. ಮಂಗಳವಾರ ಬೆಳಿಗ್ಗೆ 9.30ಕ್ಕೆ ಕ್ರೀಡೋತ್ಸವ. ಬುಧವಾರ ಸಂಜೆ 5.30ಕ್ಕೆ ವಾರ್ಷಿಕೋತ್ಸವ. ಸ್ಥಳ:ಆರ್. ಆರ್. ಗಾರ್ಡನ್, ಅರಕೆರೆ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT