ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜ್ ಪ್ರೀಮಿಯರ್ ಲೀಗ್: ವಿಜಯಾ ಕಾಲೇಜ್ ಜಯಭೇರಿ

Last Updated 21 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಎ.ಎಸ್. ಶ್ರೀಕೃಷ್ಣ ಅವರ ಆಲ್‌ರೌಂಡ್ ಆಟದ ನೆರವಿನಿಂದ ವಿಜಯಾ ಕಾಲೇಜ್ ತಂಡದವರು ಜೈನ್ ವಿಶ್ವವಿದ್ಯಾಲಯ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ ಚೊಚ್ಚಲ ಕಾಲೇಜ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಅಮೃತಾ ಎಂಜಿನಿಯರಿಂಗ್ ಕಾಲೇಜ್ ತಂಡದ ಎದುರು 102 ರನ್ ಗೆಲುವು ಪಡೆದರು.

ಇಲ್ಲಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವಿಜಯಾ ಕಾಲೇಜ್ 20 ಓವರ್‌ಗಳಲ್ಲಿ ಗಳಿಸಿದ್ದು 200 ರನ್. ಕಳೆದುಕೊಂಡಿದ್ದು 9 ವಿಕೆಟ್. ಶ್ರೀಕೃಷ್ಣ (37) ಹಾಗೂ ಸಂತೋಷ್ ಗೌಡ (34) ಉತ್ತಮ ಬ್ಯಾಟಿಂಗ್‌ನಿಂದ ವಿಜಯಾ ತಂಡ ಬೃಹತ್ ಮೊತ್ತ ಕಲೆ ಹಾಕಿತು. ಇದಕ್ಕುತ್ತರವಾಗಿ ಅಮೃತಾ ಕಾಲೇಜು 20 ಓವರ್‌ಗಳಲ್ಲಿ ಕೇವಲ 98 ರನ್ ಗಳಿಸಿ ಆಲ್ ಔಟ್ ಆಯಿತು. ಬೌಲಿಂಗ್‌ನಲ್ಲಿಯು ಮಿಂಚಿದ ಕೃಷ್ಣ ಎರಡು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರು: ವಿಜಯಾ ಕಾಲೇಜು: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 200 (ಎ.ಎಸ್. ಶ್ರೀಕೃಷ್ಣ 37, ಸಂತೋಷ್ ಗೌಡ 34, ಎ.ಎಸ್. ವಿಜಯ್30; ಅಶೋಕ 42ಕ್ಕೆ3, ಅನಿರುದ್ಧ್ 48ಕ್ಕೆ2). ಅಮೃತಾ ಎಂಜಿನಿಯರಿಂಗ್ ಕಾಲೇಜು: 20 ಓವರ್‌ಗಳಲ್ಲಿ 98. (ಅನಿರುದ್ಧ 33, ಜೊಹಾಲ್ 11ಕ್ಕೆ1), ಐ.ಜಿ. ಅನಿಲ್ 15ಕ್ಕೆ3, ಶ್ರೀಕೃಷ್ಣ 18ಕ್ಕೆ2). ಫಲಿತಾಂಶ: ವಿಜಯಾ ಕಾಲೇಜು ತಂಡಕ್ಕೆ 102 ರನ್ ಜಯ.

ಕ್ರೈಸ್ಟ್ ವಿಶ್ವವಿದ್ಯಾಲಯ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 106. (ಜಸ್ಮೀತ್ 65, ಕಾರ್ತಿಕ್ 17ಕ್ಕೆ2, ಶ್ರೀನಾಥ್ 15ಕ್ಕೆ2). ಎಸ್‌ಬಿಎಂಜೆಸಿಇ  20 ಓವರ್‌ಗಳಲ್ಲಿ 2 ವಿಕೆಟ್‌ಗೆ 107 (ಎಚ್.ಆರ್. ಅಭಿಷೇಕ್ ಔಟಾಗದೇ 37, ಪ್ರದೀಪ್ ಜಹಾ 42). ಫಲಿತಾಂಶ: ಎಸ್‌ಬಿಎಂಜೆಸಿಇಗೆ ಎಂಟು ವಿಕೆಟ್ ಗೆಲುವು.

ಸುರಾನ ಕಾಲೇಜ್: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 105. (ಭುವನೇಶ್ 27, ಫ್ರಾನ್ಸಿಸ್ 15ಕ್ಕೆ3). ಲೊಯೊಲಾ ಕಾಲೇಜ್ ಚೆನ್ನೈ: 8.2 ಓವರ್‌ಗಳಲ್ಲಿ 1 ವಿಕೆಟ್‌ಗೆ 110 (ಹರಿರಾಜ್ ಔಟಾಗದೇ 82, ರಾಘು 29ಕ್ಕೆ1). ಫಲಿತಾಂಶ: ಲೊಯಾಲಾ ಕಾಲೇಜ್‌ಗೆ 9 ವಿಕೆಟ್ ವಿಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT