ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವ್ಯ ಎಂದರೆ ಅಮ್ಮ, ಹೆಂಡತಿ

ಕಿತ್ತಲೆ ನಾಡು ಕೊಡಗಿನಲ್ಲಿ ಕನ್ನಡದ ಕಹಳೆ...
Last Updated 7 ಜನವರಿ 2014, 19:30 IST
ಅಕ್ಷರ ಗಾತ್ರ

ಭಾರತೀಸುತ ವೇದಿಕೆ (ಮಡಿಕೇರಿ):  ಕಾವ್ಯ ಎಂದರೆ ಅಮ್ಮ, ಹೆಂಡತಿ, ಮಕ್ಕಳು, ತಂದೆಯ ಹಾಗೆ ಎಂದು ಹಿರಿಯ ಕವಿ ಡಾ. ನಾ. ಮೊಗಸಾಲೆ ಅಭಿಪ್ರಾಯಪಟ್ಟರು.

ಮಂಗಳವಾರ ಸಂಜೆ ನಡೆದ ಕಾವ್ಯ ಗಾಯನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾವ್ಯ ಸಮುದ್ರದ ಹಾಗೆ. ಕಾವ್ಯ ಹೀಗೆ ಎಂದರೆ ಸರಳ. ಹೀಗಲ್ಲ ಎಂದರೆ ಸಂಕೀರ್ಣ ಎಂದ ಅವರು, ಈಚೆಗೆ ಲೇಖಕ ಚಂದ್ರಶೇಖರ ನಂಗಲಿ ಅವರು ಸಮುದ್ರವನ್ನು ನೋಡಿ ಬಂದು ನಮ್ಮ ಕಾಂತಾವರಕ್ಕೆ ಬಂದು ಮಾತನಾಡಿದರು. ಸಮುದ್ರವನ್ನು ನೋಡಿ, ಅಲ್ಲಮ್ಮನನ್ನು ನೋಡಿದ ಹಾಗಾಯಿತು ಎಂದರು.
ಸಾಗರವೇ ಅಲ್ಲಮ್ಮನ ಹಾಗೆ ಎಂದ ಅವರ ಮಾತು ರೂಪಕದ ಹಾಗೆ. ಸಾಗರ ಯಾವತ್ತೂ ಸಾಗರವೆ. ಇಂಥ ಸಾಗರ ಸತ್ಯಗಳು ಅಥವಾ ಸತ್ಯಗಳಿಗೆ ಅನೇಕ ಮುಖಗಳಿರುತ್ತವೆ ಎಂದು ಅವರು ವಿವರಿಸಿದರು.

ನಮ್ಮ ದೇಸಿ ಸಾಹಿತ್ಯವು ಶಿಷ್ಟ ಸಾಹಿತ್ಯವಾದ ಕ್ರಮ ಅಧ್ಯಯನ ಯೋಗ್ಯವಾದುದು. ಅಮ್ಮನ ಸೆರಗಿನಲ್ಲಿ, ಉಳುವ ಯೋಗಿಯ ರಟೆಯಲ್ಲಿ ದೇಸಿ ಸಾಹಿತ್ಯ ಗಟ್ಟಿಯಾಗಿತ್ತು. ಆದರೆ ಈಗ ಶಿಷ್ಟ ಸಾಹಿತ್ಯದಲ್ಲಿ ಕವಿಗಳು ಕವಿತೆ ಓದಿದರೆ, ಗಾಯಕರು ಹಾಡುತ್ತಾರೆ. ಇದು ಬದಲಾದ ಬಗೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT