ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಾಗಾರ - ತರಬೇತಿ - ಶಿಬಿರ

Last Updated 28 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಸಿಂಚನ ಸ್ಪರ್ಧೆ
ಸಿಂಚನ ಸಾಂಸ್ಕೃತಿಕ ವೇದಿಕೆ ಭಾನುವಾರ ಗಾಯಕ ಗಾಯಕಿಯರಿಗಾಗಿ ಕನ್ನಡ ಚಲನಚಿತ್ರ, ಭಾವಗೀತೆ, ಜನಪದ ಗೀತೆ ಹಾಗೂ ಮಕ್ಕಳಿಗಾಗಿ ಪರಿಸರ ಕಾಳಜಿ ಕುರಿತ ಚಿತ್ರಕಲಾ ಸ್ಪರ್ಧೆ ಆಯೋಜಿಸಿದೆ.

ಸ್ಥಳ: ಲೋಕೋಪಯೋಗಿ ಕಲಾ ಮಂದಿರ (ಯವನಿಕ ಪಕ್ಕ), ಕೆ.ಆರ್. ಸರ್ಕಲ್. ಬೆಳಿಗ್ಗೆ 9. ಮಾಹಿತಿಗೆ: 91417 08656, 91416 02518.

ನವಚೇತನ ಪ್ರತಿಭೋತ್ಸವ
ನವಚೇತನ ಕಲಾನಿಕೇತನ ಸಂಸ್ಥೆಯು ಮಕ್ಕಳು, ಯುವಕರು ಹಾಗೂ ಹಿರಿಯ ಪ್ರತಿಭೆಗಳಿಗಾಗಿ ಶನಿವಾರ ಮತ್ತು ಭಾನುವಾರ ರಾಜ್ಯ ಮಟ್ಟದ ಸಾಂಸ್ಕೃತಿಕ ಪ್ರತಿಭೋತ್ಸವ ಹಮ್ಮಿಕೊಂಡಿದೆ. ಈ ಸಂದರ್ಭದಲ್ಲಿ ಪ್ರತಿಭಾವಂತರಿಗೆ `ನವಚೇತನ ಪ್ರತಿಭಾಶ್ರೀ~ ಪ್ರಶಸ್ತಿ ಹಾಗೂ ನಾಡಿನ ವಿವಿಧ ಕ್ಷೇತ್ರಗಳ ಗಣ್ಯರಿಗೆ `ನಿತ್ಯ ಚೇತನ ಪ್ರಶಸ್ತಿ~ ಪ್ರದಾನ ಮಾಡಲಾಗುವುದು.

ಗಾಯನ ವಿಭಾಗದಲ್ಲಿ ದೇವರನಾಮ, ದೇಶಭಕ್ತಿಗೀತೆ, ರಂಗಗೀತೆ, ಭಾವಗೀತೆ, ಜನಪದ ಮತ್ತು ಚಿತ್ರಗೀತೆ, ಅಭಿನಯ ವಿಭಾಗದಲ್ಲಿ ಏಕಪಾತ್ರಾಭಿನಯ, ಮೂಕಾಭಿನಯ, ವೇಷಭೂಷಣ ಸ್ಪರ್ಧೆ, ನೃತ್ಯ ವಿಭಾಗದಲ್ಲಿ ಭರತನಾಟ್ಯ, ಜನಪದ ನೃತ್ಯ, ಚಲನಚಿತ್ರ ಗೀತೆಗಳಿಗೆ ನೃತ್ಯ (ಸೋಲೋ ಹಾಗೂ ಸಮೂಹ) ಸ್ಪರ್ಧೆ ಸೇರಿದೆ. ವಾದ್ಯ ವಿಭಾಗದಲ್ಲಿ ಕೀಬೋರ್ಡ್, ವೀಣೆ ಮತ್ತು ಕೊಳಲು ನುಡಿಸಲು ಅವಕಾಶವಿದೆ. ವಿಜೇತರಿಗೆ ನವೆಂಬರ್ 12ರಂದು ಪುರಭವನದಲ್ಲಿ ಪ್ರಶಸ್ತಿ ವಿತರಿಸಲಾಗುವುದು.

ಉತ್ಸವದಲ್ಲಿ ಚಿತ್ರರಂಗದ ಖ್ಯಾತ ನಟ ನಟಿಯರು ಮತ್ತು ಗಣ್ಯರು ಭಾಗವಹಿಸಲಿದ್ದಾರೆ.
ಸ್ಥಳ: ನಯನ ಸಭಾಂಗಣ, ರವೀಂದ್ರ ಕಲಾಕ್ಷೇತ್ರ ಆವರಣ, ಜೆ.ಸಿ.ರಸ್ತೆ. ಬೆಳಿಗ್ಗೆ 11ರಿಂದ ರಾತ್ರಿ 9. ಮಾಹಿತಿಗೆ: 97382 23086, 87228 38956.

ವಿಬ್‌ಗ್ಯೋರ್ ಹೈ ಪ್ರತಿಭಾ ಶೋಧ
ಹೆಸರಾಂತ ಶೈಕ್ಷಣಿಕ ಸಂಸ್ಥೆ ವಿಬ್‌ಗ್ಯೋರ್ ಹೈ ಶನಿವಾರ ತೊದಲು ಮಾತಿನ ಮಕ್ಕಳಿಗಾಗಿ ವಿಶಿಷ್ಟ ಬಗೆಯ ಪ್ರತಿಭಾ ಶೋಧ ಕಾರ್ಯಕ್ರಮ ಏರ್ಪಡಿಸಿದೆ.

ಇಲ್ಲಿ ಪುಟ್ಟ ಮಕ್ಕಳು `ಮೆಸ್ಮರೈಸಿಂಗ್ ಐಸ್, ಟಾಂಟಲೈಜಿಂಗ್ ಸ್ಮೈಲ್, ಚಿಕ್ ಅಂಡ್ ಸ್ಟೈಲಿಷ್ ಒನ್, ಆರ್ಟಿಕ್ಯುಲೇಟ್ ಚೈಲ್ಡ್~ ಪ್ರಶಸ್ತಿ ಪಡೆದುಕೊಳ್ಳಬಹುದು.
ಸ್ಥಳ: ರಾಯಲ್ ಪ್ಲೆಸಿಡ್, ಹರಳೂರು ರಸ್ತೆ ಶಾಖೆ. ಬೆಳಿಗ್ಗೆ 9.30 ಮತ್ತು 12.30. ಮಾಹಿತಿಗೆ: 92416 28835.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT