ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸರವಳ್ಳಿ ಚಿತ್ರ ಸಂವಾದ

Last Updated 17 ಜೂನ್ 2011, 19:30 IST
ಅಕ್ಷರ ಗಾತ್ರ

ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಚಲನಚಿತ್ರ ಅಕಾಡೆಮಿ, ಸುಚಿತ್ರಾ ಫಿಲಂ ಸೊಸೈಟಿ, ಕೆ.ವಿ. ಸುಬ್ಬಣ್ಣ ಆಪ್ತಸಮೂಹ: ಶನಿವಾರ, ಭಾನುವಾರ (ಜೂನ್ 18, 19) ಸಾಹಿತ್ಯ ಚಲನಚಿತ್ರ ಅಧ್ಯಯನ ಸರಣಿಯಲ್ಲಿ ಗಿರೀಶ್ ಕಾಸರವಳ್ಳಿ ಅವರ ಚಲನಚಿತ್ರಗಳ ವಿಮರ್ಶೆ, ಸಂವಾದ ಹಾಗೂ ಪ್ರದರ್ಶನ

ಶನಿವಾರ ಬೆಳಿಗ್ಗೆ 10.30ಕ್ಕೆ ಡಾ. ಯು.ಆರ್. ಅನಂತಮೂರ್ತಿ ಅವರಿಂದ ವಿಚಾರಗೋಷ್ಠಿ ಉದ್ಘಾಟನೆ. ಟಿ.ಎಸ್.ನಾಗಾಭರಣ ಅವರಿಂದ ಛಾಯಾಚಿತ್ರ ಪ್ರದರ್ಶನ ಉದ್ಘಾಟನೆ. ಅಧ್ಯಕ್ಷತೆ: ಪ್ರೊ. ಎಂ.ಎಚ್. ಕೃಷ್ಣಯ್ಯ. ಪ್ರಾಸ್ತಾವಿಕ ಮಾತು: ಪ್ರೊ. ಎನ್. ಮನು ಚಕ್ರವರ್ತಿ.

ಬೆಳಿಗ್ಗೆ 11.30 ರಿಂದ ಗೋಷ್ಠಿ-1ರಲ್ಲಿ ಎನ್. ವಿದ್ಯಾಶಂಕರ್ (ಕರ್ನಾಟಕ ಸಾಂಸ್ಕೃತಿಕ ರಾಜಕೀಯ: ಕಾಸರವಳ್ಳಿ ಅವರ ಚಿತ್ರಗಳ ತಾತ್ವಿಕ ಅನುಸಂಧಾನ), ಕೆ.ವಿ. ಅಕ್ಷರ (ಕಾಸರವಳ್ಳಿ ಅವರ ಚಲನಚಿತ್ರಗಳ ಮಾರ್ಗ). ಅಧ್ಯಕ್ಷತೆ: ಪ್ರಕಾಶ ಬೆಳವಾಡಿ.

ಮಧ್ಯಾಹ್ನ 2.30ರಿಂದ ಗೋಷ್ಠಿ-2ರಲ್ಲಿ ಅನಿಲ್ ಕುಮಾರ್ (ಕಾಸರವಳ್ಳಿ ಅವರ ಪ್ರತಿಮಾಲೋಕ). ಅಧ್ಯಕ್ಷತೆ: ಸುರೇಶ್ ಜಯರಾಮ್. ಕಾಸರವಳ್ಳಿ ನಿರ್ದೇಶಿಸಿದ ಕೆ.ಕೆ. ಹೆಬ್ಬಾರ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಸಂವಾದ.

ಸಂಜೆ 5ಕ್ಕೆ ಸಾಹಿತ್ಯ ಸಂಜೆಯಲ್ಲಿ ಡಾ. ಯು.ಆರ್. ಅನಂತಮೂರ್ತಿ ಅವರಿಂದ `ಗುಲಾಬಿ ಟಾಕೀಸ್~  ಚಿತ್ರಪಠ್ಯ ಕೃತಿ ಲೋಕಾರ್ಪಣೆ. ಅಧ್ಯಕ್ಷತೆ: ಡಾ. ಏಜಾಸುದ್ದೀನ್. ಗಿರೀಶ್ ಕಾಸರವಳ್ಳಿ ಅವರೊಂದಿಗೆ ಸಂವಾದದಲ್ಲಿ ಎಂ.ಎಚ್. ಕೃಷ್ಣಯ್ಯ, ಅನಂತಮೂರ್ತಿ, ಟಿ.ಪಿ. ಅಶೋಕ, ಕೆ.ವಿ. ಅಕ್ಷರ, ಪ್ರೊ. ಎನ್. ಮನುಚಕ್ರವರ್ತಿ. ಸಂಜೆ 6ಕ್ಕೆ `ಕನಸೆಂಬೊ ಕುದುರೆಯನೇರಿ~ ಸಿನಿಮಾ.

ಭಾನುವಾರ ಬೆಳಿಗ್ಗೆ 10ಕ್ಕೆ ಗೋಷ್ಠಿ -3ರಲ್ಲಿ ಸಾಹಿತ್ಯ ಕೃತಿಗಳು ಮತ್ತು ಕಾಸರವಳ್ಳಿ ಚಿತ್ರಗಳು. ಮಂಜುನಾಥ್ (ಪ್ರಕ್ರಿಯೆಯ ಅಧ್ಯಯನ), ಎಂ.ಎಸ್‌ನಾಗರಾಜರಾವ್ (ಅಕ್ಷರದಿಂದ ಪ್ರತಿಮೆಗೆ- ಕಾಸರವಳ್ಳಿ ಅವರ ಪಠ್ಯಗಳ ಕಲ್ಪನೆ). ಅಧ್ಯಕ್ಷತೆ: ಟಿ.ಪಿ. ಅಶೋಕ. ಮಧ್ಯಾಹ್ನ 2 ರಿಂದ ಗೋಷ್ಠಿ 4ರಲ್ಲಿ ಬಿ. ಸುರೇಶ (ಕಾಸರವಳ್ಳಿ ಅವರ ಚಿತ್ರಗಳ ಪ್ರತಿಮಾಲೋಕ: ಸೌಂದರ್ಯ ಮೀಮಾಂಸೆ, ಶೈಲಿ, ಬಂಧ, ಚೌಕಟ್ಟು), ದೀಪಾ ಗಣೇಶ್ (ಕಾಸರವಳ್ಳಿ ಅವರ ಚಿತ್ರಗಳಲ್ಲಿ ಸ್ತ್ರೀ ಪಾತ್ರಗಳ ವಿಭಿನ್ನ ನೆಲೆಗಳು). ಅಧ್ಯಕ್ಷತೆ : ಪ್ರೊ. ಎಂ.ಎಚ್. ಕೃಷ್ಣಯ್ಯ. ಸಂಜೆ 5ಕ್ಕೆ ಗಿರೀಶ್ ಕಾಸರವಳ್ಳಿ ಅವರೊಂದಿಗೆ ಎನ್. ಮನುಚಕ್ರವರ್ತಿ. ಅಧ್ಯಕ್ಷತೆ: ಟಿ.ಎಸ್. ನಾಗಾಭರಣ. ಸಂಜೆ 6.45ಕ್ಕೆ `ಬಣ್ಣದ ವೇಷ~ ಸಿನಿಮಾ.

ಸ್ಥಳ: ಸುಚಿತ್ರ ಸಭಾಂಗಣ, ಬನಶಂಕರಿ 2ನೇ ಹಂತ. ಎರಡೂ ದಿನ ಗಿರೀಶ್ ಕಾಸರವಳ್ಳಿ ಅವರ ಪುಸ್ತಕಗಳ ಪ್ರದರ್ಶನ.  ಜ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT