ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವ್ಯಾ, ಚೇತನಾಗೆ ಪ್ರಥಮ ಸ್ಥಾನ

ಪ್ರಬಂಧ ರಚನೆ ಮತ್ತು ಚರ್ಚಾ ಸ್ಪರ್ಧೆ
Last Updated 21 ಡಿಸೆಂಬರ್ 2013, 6:53 IST
ಅಕ್ಷರ ಗಾತ್ರ

ಮಂಡ್ಯ: ರಾಜ್ಯ ಸಹಕಾರ ಮಹಾಮಂಡಳ ಹಾಗೂ ಮಂಡ್ಯ ಜಿಲ್ಲಾ ಸಹಕಾರ ಯೂನಿಯನ್‌ ಸಹಯೋಗದಲ್ಲಿ ಶುಕ್ರವಾರ ನಗರದ ಲಕ್ಷ್ಮೀ ಜನಾರ್ದನ ಬಾಲಕಿಯರ ಪದವಿಪೂರ್ವ ಕಾಲೇಜು ಆವರಣದಲ್ಲಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಕ್ರಮವಾಗಿ ಪ್ರಬಂಧ ರಚನೆ ಮತ್ತು ಚರ್ಚಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತರ ವಿವರ ಇಂತಿದೆ.

ಪ್ರೌಢಶಾಲಾ ವಿಭಾಗ: ಆರ್‌. ಕಾವ್ಯಾ (ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ, ಪೊಲೀಸ್‌ ಕಾಲೊನಿ ಮಂಡ್ಯ) –1, ಜೆ.ಪಿ. ಪೂಜಾ (ಸೇಂಟ್‌ ಜೋಸೆಫ್‌, ಮಂಡ್ಯ) –2, ಎಂ.ಆರ್‌. ಮೇಘನಾ (ಬಾಲಕಿಯರ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ, ಅರ್ಕೇಶ್ವರ ನಗರ) –3.

ಮಂಡ್ಯದ ಪೊಲೀಸ್‌್ ಕಾಲೊನಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಪಾರಿತೋಷಕ ಪಡೆದುಕೊಂಡಿತು.
ಕಾಲೇಜು ವಿಭಾಗ: ಸಿ. ಚೇತನಾ (ಸ.ಪ.ಪೂ.ಕಾಲೇಜು, ಕಲ್ಲುಕಟ್ಟಡ ಮಂಡ್ಯ) –1, ವಿ. ಸುಮಾ (ಆರ್‌.ಕೆ. ಪ.ಪೂ.ಕಾಲೇಜು, ಕೆ.ಹೊನ್ನಲಗೆರೆ) –2, ಎನ್‌.ಕೆ. ಆಶಾ (ಬಾಲಕಿಯರ ಪದವಿ ಪೂರ್ವ ಕಾಲೇಜು ಅರ್ಕೇಶ್ವರ ನಗರ) –3.
ಮಂಡ್ಯದ ಕಲ್ಲುಕಟ್ಟಡ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಪಾರಿತೋಷಕ ಪಡೆಯಿತು.

ಮಂಡ್ಯ ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವ್ಯವಸ್ಥಾಪಕ ನಿರ್ದೇಶಕ ಬಿ. ನಾಗರಾಜು ಬಹುಮಾನ ವಿತರಿಸಿದರು. ಸಹಾಯಕ ಸಹಕಾರ ಶಿಕ್ಷಣಾಧಿಕಾರಿ (ಪ್ರಭಾರ) ಕೆ. ಮಲ್ಲಯ್ಯ, ಉಪನ್ಯಾಸಕ ಕೆಂಪೇಗೌಡ, ಉಪನ್ಯಾಸಕಿ ಭಾರತಿ, ಜಿಲ್ಲಾ ಸಹಕಾರ ಯೂನಿಯನ್‌ ಸಿಇಒ ಟಿ. ಶಿವಕುಮಾರ್‌ ಹಾಜರಿದ್ದರು. ಜಿಲ್ಲೆಯ ವಿವಿಧ ಶಾಲಾ– ಕಾಲೇಜುಗಳಿಂದ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT