ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುವೆ ಅಭಿವೃದ್ಧಿಗೆ ರೂ.328 ಕೋಟಿ

Last Updated 1 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಸವದತ್ತಿ: ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಮಲಪ್ರಭಾ ಯೋಜನೆಯ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳ ಅಭಿವೃದ್ಧಿಗಾಗಿ  ಕೇಂದ್ರ ಸರ್ಕಾರದಿಂದ 328 ಕೋಟಿ ರೂಪಾಯಿ ಮಂಜೂರಾಗಿದೆ.

ಈಗಾಗಲೇ ಬಲದಂಡೆಯ 44 ಕಿ.ಮೀ ಮತ್ತು ಎಡದಂಡೆಯ 15 ಕಿ.ಮೀ. ಕಾಲುವೆಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಶನಿವಾರ ಇಲ್ಲಿ ಹೇಳಿದರು.

ನವಿಲುತೀರ್ಥ ಜಲಾಶಯಕ್ಕೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು. ಸವದತ್ತಿ ಮತ್ತು ಬೈಲಹೊಂಗಲ ತಾಲ್ಲೂಕಿನ ರೈತರ ಭೂಮಿಗೆ ನೀರು ಪೂರೈಸುವ 10 ಜಾಕ್‌ವೆಲ್ ಯಂತ್ರಗಳನ್ನು ಸರಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಇದಕ್ಕೆ ಒಟ್ಟು 28 ಕೋಟಿ ರೂಪಾಯಿ ವೆಚ್ಚ ತಗಲುತ್ತದೆ ಎಂದರು. 

ಕಳಸಾ- ಬಂಡೂರಿ ಕಾಮಗಾರಿಗೆ ಚಾಲನೆ ದೊರಕಿದೆ. ಮಹದಾಯಿಯಿಂದ 7.5 ಟಿಎಂಸಿ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಪಡೆಯುವಲ್ಲಿ ಕಾನೂನು ಬದ್ಧ ಹೋರಾಟಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಬೊಮ್ಮಾಯಿ ಪುನರುಚ್ಚರಿಸಿದರು.

ಸ್ವಾದಿ ಮಠದ ಶಿವಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುರುಘೇಂದ್ರ ಸ್ವಾಮೀಜಿ, ರಾಚಯ್ಯಾ ಸ್ವಾಮೀಜಿ, ಅಜ್ಜಯ್ಯ ಸ್ವಾಮೀಜಿ ಉಪಸ್ಥಿತರಿದ್ದರು.

ಶಾಸಕರಾದ ಆನಂದ ಮಾಮನಿ, ಜಗದೀಶ ಮೆಟಗುಡ್ಡ, ಅಶೋಕ ಪಟ್ಟಣ, ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಕಾಡಾ ಅಧ್ಯಕ್ಷ ಸೋಮಣ್ಣ ಬೇವಿನಮರದ, ಡಾ. ಮೇನೆದಕೊಪ್ಪ, ಎಸ್.ಎಸ್. ಪಾಟೀಲಪದಕಿ, ಶಿವಾನಂದ ಹೂಗಾರ, ಬಸವರಾಜ ಕಾರದಗಿ, ಮಲ್ಲನಗೌಡ ನಿಂಗನಗೌಡರ, ಅರವಿಂದ ಪಾಟೀಲ, ಬಿ.ಡಿ. ನಿಗದಿ, ಬಾಳನಗೌಡ ಸಂಗನಗೌಡರ, ಬಿ.ಆರ್. ನರಸನ್ನವರ, ಎಂ.ಎಂ. ಕೊಮಣ್ಣವರ ಇದ್ದರು. ಲಕ್ಷ್ಮಿ ಅರಿಬೆಂಚ ಪ್ರಾರ್ಥಿಸಿದರು. ಸಹದೇವ ಯರಗೊಪ್ಪ ನಿರೂಪಿಸಿದರು. ಆರ್.ಎಂ. ಭಟ್ಟ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT