ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ-ರಾಜಕೀಯ ಪ್ರೇರಿತ ಹೋರಾಟ

Last Updated 8 ಅಕ್ಟೋಬರ್ 2012, 5:55 IST
ಅಕ್ಷರ ಗಾತ್ರ

ಗದಗ: ಕಾವೇರಿಗಾಗಿ ಹೋರಾಟ ನಡೆ ಸುತ್ತಿರುವ ಬಿಜೆಪಿ, ಕಾಂಗ್ರೆಸ್, ಯಡಿ ಯೂರಪ್ಪ ಸೇರಿದಂತೆ ಎಲ್ಲರದ್ದು ನಾಟ ಕೀಯ ಮತ್ತು ರಾಜಕೀಯ ಪ್ರೇರಿತ ಎಂದು ಬಿಎಸ್‌ಆರ್ ಕಾಂಗ್ರೆಸ್ ವಕ್ತಾರ ವೈ.ಎನ್.ಗೌಡರ ಆರೋಪಿಸಿದರು.

ನಗರದಲ್ಲಿ ಭಾನುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕೇಂದ್ರವನ್ನು ಪ್ರತಿನಿಧಿಸುವ ನಾಲ್ಕು ಸಚಿವರು ಇದ್ದರೂ ವಾಸ್ತವ ಪರಿಸ್ಥಿತಿ ತಿಳಿಸುವಲ್ಲಿ ವಿಫಲರಾದರು. ಜನತೆ ಮುಂದೆ ರಾಜಕೀಯ ಮುಂಡರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ನೀರು ಕೇಳಿದ ರೈತರ ಮೇಲೆ ಲಾಠಿ ಬೀಸಲಾಗಿದೆ. ನೀರು ಮತ್ತು ಭಾಷೆ ದುರ್ಬಳಕೆಗೆ ರಾಜಕೀಯ ಇಚ್ಛಾ ಶಕ್ತಿ ಕೊರತೆ ಇದೆ ಎಂದು ಹೇಳಿದರು.

ರಾಜ್ಯದ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ರಾಜ್ಯವನ್ನು ಆಳಿದ ಎಲ್ಲ ಸರ್ಕಾರಗಳು ವಿಫಲವಾಗಿವೆ. ಜಲಾಶಯ ಬಳಿ ಜಲಸಂಗ್ರಹಾಲಯ ನಿರ್ಮಿಸಬೇಕು. ಹೆಚ್ಚುವರಿ ನೀರು ಕಾಲುವೆಯಲ್ಲಿ ಹರಿದು ಹೋಗುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿ ದರು.

ರಾಜ್ಯದ 224 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ಪರ್ಧಿಸಲಿದ್ದಾರೆ. ಬಡವರು, ಶ್ರಮಿಕರು, ಯುವಕರಿಗೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.ಗೋಷ್ಠಿಯಲ್ಲಿ ಪಕ್ಷದ ಶಿವನಗೌಡರ, ಸಂಚಾಲಕ ಅನಿಲ ಮೆಣಸಿನಕಾಯಿ, ಪ್ರೊ.ಕೆ.ಎಚ್.ಬೇಲೂರ, ಹಳ್ಳಿಕೇರಿ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT