ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕಾಸಿಗಾಗಿ ಸುದ್ದಿ' ಪ್ರಕಟಿಸುವುದಿಲ್ಲ

Last Updated 8 ಏಪ್ರಿಲ್ 2013, 8:02 IST
ಅಕ್ಷರ ಗಾತ್ರ

ಓದುಗರಿಗೆ ಬದ್ಧವಾಗಿರುವುದು `ಪ್ರಜಾವಾಣಿ'ಯ ಸ್ಥಾಯಿ ಗುಣಗಳಲ್ಲಿ ಒಂದು. ಈ ಬದ್ಧತೆಯೇ, ರಾಜ್ಯ ವಿಧಾನಸಭಾ ಚುನಾವಣಾ ಪ್ರಕ್ರಿಯೆ ಆರಂಭವಾಗಿರುವ ಈ ಹೊತ್ತಿನಲ್ಲಿ ಸುದ್ದಿ ಮತ್ತು ಜಾಹೀರಾತುಗಳಿಗೆ ಸಂಬಂಧಿಸಿದಂತೆ ಸ್ಪಷ್ಟ ನೀತಿ ಸಂಹಿತೆ ಅಳವಡಿಸಿಕೊಳ್ಳಲು ನಮ್ಮನ್ನು ಪ್ರೇರೇಪಿಸಿದೆ.

`ಪ್ರಜಾವಾಣಿ' ಕಾಸಿಗಾಗಿ ಸುದ್ದಿ ಪ್ರಕಟಿಸುವುದಿಲ್ಲ. ಸುದ್ದಿಯನ್ನು ಹೋಲುವಂತೆ ವಿನ್ಯಾಸಗೊಳಿಸಿದ ಜಾಹೀರಾತು ಪ್ರಕಟಿಸುವ ಸಂದರ್ಭದಲ್ಲಿ ಅದರ ಜೊತೆಗೆ `ಜಾಹೀರಾತು' ಎಂಬ ಘೋಷಣೆಯೂ ಇರುತ್ತದೆ.

`ಪ್ರಜಾವಾಣಿ'ಗೆ ಜಾಹೀರಾತು ನೀಡುವ ಯಾವುದೇ ಅಭ್ಯರ್ಥಿ, ತನ್ನ ಎದುರಾಳಿ ಅಭ್ಯರ್ಥಿ ಅಥವಾ ಪಕ್ಷದ ಮೇಲೆ ಆಧಾರ ರಹಿತ, ನಿಂದನಾತ್ಮಕ ಹಾಗೂ ಮಾನಹಾನಿಕರ ಆರೋಪಗಳನ್ನು ಮಾಡಲು ಅವಕಾಶ ಇರುವುದಿಲ್ಲ.

`ಪ್ರಜಾವಾಣಿ'ಯಲ್ಲಿ ಸುದ್ದಿ ಅಥವಾ ಛಾಯಾಚಿತ್ರಗಳ ಪ್ರಕಟಣೆಗೆ ಯಾರಾದರೂ ನಿಮ್ಮಲ್ಲಿ ಹಣ ಕೇಳಿದರೆ, ಅಥವಾ ಹೀಗೆ ಹಣ ಕೇಳುವುದು ನಿಮ್ಮ ಗಮನಕ್ಕೆ ಬಂದರೆ ತಕ್ಷಣ ಈ  ಕೆಳಗಿರುವ ದೂರವಾಣಿ ಸಂಖ್ಯೆಗಳು, ಇ-ಮೇಲ್ ವಿಳಾಸ ಅಥವಾ ಅಂಚೆ ವಿಳಾಸವನ್ನು ಸಂಪರ್ಕಿಸಿ ಮಾಹಿತಿ ನೀಡಿ.

ದೂರವಾಣಿ ಸಂಖ್ಯೆ:
ಸುರೇಶ್ ಬಿ. ವಿ. - 94484 70167
ಕೇಶವ ಜಿ. ಝಿಂಗಾಡೆ - 93416 50300
ಉದಯಕುಮಾರ್ ಎನ್. - 94811 04705


ಇ-ಮೇಲ್: electionwatch@prajavani.co.in

ವಿಳಾಸ:
ಸಂಪಾದಕರು, ಚುನಾವಣಾ ವಿಭಾಗ, `ಪ್ರಜಾವಾಣಿ', ನಂ.75, ಮಹಾತ್ಮಾ ಗಾಂಧಿ ರಸ್ತೆ, ಬೆಂಗಳೂರು-560001

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT