ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ನೀರಿಗೆ ಬೆಲೆ ಇಲ್ಲವೇ?

ಅಕ್ಷರ ಗಾತ್ರ

ನಾನು ಪ್ರತಿದಿನ `ಪ್ರಜಾವಾಣಿ' ತಿರುವಿ ಹಾಕಿದಾಗ ಮೊದಲು ಕಣ್ಣು ಹಾಯಿಸೋದು, ಯಾವ ಯಾವ ಅಣೆಕಟ್ಟು ಎಷ್ಟೆಷ್ಟು ತುಂಬಿದೆ ಎಂಬುದರತ್ತ. ಕಾವೇರಿ ಮೈದುಂಬಿ ಹರಿದು ಕೆಆರ್‌ಎಸ್ ತುಂಬಲು, ಭಾಗಮಂಡಲ, ನಾಪೋಕ್ಲು ಮುಂತಾದ ಕಡೆ ಆಗ್ತಿರೋ ಧಾರಾಕಾರ ಮಳೆಯೇ ಕಾರಣ. ಅಲ್ಲಿನ ಜನಗಳಿಗೆ ಹಾದಿ ಬೀದಿ ತುಂಬಾ ನೀರು. ಆದರೆ ಅಲ್ಲಿನ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ತತ್ವಾರ.

ನಮ್ಮ  ಮನೆ, ಮಠ, ಅಪಾರ ಆಸ್ತಿಪಾಸ್ತಿ ಕಳಕೊಂಡು, ವಿದ್ಯಾರ್ಥಿಗಳ ಶಾಲಾ ಸಮಯ ಹಾಳು ಮಾಡಿಕೊಂಡು ಸಂಗ್ರಹಿಸಿದ ನೀರನ್ನು ಒಂದು ನಯಾಪೈಸೆ ಆದಾಯವಿಲ್ಲದೆ ಪಕ್ಕದ ತಮಿಳುನಾಡಿಗೆ ಹರಿಸೋದು ಯಾವ ನ್ಯಾಯ? ಕಷ್ಟ ಅನುಭವಿಸೋರು ನಾವು, ಪುಗಸಟ್ಟೆ ಸುಖ ಪಡೋರು ಅವರು. ಇದು ಯಾವ ಹಂಸ ನ್ಯಾಯ?

ಲೀಟರ್ ಬಾಟಲಿ ನೀರಿಗೆ 15 ರಿಂದ 20 ರೂಪಾಯಿ ತೆತ್ತು ಕುಡೀಬೇಕು. ಅದೇ ನೀರನ್ನು  ಟಿಎಂಸಿ ಗಟ್ಟಲೆ (1 ಟಿಎಂಸಿ ಅಡಿ = 28,316,846,592 ಲೀಟರ್) ಹರಿಸೋದು ನಿಜಕ್ಕೂ ತರ್ಕಕ್ಕೆ ನಿಲುಕದ್ದು.

ಯಾರಿಗೆ ಎಷ್ಟು ನೀರು ಬೇಕೋ ಅಷ್ಟು ಹಣವನ್ನು ಮುಂಪಾವತಿ ಮಾಡಲಿ, ಆ ಹಣ ನಷ್ಟಕ್ಕೊಳಗಾದ ನಮ್ಮ ಜನರ ಪುನರ್ವಸತಿಗೆ ಉಪಯೋಗವಾಗಲಿ. ಈ ಬಗ್ಗೆ ನಮ್ಮ ಸರ್ಕಾರ ಈಗಲೇ ಕ್ರಮ ಕೈಗೊಂಡು, ಕೇಂದ್ರ ಸರ್ಕಾರ ಮತ್ತು ಟ್ರಿಬ್ಯುನಲ್ ಮುಂದೆ ವಾದ ಮಂಡಿಸಲಿ. ನಮ್ಮ ಕಷ್ಟಕ್ಕೆ ಪ್ರತಿಫಲ ಸಿಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT