ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿಗಾಗಿ ಒಂದಾಗಿ- ಬರಗೂರು

Last Updated 1 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರದಲ್ಲಿ ಸಚಿವರಾಗಿರುವ ರಾಜ್ಯದ ಕಾಂಗ್ರೆಸ್ ಸಂಸದರು, ಕಾವೇರಿ ನದಿ ಪ್ರಾಧಿಕಾರದ ಅಧ್ಯಕ್ಷರೂ ಆದ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ, ಕಾವೇರಿ ಸಮಸ್ಯೆ ಕುರಿತು ವಸ್ತುಸ್ಥಿತಿ ವಿವರಿಸಬೇಕು ಎಂದು ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಒತ್ತಾಯಿಸಿ ದ್ದಾರೆ.

`ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು, ಪ್ರತ್ಯೇಕವಾಗಿ ಹೇಳಿಕೆಗಳನ್ನು ನೀಡುವ ಬದಲು, ಒಂದಾಗಿ ತೆರಳಿ ರಾಜ್ಯದಲ್ಲಿ ನೀರಿನ ಸಂಗ್ರಹ ಕಡಿಮೆ ಇರುವ ಸಂಗತಿಯನ್ನು ಪ್ರಧಾನಿ ಅವರಿಗೆ ಮನವರಿಕೆ ಮಾಡಿಕೊಡಬೇಕು.

ದೆಹಲಿಯಲ್ಲಿರುವ ರಾಜ್ಯದ ಕಾಂಗ್ರೆಸ್ ನಾಯಕರೂ ಇವರ ಜೊತೆ ಕೈಜೋಡಿಸಬೇಕು. ಸರ್ವಪಕ್ಷ ನಿಯೋಗಕ್ಕಾಗಿ ಕಾಯದೆ, ತಾವೇ ಹೋಗಿ ಪ್ರಧಾನಿ ಅವರನ್ನು ಭೇಟಿ ಮಾಡಬೇಕು~ ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಕಾವೇರಿ ನದಿ ನೀರಿನ ಹಂಚಿಕೆ ವಿವಾದವನ್ನು ಬಿಜೆಪಿ ಸರ್ಕಾರದ ಸಮಸ್ಯೆ ಎಂದು ಪರಿಗಣಿಸಬಾರದು. ಇದನ್ನು ನದಿ ತೀರದ ರೈತರ ಸಮಸ್ಯೆ ಎಂದು ಭಾವಿಸಿ, ರಾಜಕೀಯ ಮುತ್ಸದ್ದಿತನ ತೋರಬೇಕು, ಜವಾಬ್ದಾರಿ ವಹಿಸಿಕೊಳ್ಳಬೇಕು. ಇಲ್ಲವಾದರೆ ಕಾಂಗ್ರೆಸ್ ಕ್ಷಮೆಗೆ ಅರ್ಹವಾಗುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

`ಸಭಾತ್ಯಾಗದಂತಹ (ಸಿಆರ್‌ಎ ಸಭೆಯಿಂದ) ವೀರಾವೇಶದ ಕ್ರಮಗಳಿಂದ ಜನಪ್ರಿಯತೆ ಗಳಿಸಲು ಹೋಗಿ ಬಿಜೆಪಿ ಸರ್ಕಾರ ಮುಗ್ಗರಿಸಿದೆ. ಸರ್ಕಾರದ ಕಾನೂನು ಸಮರ ಮತ್ತು ಜನತೆಯ ಚಳವಳಿಗಳು ಒಟ್ಟಿಗೇ ನಡೆಯಬೇಕಾದ್ದು ಈಗ ಅನಿವಾರ್ಯವಾಗಿದೆ~ ಎಂದು ಬರಗೂರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT