ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವ್ಯ ಕೃಷಿಯಲ್ಲಿ ಕೆಎಸ್‌ಎನ್ ದೊಡ್ಡ ಹೆಸರು

Last Updated 22 ಅಕ್ಟೋಬರ್ 2012, 5:25 IST
ಅಕ್ಷರ ಗಾತ್ರ

ಮಂಡ್ಯ: ಎಲ್ಲ ಕಾಲಕ್ಕೂ ಸಲ್ಲುವ ಜನ ಪ್ರೀತಿಯ ಕಾವ್ಯ ಕೃಷಿ ಮಾಡಿದವರಲ್ಲಿ `ಪ್ರೇಮಕವಿ~ ಕೆ.ಎಸ್.ನರಸಿಂಹಸ್ವಾಮಿ ಅವರದ್ದು ದೊಡ್ಡ ಹೆಸರು. ಇವರು ನಾಡಿನ ಹೆಮ್ಮೆ~ ಎಂದು ಸಾಹಿತಿ ಕಾಳೇಗೌಡ ನಾಗವಾರ ಬಣ್ಣಿಸಿದರು.

ನಗರದ ಗಾಂಧಿ ಭವನದಲ್ಲಿ ಭಾನು ವಾರ ಜಿಲ್ಲಾ ಮತ್ತು ಮಂಡ್ಯ ಯುವ ಬರಹಗಾರರ ಬಳಗ ಆಯೋಜಿಸಿದ್ದ `ಕೆಎಸ್‌ಎನ್~ ಕಾವ್ಯ ಮತ್ತು ಸಮಾಜ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಜನಸಾಮಾನ್ಯರ ಮಾತುಗಳಲ್ಲೇ, ಕಡಿಮೆ ಶಬ್ಧಗಳನ್ನು ಬಳಸಿ, ಬಹಳ ಪರಿ ಣಾಮಕಾರಿಯಾಗಿ ಜನರ ಹೃದಯಕ್ಕೆ ಹತ್ತಿರವಾಗುವಂತೆ ಕವಿತೆಗಳನ್ನು ಕಟ್ಟಿದ್ದ ರಿಂದಲೇ ಕೆಎಸ್‌ಎನ್ ಜನಪ್ರೀತಿ ಗಳಿಸಿದರು ಎಂದು ಹೇಳಿದರು.

ತಮ್ಮನೆಂದೂ `ಪ್ರೇಮಕವಿ~ ಎಂದು ಗುರುತಿಸಿಕೊಳ್ಳಲು ಇಚ್ಛಿಸದ ಕೆಎಸ್‌ಎನ್, ಅದೇನಿದ್ದರೂ, ಕಾಳಿದಾಸ ಅವ ರಂಥ ಮೇಧಾವಿಗಳಿಗೆ ಉಲ್ಲೇಖಿಸಿ ಹೇಳಿ ಎನ್ನುತ್ತಿದ್ದರು ಎಂದು ಸ್ಮರಿಸಿದರು.

ಬಿ.ಎ. ವ್ಯಾಸಂಗ ಅಪೂರ್ಣ ಗೊಳಿಸಿದ್ದರಿಂದ `ಪದವಿ~ ಪಡೆಯಬೇಕು ಎಂಬ ಅವರ ಆಸೆ ಈಡೇರಲಿಲ್ಲ. ಆದರೂ, ಅವರು ಹಲವಾರು ಶ್ರೇಷ್ಠ `ಪದವಿ~ಗಳ ಪುರಸ್ಕಾರಕ್ಕೆ ಭಾಜನ ರಾದರು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ, ಸಾಹಿತಿ ಡಾ. ಎಂ.ಎಸ್. ಶೇಖರ್ ಅವರಿಗೆ, `ಕೆಎಸ್‌ಎನ್~ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪೊಲೀಸ್ ಇನ್ಸ್‌ಪೆಕ್ಟರ್ ಜಿ.ನಾಗ ರಾಜು, ಅಖಿಲ ಕರ್ನಾಟಕ ಸಾಂಸ್ಕೃತಿಕ ವೇದಿಕೆ ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್ ಹಾಗೂ ರೈಲ್ವೆ ಇಲಾಖೆ ಯಲ್ಲಿನ ಮುಖ್ಯ ಪೇದೆ ಮಲ್ಲೇಶ್ ಅವರಿಗೆ `ಕೆಎಸ್‌ನ~ ಸಮಾಜಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶಾಸಕ ಎಂ.ಶ್ರೀನಿವಾಸ್ ಉದ್ಘಾಟಿಸಿದರು. ಬಳಗದ ಜಿಲ್ಲಾ ಅಧ್ಯಕ್ಷ ಟಿ.ಸತೀಶ್ ಜವರೇಗೌಡ, ಮಂಡ್ಯ ತಾಲ್ಲೂಕು ಘಟಕ ಅಧ್ಯಕ್ಷ ಕೊತ್ತತ್ತಿ ಎಂ.ರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT