ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿಸಿದ ಮಾತಿಕ ಚಕಮಕಿ

Last Updated 25 ಡಿಸೆಂಬರ್ 2012, 20:02 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ಹಾಗೂ ಪಾಕಿಸ್ತಾನ ನಡುವಿನ `ಸ್ನೇಹ ಸರಣಿ'ಯ ಮೊದಲ ಪಂದ್ಯದಲ್ಲೇ ಬಿಸಿಯಾದ ವಾತಾವರಣ ಕಂಡುಬಂತು. ಎರಡೂ ತಂಡಗಳ ಆಟಗಾರರು ಪರಸ್ಪರ ದುರುಗುಟ್ಟಿ ನೋಡುವುದು ಸಾಮಾನ್ಯವಾಗಿತ್ತು. ಇಶಾಂತ್ ಶರ್ಮ 18ನೇ ಓವರ್ ಬೌಲಿಂಗ್ ಮಾಡುತ್ತಿದ್ದ ಸಂದರ್ಭ ಕಮ್ರನ್ ಅಕ್ಮಲ್, ಜೊತೆ ಮಾತಿನ ಚಕಮಕಿ ನಡೆಸಿದರು. ಸಹ ಆಟಗಾರರು ಹಾಗೂ ಅಂಪೈರ್ ಇಬ್ಬರನ್ನೂ ದೂರ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು.

ನೀಲ ಸಾಗರ...
ಚಿನ್ನಸ್ವಾಮಿ ಕ್ರೀಡಾಂಗಣ ಒಂದು ರೀತಿಯಲ್ಲಿ ನೀಲ ಸಾಗರದಂತೆ ಕಂಡುಬಂತು. ಏಕೆಂದರೆ ಶೇ 60 ಕ್ಕೂ ಅಧಿಕ ಮಂದಿ ಭಾರತ ತಂಡದ ಜರ್ಸಿ ತೊಟ್ಟಿದ್ದರು. ಇದರಿಂದ ಇಡೀ ಕ್ರೀಡಾಂಗಣವೇ ನೀಲಿ ಬಣ್ಣಕ್ಕೆ ತಿರುಗಿತ್ತು. ಪಂದ್ಯ ವೀಕ್ಷಿಸಲು 35 ಸಾವಿರಕ್ಕೂ ಅಧಿಕ ಮಂದಿ ಕ್ರೀಡಾಂಗಣದಲ್ಲಿ ನೆರೆದಿದ್ದರು.

ಭುವನೇಶ್ವರ್, ಇರ್ಫಾನ್ ಪದಾರ್ಪಣೆ
ಭಾರತದ ಭುವನೇಶ್ವರ್ ಕುಮಾರ್ ಹಾಗೂ ಪಾಕಿಸ್ತಾನದ ಮೊಹಮ್ಮದ್ ಇರ್ಫಾನ್ ಈ ಐತಿಹಾಸಿಕ ಪಂದ್ಯದ ಮೂಲಕ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.

ಉತ್ತರ ಪ್ರದೇಶದ ಯುವ ಬೌಲರ್ ಭುವನೇಶ್ವರ್‌ಗೆ ಇದು ಮೊದಲ ಅಂತರರಾಷ್ಟ್ರೀಯ ಪಂದ್ಯ ಕೂಡಾ ಹೌದು. ಆದರೆ ಇರ್ಫಾನ್ 2010 ರಲ್ಲಿ ಎರಡು ಏಕದಿನ ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT