ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ ವರದಿ ವಿರುದ್ಧ ಧರಣಿ

Last Updated 9 ಜುಲೈ 2012, 5:40 IST
ಅಕ್ಷರ ಗಾತ್ರ

ಧಾರವಾಡ: ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶವನ್ನು ಪಾಕ್ ಆಡಳಿತ ಕಾಶ್ಮೀರ ಮಾಡಬೇಕು ಎಂದು ಸಲ್ಲಿಸಿರುವ ವರದಿಯನ್ನು ಯಾವುದೇ ಕಾರಣಕ್ಕೂ ಅಂಗೀಕರಿಸಬಾರದು ಎಂದು ಆಗ್ರಹಿಸಿ ಜಮ್ಮು ಮತ್ತು ಕಾಶ್ಮಿರ ಹೋರಾಟ ಸಮಿತಿ ವತಿಯಿಂದ ಭಾನುವಾರ ನಗರದ ವಿವೇಕಾನಂದ ವೃತ್ತದಲ್ಲಿ ಧರಣಿ ನಡೆಯಿತು.

`1947ರ ಅಕ್ಟೋಬರ್ 26 ರಂದು ಜಮ್ಮು ಮತ್ತು ಕಾಶ್ಮೀರದ ಅಂದಿನ ಮಹಾರಾಜ ಹರಿಸಿಂಗ್ ತಮ್ಮ ರಾಜ್ಯವನ್ನು ಸಂವಿಧಾನ ಬದ್ಧವಾಗಿ ಭಾರತದ ಜೊತೆ ವಿಲೀನಗೋಳಿಸಿದ್ದರು.

ಆಂದಿನಿಂದ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿವೆ. ಹಾಗೂ 1994 ರಂದು ಭಾರತದ ಸಂಸತ್ತು ಈ ಭಾಗವನ್ನು ತನ್ನ ಅವಿಭಾಜ್ಯ ಅಂಗ ಎಂಬ ನಿರ್ಣಯವನ್ನೂ ಸಹ ಮಾಡಿದೆ. ಆದರೆ ಭಾರತ ಸರ್ಕಾರದ ಗೃಹ ಸಚಿವಾಲಯ ಕಳೆದ 2010 ಅಕ್ಟೋಬರ್ 13 ರಂದು ಜಮ್ಮು ಮತ್ತು ಕಾಶ್ಮೀರ ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ತ್ರಿಸದಸ್ಯ ಸಂವಾದಕರ ತಂಡವೊಂದನ್ನು ರಚನೆ ಮಾಡಿತ್ತು. ಆ ತಂಡ ತನ್ನ ವರದಿ ಕೇಂದ್ರ ಸರಕಾರಕ್ಕೆ ಸಲ್ಲಿಸಿದೆ. ಆ  ವರದಿ ಅಸಂಬಂಧವಷ್ಟೇ ಅಲ್ಲದೇ ದೇಶದ ಏಕತೆ, ಅಖಂಡತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ಉಂಟುಮಾಡುವಂತಿದೆ~ ಎಂದು ಧರಣಿ ನಿರತರು ಹೇಳಿದರು.

`ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ 370 ನೇ ವಿಧಿ ರಾಜ್ಯದಲ್ಲಿ ಸದಾ ಜಾರಿಯಲ್ಲಿರಬೇಕು. 370ನೇ ವಿಧಿಯಲ್ಲಿ ಉಲ್ಲೇಖಿತವಾಗಿರುವ   ತಾತ್ಕಾಲಿಕ ಎಂಬ ಶಬ್ದವನ್ನು ಕಿತ್ತು ಹಾಕಿ ಆ ಭಾಗದಲ್ಲಿ ವಿಶೇಷ ಎಂದು ಬಳಸಬೇಕು. ಜೊತೆಗೆ ರಾಜ್ಯದ ವಿಶೇಷ ಅಧಿಕಾರಕ್ಕೆ ಸಂಬಂದಪಟ್ಟ ಸಂಗತಿಗಳನ್ನು ಮಾರ್ಪಾಡು ಮಾಡಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ವರದಿ ಜಾರಿಗೆ ಬಂದಲ್ಲಿ ಮುಂದೆ ನಾವು ಇಡೀ ಕಾಶ್ಮೀರವನ್ನು ಕಳೆದುಕೊಳ್ಳಬೇಕಾಗುತ್ತದೆ.

ಆದ್ದರಿಂದ ಸಮಿತಿಯ ವರದಿಯನ್ನು ಕೇಂದ್ರ ಸರ್ಕಾರ ಕೂಡಲೇ ತಿರಸ್ಕರಿಸಬೇಕು~ ಎಂದು ಅವರು ಆಗ್ರಹಿಸಿದರು.

ಸಂಘಟನೆಯ ಕಾರ್ಯಕರ್ತರಾದ, ಜಯರಾಮ್‌ಜೀ, ಪ್ರಭಾಕರ, ಮಲ್ಲಿಕಾರ್ಜುನ ನಡಕಟ್ಟಿ, ವಕೀಲ ವೆಂಕಟೇಶ ಕರಿಕಲ್, ಪಾಲಿಕೆ ಸದಸ್ಯ ಶಿವು ಹಿರೇಮಠ, ಸಿದ್ದು ಕಲ್ಯಾಣಶೆಟ್ಟಿ, ರಾಜೇಶ್ವರಿ ಸಾಲಗಟ್ಟಿ, ಸುರೇಶ ಬೇದ್ರೆ, ಸುಜಾತಾ ಕಳ್ಳಿಮನಿ, ಶಂಕರ ಶೇಳಕೆ, ಬಸವರಾಜ ಬೆಣ್ಣಿ, ಮಹೇಶ್ವರಿ ಇತರರು ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT