ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜುಗಳಿಗೆ ಪ್ರಶ್ನಾವಳಿ ರವಾನೆ

Last Updated 17 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸ್ನಾತಕೋತ್ತರ ವೈದ್ಯ­ಕೀಯ ಕೋರ್ಸ್‌ಗಳಿಗೆ ಯಾವ ರೀತಿ ಪ್ರವೇಶ ಪರೀಕ್ಷೆ ಮಾಡುತ್ತೀರಿ? ಎಷ್ಟು ಕೋರ್ಸ್‌ಗಳಿವೆ? ಸೀಟು ಹಂಚಿಕೆ ಹೇಗೆ ಮಾಡುತ್ತೀರಿ ಎಂಬುದು ಸೇರಿ­ದಂತೆ ಸಮಗ್ರವಾದ ಮಾಹಿತಿ ನೀಡು­ವಂತೆ ವೈದ್ಯಕೀಯ ಶಿಕ್ಷಣ ಇಲಾಖೆ ಕಾಲೇಜುಗಳಿಗೆ ಸೂಚಿಸಿದೆ.

ಇಲಾಖೆಯ ಕಾರ್ಯದರ್ಶಿ ವಿ.ರಶ್ಮಿ ಅವರು ಇದೇ 16ರಂದು ಎಲ್ಲ ಕಾಲೇಜುಗಳಿಗೆ ಪ್ರಶ್ನಾವಳಿ­ಯನ್ನು ಕಳುಹಿಸಿದ್ದು, ಗುರುವಾರದ ಒಳಗೆ ಮಾಹಿತಿ ಕಳುಹಿಸಿಕೊಡುವಂತೆ ಆದೇಶಿಸಿದ್ದಾರೆ.

ಪ್ರವೇಶ ಪರೀಕ್ಷೆಯ ಅಧಿಸೂಚನೆ, ಯಾವ ಸಂಸ್ಥೆ ಪರೀಕ್ಷೆ ನಡೆಸುತ್ತದೆ, ಕಾಲೇಜು ಯಾವ ಸ್ವರೂಪದ್ದಾಗಿದೆ, ಯಾವ ವರ್ಗದವರಿಗೆ ಎಷ್ಟು ಸೀಟುಗಳನ್ನು ಮೀಸಲಿಡಲಾಗುತ್ತದೆ ಎಂಬುದನ್ನು ತಿಳಿಸಬೇಕು.

ಆನ್‌ಲೈನ್‌ ಪರೀಕ್ಷೆ ಮಾಡಲಾಗು ತ್ತದೆಯೊ ಅಥವಾ ಉತ್ತರ ಪತ್ರಿಕೆ ನೀಡಿ ಪರೀಕ್ಷೆ ಮಾಡಲಾಗುತ್ತದೊ ಎಂಬುದನ್ನು ತಿಳಿಸಬೇಕು.

ಸಿಸಿಟಿವಿ ಅಳವಡಿಸಲಾಗು­ತ್ತ­ದೆಯೇ, ಒಎಂಆರ್‌ ಶೀಟ್‌ ಬಳಸಲಾ­ಗುತ್ತ­ದೆಯೇ? ಕೌನ್ಸೆಲಿಂಗ್‌ ಯಾವ ರೀತಿ ಮಾಡಲಾಗುತ್ತದೆ, ಭಾರತೀಯ ವೈದ್ಯಕೀಯ ಮಂಡಳಿ ಮಾನ್ಯತೆ ನವೀ­ಕ­ರಿಸಿದೆಯೇ ಎಂಬುದು ಸೇರಿದಂತೆ ಹಲವು ಪ್ರಶ್ನೆಗಳಿಗೆ ಕಾಲೇಜುಗಳು ಉತ್ತರಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT