ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವ್ಯಾ ಜೇಕಬ್ ಚಿನ್ನದ ಜಿಗಿತ

ಡೆಕ್ಕನ್ ಅಥ್ಲೆಟಿಕ್ ಕ್ಲಬ್‌ನ ವಾರಾಂತ್ಯ ಸ್ಪರ್ಧಾಕೂಟ: ಆಂಡ್ರಿಯಾಗೆ ಸ್ವರ್ಣ ಡಬಲ್
Last Updated 17 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕ್ಲಾರೆನ್ಸ್ ಹೈಸ್ಕೂಲಿನ ವಿದ್ಯಾರ್ಥಿನಿ ಕಾವ್ಯಾ ಜೇಕಬ್ `ಪ್ರಜಾವಾಣಿ' `ಡೆಕ್ಕನ್ ಹೆರಾಲ್ಡ್' ಪತ್ರಿಕಾ ಗುಂಪಿನ ಪ್ರಾಯೋಜಕತ್ವದ ಡೆಕ್ಕನ್ ಅಥ್ಲೆಟಿಕ್ ಕ್ಲಬ್ ಆಶ್ರಯದ 24ನೇ ವಾರ್ಷಿಕ `ವಾರಾಂತ್ಯ ಅಥ್ಲೆಟಿಕ್ ಕೂಟ'ದ ಎರಡನೇ ವಾರಾಂತ್ಯ ಅಥ್ಲೆಟಿಕ್ಸ್‌ನ 15ವರ್ಷ ವಯಸ್ಸಿನೊಳಗಿನ ಬಾಲಕಿಯರ ವಿಭಾಗದ ಲಾಂಗ್‌ಜಂಪ್ ಮತ್ತು ಟ್ರಿಪಲ್ ಜಂಪ್ ಸ್ಪರ್ಧೆಗಳಲ್ಲಿ ಬಂಗಾರದ ಸಾಮರ್ಥ್ಯ ತೋರಿದರು.

ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಈ ಕೂಟದ ಲಾಂಗ್‌ಜಂಪ್‌ನಲ್ಲಿ 4.72ಮೀಟರ್ಸ್ ದೂರ ಜಿಗಿದ ಇವರು, ಟ್ರಿಪಲ್ ಜಂಪ್‌ನಲ್ಲಿ 10.13 ಮೀಟರ್ಸ್ ಜಿಗಿದು ಗಮನಾರ್ಹ ಸಾಮರ್ಥ್ಯ ತೋರಿದರು. 12 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಲೆಗೆಸಿ ಸ್ಕೂಲ್‌ನ ಆಂಡ್ರಿಯಾ ಪಿಂಟೊ `ವೇಗದ ರಾಣಿ' (14.9ಸೆ.) ಎನಿಸಿದರೆ, ಲಾಂಗ್‌ಜಂಪ್‌ನಲ್ಲಿಯೂ (4.06ಮೀ.) ಬಂಗಾರದ ಸಾಧನೆ ತೋರಿ ಸ್ವರ್ಣ ಡಬಲ್ ಪಡೆದ ಹೆಗ್ಗಳಿಕೆಗೆ ಪಾತ್ರರಾದರು.

ಬಾಲಕಿಯರ ವಿಭಾಗದ ಫಲಿತಾಂಶಗಳು ಇಂತಿವೆ:
12ವರ್ಷದೊಳಗಿನವರ ವಿಭಾಗ: 100ಮೀ.ಓಟ: ಆಂಡ್ರಿಯ ಪಿಂಟೊ (ಲೆಗೆಸಿ ಸ್ಕೂಲ್) (ಕಾಲ: 14.9ಸೆ.)-1, ಎ.ಎಂ.ಸುಲಾ ಪ್ರಸಾದ್ (ಬೆಥನೆ ಹೈಸ್ಕೂಲು)-2, ಮಹಿಕಾ ಗೊನ್ಸಾಲ್ವೆಸ್-3 (ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಬಾಲಕಿಯರ ಹೈಸ್ಕೂಲು),

800ಮೀ. ಓಟ: ಸಂಜನಾ ಹೊಸ್ಕೆರೆ (ಡೆಕ್ಕನ್ ಇಂಟರ್‌ನ್ಯಾಶನಲ್ ಸ್ಕೂಲ್) (ಕಾಲ: 2ನಿ.59.3ಸೆ.)-1, ಅಶ್ವಿನಿ (ಸೇಂಟ್ ಯಶ್ ಪಬ್ಲಿಕ್ ಸ್ಕೂಲ್)-2, ತೇಜಸ್ವಿನಿ -3 (ಔಟ್‌ರಿಚ್ ಇಂಟರ್‌ನ್ಯಾಶನಲ್ ಸ್ಕೂಲ್),

1,500ಮೀ. ಓಟ: ತೇಜಸ್ವಿನಿ (ಔಟ್‌ರಿಚ್ ಇಂಟರ್‌ನ್ಯಾಶನಲ್ ಸ್ಕೂಲ್) (6ನಿ.12.6ಸೆ.)-1, ಸುಮೆದಾ ಪೂಜಾ-2, ಸ್ನಿಧಿ ಅರ್ಕೆರಿ -3 (ಇಬ್ಬರೂ ಡೆಕ್ಕನ್ ಇಂಟರ್‌ನ್ಯಾಶನಲ್ ಸ್ಕೂಲ್),

60ಮೀ. ಹರ್ಡಲ್ಸ್: ಕೃತಿಕಾ (ಹೋಲಿ ಏಂಜೆಲ್ಸ್ ಹಿರಿಯ ಪ್ರಾಥಮಿಕ ಶಾಲೆ) (ಕಾಲ: 13.6ಸೆ.)-1, ನಟೇಶಾ ಝವೇರಿ (ವಿದ್ಯಾನಿಕೇತನ ಶಾಲೆ)-2, ಸಾವತಿ ಶರವಣ (ಹೋಲಿ ಏಂಜೆಲ್ಸ್ ಹಿರಿಯ ಪ್ರಾಥಮಿಕ ಶಾಲೆ)-3,

ಲಾಂಗ್‌ಜಂಪ್: ಆಂಡ್ರಿಯಾ ಪಿಂಟೊ (ಲೆಗೆಸಿ ಸ್ಕೂಲ್) (ದೂರ: 4.06ಮೀ.)-1, ಅಪರಾಜಿತಾ ಜಯರಾಮ್ (ವಿದ್ಯಾನಿಕೇತನಾ ಸ್ಕೂಲ್)-2, ಮಿಹಿಕಾ ಗೌಸಾವೆಸ್ (ಸೇಂಟ್ ಫ್ರಾನ್ಸಿಸ್ ಬಾಲಕಿಯರ ಹೈಸ್ಕೂಲು)-3,

ಟ್ರಿಪಲ್ ಜಂಪ್: ಪಿ.ರೋಹಿತಾ ಚೌಧರಿ: (ದೂರ: 8.48ಮೀ.)-1, ಸಂಜನಾ ಹೊಸ್ಕೆರೆ-2 (ಇಬ್ಬರೂ ಡೆಕ್ಕನ್ ಇಂಟರ್‌ನ್ಯಾಶನಲ್ ಸ್ಕೂಲ್), ವಿ.ನಿಹಾರಿಕಾ (ಬೆಥನಿ ಹೈಸ್ಕೂಲು)-3,

ಹೈಜಂಪ್: ಅಪರಾಜಿತಾ ಜಯರಾಮ್ (ವಿದ್ಯಾನಿಕೇತನಾ ಸ್ಕೂಲ್) (ಎತ್ತರ: 1.20ಮೀ.)-1, ರೋಹಿತಾ ಚೌಧರಿ -2, ಎಸ್.ಭಾವನಾ -3 (ಇಬ್ಬರೂ ಡೆಕ್ಕನ್ ಇಂಟರ್‌ನ್ಯಾಶನಲ್ ಸ್ಕೂಲ್),

ಶಾಟ್‌ಪಟ್: ಮೇಘಾ ರಾಮ ಪ್ರಯನ್ (ವಿದ್ಯಾನಿಕೇತನಾ ಸ್ಕೂಲ್) (ದೂರ: 6.05ಮೀ.)-1, ಫೈಜಾ ಫಾಹ್ಮಾನ್ (ಹೋಲಿ ಏಂಜೆಲ್ಸ್ ಹಿರಿಯ ಪ್ರಾಥಮಿಕ ಶಾಲೆ)-2, ಡಿ.ರಶ್ಮಿ (ಮಿತ್ರಾಲಯ ಬಾಲಕಿಯರ ಹೈಸ್ಕೂಲು)-3.

15ವರ್ಷದೊಳಗಿನವರ ವಿಭಾಗ:
100ಮೀ. ಓಟ: ಟೂಮಿ ವೈಷ್ಣವಿ (ಬಾಲ್ಡ್‌ವಿನ್ ಹೈಸ್ಕೂಲು) (ಕಾಲ: 13.4ಸೆ.)-1, ಇಳಾ ಮಾನ್ಯಾ ನವೀನ್ -2, ಎಂ.ಬಿ.ಮುತ್ತಮ್ಮ -3 (ಇಬ್ಬರೂ ಸೇಕ್ರೆಡ್‌ಹಾರ್ಟ್ ಬಾಲಕೀಯರ ಹೈಸ್ಕೂಲು),

800ಮೀ. ಓಟ: ತಾನೀಷಾ.ವಿ. ಪಾಂಚಾಲ್ (ಕಾಲ: 2ನಿ.50.9ಸೆ.)-1 (ವಿದ್ಯಾನಿಕೇತನಾ ಶಾಲೆ), ಜೆಶ್ರಿತಾ ಕುಮಾರಿ (ಕೇಂದ್ರೀಯ ವಿದ್ಯಾಲಯ)-2, ಜ್ಯೋತಿಕಾ ರೋಶನ್-3 (ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಸ್ಕೂಲ್),

1,500ಮೀ. ಓಟ: ಎ.ಪದ್ಮಾವತಿ (ಕಾಲ: 5ನಿ.48.4ಸೆ.) (ಸೇಂಟ್ ಯಶ್ ಪಬ್ಲಿಕ್ ಸ್ಕೂಲ್)-1, ತಾನೀಶಾ ಪಾಂಚಾಲ್ (ವಿದ್ಯಾನಿಕೇತನ ಶಾಲೆ )-2, ಎಸ್.ನಿಖಿತಾ-3 (ಆರ್.ಟಿ.ನಗರ ಪಬ್ಲಿಕ್ ಸ್ಕೂಲ್),

100ಮೀ. ಹರ್ಡಲ್ಸ್: ವಿಹಾ ಅತ್ರಿ (ಕ್ಲಾರೆನ್ಸ್ ಹೈಸ್ಕೂಲು) (18.2ಸೆ.) -1, ಟೂಮಿ ವೈಷ್ಣವಿ -2, ರೇಷ್ಮಾ ರಾಯ್ -3 (ಇಬ್ಬರೂ ಬಾಲ್ಡ್‌ವಿನ್ ಬಾಲಕಿಯರ ಹೈಸ್ಕೂಲು), ಲಾಂಗ್‌ಜಂಪ್: ಕಾವ್ಯಾ ಆ್ಯನಿ  ಜಾಕೋಬ್ (ಕ್ಲಾರೆನ್ಸ್ ಹೈಸ್ಕೂಲು) (ದೂರ: 4.72ಮೀ.)-1, ತಾನಿಷಾ (ಕ್ಲಾರೆನ್ಸ್ ಹೈಸ್ಕೂಲು)-2, ತಾನಿಷಾ ನಾಯ್ಕ (ಬಾಲ್ಡ್‌ವಿನ್ ಬಾಲಕಿಯರ ಹೈಸ್ಕೂಲು)-3,

ಟ್ರಿಪಲ್‌ಜಂಪ್: ಕಾವ್ಯಾ ಆ್ಯನಿ ಜಾಕೋಬ್ (ಕ್ಲಾರೆನ್ಸ್ ಹೈಸ್ಕೂಲು) (ದೂರ: 10.13ಮೀ.)-1, ವಿಹಾ ಅತ್ರಿ (ಕ್ಲಾರೆನ್ಸ್ ಹೈಸ್ಕೂಲು)-2, ತಾನಿಷಾ (ಬೆಥನಿ ಹೈಸ್ಕೂಲು)-3, ಹೈಜಂಪ್: ಜಿ.ಅನುಪಮಾ (ಸಿ.ಎಂ.ಆರ್.ನ್ಯಾಶನಲ್ ಪಬ್ಲಿಕ್ ಸ್ಕೂಲ್)

(ಎತ್ತರ: 1.50ಮೀ.)-1, ಪಿ.ಪಿ.ಹರ್ಷಿಣಿ (ಬಾಲ್ಡ್‌ವಿನ್ ಬಾಲಕಿಯರ ಹೈಸ್ಕೂಲು)-2, ಸಿ.ದೃತಿ (ಹೋಲಿ ಏಂಜೆಲ್ಸ್ ಹಿರಿಯ ಪ್ರಾಥಮಿಕ ಶಾಲೆ)-3,

ಶಾಟ್‌ಪಟ್: ಸ್ಮಯನಾ ಕಾಮತ್ (ಡೆಕ್ಕನ್ ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್) (ದೂರ: 8.88ಮೀ.)-1, ಅಲಿಯಾ ತನ್ವೀರ್ (ಬಾಲ್ಡ್‌ವಿನ್ ಬಾಲಕಿಯರ ಹೈಸ್ಕೂಲು)-2, ಆರ್.ಸಹನಾ (ನಿರ್ಮಲರಾಣಿ ಇಂಗ್ಲಿಷ್ ಪ್ರಾಥಮಿಕ ಶಾಲೆ)-3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT