ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ: ವೈಜ್ಞಾನಿಕ ಸೂತ್ರಕ್ಕೆ ರಾಜ್ಯ ಆಗ್ರಹ

Last Updated 17 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಮಳೆ ಅಭಾವವಾದಾಗ ಕಾವೇರಿ ನೀರು ಹಂಚಿಕೊಳ್ಳಲು ವೈಜ್ಞಾನಿಕ ಸೂತ್ರವೊಂದನ್ನು ರೂಪಿಸುವಂತೆ ಕರ್ನಾಟಕ ಬುಧವಾರ ಕೇಂದ್ರ ಸರ್ಕಾರ ಹಾಗೂ ಕಾವೇರಿ ಕೊಳ್ಳದ ರಾಜ್ಯಗಳಿಗೆ ಆಗ್ರಹ ಮಾಡಿದೆ.

ವಸ್ತುಸ್ಥಿತಿಯನ್ನು ವೈಜ್ಞಾನಿಕ ಆಧಾರದಲ್ಲಿ ಅಧ್ಯಯನ ಮಾಡಬೇಕು ಹಾಗೂ ಸಂಕಷ್ಟ ಸ್ಥಿತಿಯನ್ನು ಹಿರಿಯ ನೀರಾವರಿ ಹಾಗೂ ಜಲತಜ್ಞರು ನಿರ್ಧರಿಸಬೇಕು ಎಂದು ಕರ್ನಾಟಕ ಹೇಳಿಕೆಯಲ್ಲಿ ತಿಳಿಸಿದೆ.

ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ನದಿ ಕೊಳ್ಳದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ನಡುವೆ ಹಲವು ವರ್ಷಗಳಿಂದ ವಿವಾದ ಮುಂದುವರಿದಿದ್ದರೂ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ಸಂಕಷ್ಟ ಸ್ಥಿತಿಯಲ್ಲಿ ನೀರು ಹಂಚಿಕೊಳ್ಳುವ ಸೂತ್ರವನ್ನು ಇನ್ನೂ ಅಂತಿಮಗೊಳಿಸಿಲ್ಲ.

ಮಳೆ ವಿವರ, ಹವಾಮಾನ ಮುನ್ಸೂಚನೆ, ನದಿಯಲ್ಲಿ ಹರಿಯುವ ನೀರು, ಕೃಷಿಗೆ ಬೇಕಾದ ನೀರು ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ಸಂಕಷ್ಟ ಸ್ಥಿತಿಯನ್ನು ನಿರ್ಧರಿಸಬೇಕು ಎಂದೂ ರಾಜ್ಯ ಹೇಳಿದೆ.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT