ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುವೆ ಈಗಲೂ ಉಪಯುಕ್ತ!

Last Updated 17 ಏಪ್ರಿಲ್ 2011, 9:55 IST
ಅಕ್ಷರ ಗಾತ್ರ

ಬಾಗೇಪಲ್ಲಿ ತಾಲ್ಲೂಕಿನ ಐತಿಹಾಸಿಕ ಜಡಲ ಬೈರವೇಶ್ವರ ದೇವಾಲಯದ ಮುಂಭಾಗದಲ್ಲಿ ಬ್ರಿಟಿಷರು ನಿರ್ಮಿಸಿದ್ದ ಕಾಲುವೆ ಪಾಳು ಬಿದ್ದಿದೆ. ಕಾಲುವೆ ಮೂಲಕ ಗ್ರಾಮೀಣ ಪ್ರದೇಶದ ಏಳು ಕೆರೆಗಳಿಗೆ ಹರಿಸಬಹುದಾದ ಕಾಲುವೆಗೆ ಹೂಳು ತುಂಬಿ ಗಿಡಗಂಟಿಗಳು ಆವರಿಸಿಕೊಂಡಿವೆ.

ತಾಲ್ಲೂಕಿನ ಪರಗೋಡು ಬಳಿ ನಿರ್ಮಿಸಲಾಗಿರುವ ಚಿತ್ರಾವತಿ ಬ್ಯಾರೇಜಿನಿಂದ ನೀರು ಪಟ್ಟಣದ ಚಿತ್ರಾವತಿ ಕಣಜದ ಮೂಲಕ ಆಂಧ್ರ ಪ್ರದೇಶದ ಬುಕ್ಕಪಟ್ನಂ ಕೆರೆಗೆ ಹಾದುಹೋಗುತ್ತದೆ. ಪಟ್ಟಣದ ಹೊರವಲಯದಲ್ಲಿ ನೀರು ಶೇಖರಿಡಿಸಲು ಒಡ್ಡು ನಿರ್ಮಿಸಲಾಗಿದೆ. ಈ ಒಡ್ಡಿನಲ್ಲಿ ಶೇಖರಾಗುವ ನೀರನ್ನು ರಾಜಕಾಲುವೆಯ ಮೂಲಕ ಹೊರಲವಯದ ಕೊರ್ಲಕುಂಟೆಗೆ ಹರಿಬಿಡಲಾಗುತ್ತದೆ.

1883ರಲ್ಲಿ ಜಡಲ ಭೈರವೇಶ್ವರ ದೇವಾಲಯದ ಮುಂಭಾಗದಲ್ಲಿ ಚಿತ್ರಾವತಿ ಕಣಜವನ್ನು ಬ್ರಿಟಿಷರು ನಿರ್ಮಿಸಿದ್ದರು. ಕಣಜದಲ್ಲಿ ತುಂಬುವ ನೀರು ಸುಗಮವಾಗಿ ಹರಿಯುವಂತೆ ಮಾಡಲು ಕಾಲುವೆಯನ್ನು ನಿರ್ಮಿಸಿ, ಅದರ ಮೂಲಕ ಏಳು ಕೆರೆಗಳಿಗೆ ನೀರನ್ನು ಸರಬರಾಜು ಮಾಡಲಾಗುತಿತ್ತು. ಆದರೆ ಈಗ ಸೂಕ್ತ ನಿರ್ವಹಣೆಯಿಲ್ಲದ ಕಾರಣ ಕಾಲುವೆಯಲ್ಲಿ ಹೊಳು ತುಂಬಿಕೊಂಡಿದೆ. ಸುತ್ತಮುತ್ತಲೂ ಗಿಡಗಂಟಿಗಳು ಆವರಿಸಿಕೊಂಡಿವೆ.

ಪಟ್ಟಣದ ಹೊರವಲಯದ ಚಿತ್ರಾವತಿ ಕಣಜದ ಬಳಿ ರಾಜ್‌ಘಾಟ್ ನಿರ್ಮಿಸಲಾಗಿದೆ. ಪುರಸಭಾ ಅಧೀನದಲ್ಲಿರುವ ರಾಜ್‌ಘಾಟ್‌ಗೆ ತಡೆಗೋಡೆ ನಿರ್ಮಿಸಲಾಗಿಲ್ಲ. ಕಾಲುವೆಯಲ್ಲಿ ಹೂಳು ತುಂಬಿಕೊಂಡಿದ್ದು ಮಾತ್ರವಲ್ಲದೇ ಕೆಲ ಪ್ರಭಾವಿ ವ್ಯಕ್ತಿಗಳು ಸ್ಥಳವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ತಾಲ್ಲೂಕಿನಲ್ಲಿ ಅಂತರ್ಜಲ ಕುಸಿದಿದ್ದು, 800-1000 ಅಡಿಯಷ್ಟು ಕೊರೆದರೂ ನೀರು ಸಿಗುತ್ತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರ ಸ್ವರೂಪದಲ್ಲಿ ಕಾಡುತ್ತಿದೆ.

‘ಬ್ರಿಟಿಷರು ನಿರ್ಮಿಸಿದ್ದ ಕಾಲುವೆಯನ್ನು ಈಗಲೂ ಬಳಕೆ ಮಾಡಬಹುದು. ಕಾಲುವೆ ತುಂಬಿರುವ ಹೂಳು ಮತ್ತು ಆವರಿಸಿಕೊಂಡಿರುವ ಗಿಡಗಂಟಿಗಳನ್ನು ತೆಗೆದಲ್ಲಿ, ಅದು ಪ್ರಯೋಜನಕಾರಿಯಾಗುತ್ತದೆ.

 ಕೋಟ್ಯಂತರ ರೂಪಾಯಿ ವೆಚ್ಚ ಮಾಡುವ ಬದಲು ಈ ಕಾಲುವೆಗೆ ಜೀವ ನೀಡಿದ್ದಲ್ಲಿ, ತಾಲ್ಲೂಕಿನ ಕೆರೆಗಳನ್ನು ತುಂಬಿಸಬಹುದು. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬಹುದು’ ಎಂದು ತಜ್ಞರು ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT