ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಂಗ್ಸ್ ಇಲೆವೆನ್‌ಗೆ ಭರ್ಜರಿ ಜಯ

Last Updated 21 ಏಪ್ರಿಲ್ 2011, 19:15 IST
ಅಕ್ಷರ ಗಾತ್ರ

ಮೊಹಾಲಿ (ಪಿಟಿಐ): ಶಾನ್ ಮಾರ್ಷ್ (71, 42 ಎಸೆತ, 6 ಬೌಂ, 3 ಸಿಕ್ಸರ್) ಅವರ ಅಬ್ಬರದ ಅರ್ಧಶತಕ ಮತ್ತು ಪಾಲ್ ವಲ್ತಾಟಿ (46, 31 ಎಸೆತ, 4 ಬೌಂ, 3 ಸಿಕ್ಸರ್) ತೋರಿದ ಆಕ್ರಮಣಕಾರಿ ಬ್ಯಾಟಿಂಗ್ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ರಾಜಸ್ತಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 48 ರನ್‌ಗಳ ಭರ್ಜರಿ ಗೆಲುವು ಪಡೆಯಿತು.

ಪಂಜಾಬ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಗುರುವಾರ ಮೊದಲು ಬ್ಯಾಟ್ ಮಾಡಿದ ಆ್ಯಡಮ್ ಗಿಲ್‌ಕ್ರಿಸ್ಟ್ ನೇತೃತ್ವದ ತಂಡ  20 ಓವರ್‌ಗಳಲ್ಲಿ 7 ವಿಕೆಟ್‌ಗೆ 195 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಶೇನ್  ವಾರ್ನ್ ಸಾರಥ್ಯದ ರಾಯಲ್ಸ್ ತಂಡ 20 ಓವರ್‌ಗಳಲ್ಲಿ  7 ವಿಕೆಟ್ ನಷ್ಟಕ್ಕೆ 147 ರನ್‌ಗಳನ್ನು ಮಾತ್ರ ಗಳಿಸಿತು.

ಆ್ಯಡಮ್ ಗಿಲ್‌ಕ್ರಿಸ್ಟ್ (16 ಎಸೆತಗಳಲ್ಲಿ 28) ಮತ್ತು ವಲ್ತಾಟಿ ಅವರು ಮೊದಲ ವಿಕೆಟ್‌ಗೆ ಕೇವಲ 4.2 ಓವರ್‌ಗಳಲ್ಲಿ 67 ರನ್‌ಗಳನ್ನು ಸೇರಿಸಿ ಪಂಜಾಬ್ ತಂಡಕ್ಕೆ ಕನಸಿನ ಆರಂಭ ನೀಡಿದರು. ವಲ್ತಾಟಿ ತಮ್ಮ ಅತ್ಯುತ್ತಮ ಫಾರ್ಮ್‌ನ್ನು ಮತ್ತೆ ಮುಂದುವರಿಸಿದರು.

ಇವರಿಬ್ಬರು ಔಟಾದ ಬಳಿಕ ಮಾರ್ಷ್ ತಮ್ಮ ಬ್ಯಾಟಿಂಗ್ ತಾಕತ್ತನ್ನು ತೋರಿಸಿಕೊಟ್ಟರು. ಕೊನೆಯ ಐದು ಓವರ್‌ಗಳನ್ನು ಸಮರ್ಥವಾಗಿ ಬಳಸಿಕೊಂಡಿದ್ದಲ್ಲಿ, ಪಂಜಾಬ್ ತಂಡದ ಮೊತ್ತ ಇನ್ನೂ ಹೆಚ್ಚುವ ಸಾಧ್ಯತೆಯಿತ್ತು.

15 ಓವರ್‌ಗಳ ಕೊನೆಗೆ ಎರಡು ವಿಕೆಟ್‌ಗೆ 169 ರನ್ ಗಳಿಸಿದ್ದ ತಂಡ ಕೊನೆಯ ಐದು ಓವರ್‌ಗಳಲ್ಲಿ ಕಲೆಹಾಕಿದ್ದು 26 ರನ್ ಮಾತ್ರ. ಕಿಂಗ್ಸ್ ಇಲೆವೆನ್ ಬ್ಯಾಟ್ಸ್‌ಮನ್‌ಗಳ ಕೈಯಲ್ಲಿ ಸರಿಯಾಗಿ ಪೆಟ್ಟುತಿಂದದ್ದು ಸಿದ್ಧಾರ್ಥ್ ತ್ರಿವೇದಿ ಮತ್ತು ಶೇನ್ ವಾರ್ನ್. ಇವರಿಬ್ಬರು ತಮ್ಮ 4ಓವರ್‌ಗಳಲ್ಲಿ ಕ್ರಮವಾಗಿ 59 ಹಾಗೂ 50 ರನ್‌ಗಳನ್ನು ಬಿಟ್ಟುಕೊಟ್ಟರು. ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ಯಲು ಅಭಿಷೇಕ್ ಮನೇರಿಯಾ (34, 26ಎಸೆತ, 2ಬೌಂ, 1ಸಿಕ್ಸರ್) ನಡೆಸಿದ ಯತ್ನ ವಿಫಲವಾಯಿತು.

ಸ್ಕೋರು ವಿವರ

ಕಿಂಗ್ಸ್ ಇಲೆವೆನ್ ಪಂಜಾಬ್: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 195
ಆ್ಯಡಮ್ ಗಿಲ್‌ಕ್ರಿಸ್ಟ್ ಸಿ ಟೇಟ್ ಬಿ ಶೇನ್ ವ್ಯಾಟ್ಸನ್  28
ಪಾಲ್ ವಲ್ತಾಟಿ ಸಿ ಟೇಟ್ ಬಿ ಶೇನ್ ವಾರ್ನ್  46
ಶಾನ್ ಮಾರ್ಷ್ ಸಿ ಮತ್ತು ಬಿ ಶೇನ್ ವ್ಯಾಟ್ಸನ್  71
ದಿನೇಶ್ ಕಾರ್ತಿಕ್ ಸಿ ಯಾಗ್ನಿಕ್ ಬಿ ಶಾನ್ ಟೇಟ್  21
ಅಭಿಷೇಕ್ ನಾಯರ್ ರನೌಟ್  01
ರ್ಯಾನ್ ಮೆಕ್‌ಲಾರೆನ್ ಸಿ ರಾವತ್ ಬಿ ಶಾನ್ ಟೇಟ್  02
ಸನ್ನಿ ಸಿಂಗ್ ಔಟಾಗದೆ  06
ಪಿಯೂಷ್ ಚಾವ್ಲಾ ಬಿ ಶಾನ್ ಟೇಟ್  04
ಇತರೆ: (ಬೈ-1, ಲೆಗ್‌ಬೈ-5, ವೈಡ್-7, ನೋಬಾಲ್-3)  17
ವಿಕೆಟ್ ಪತನ: 1-67 (ಗಿಲ್‌ಕ್ರಿಸ್ಟ್; 4.2), 2-105 (ವಲ್ತಾಟಿ; 9.4), 3-175 (ಕಾರ್ತಿಕ್; 15.6), 4-178 (ನಾಯರ್; 16.5), 5-183 (ಮಾರ್ಷ್; 18.1), 6-190 (ಮೆಕ್‌ಲಾರೆನ್; 19.1), 7-195 (ಚಾವ್ಲಾ; 19.6)
ಬೌಲಿಂಗ್: ಸಿದ್ಧಾರ್ಥ್ ತ್ರಿವೇದಿ 4-0-59-0, ಶಾನ್ ಟೇಟ್ 4-1-22-3, ಶೇನ್ ವಾರ್ನ್ 4-0-51-1, ಶೇನ್ ವ್ಯಾಟ್ಸನ್ 4-0-24-2, ಸ್ಟುವರ್ಟ್ ಬಿನ್ನಿ 2-0-18-0, ಅಶೋಕ್ ಮೆನೇರಿಯ 1-0-7-0, ಅಭಿಷೇಕ್ ರಾವತ್ 1-0-8-0

ರಾಜಸ್ತಾನ್ ರಾಯಲ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 147
ಸ್ವಪ್ನಿಲ್ ಅಸ್ನೋಡ್ಕರ್ ಬಿ ಪ್ರವೀಣ್ ಕುಮಾರ್  09
ರಾಹುಲ್ ದ್ರಾವಿಡ್ ಬಿ ರ್ಯಾನ್ ಹ್ಯಾರಿಸ್ 08
ಶೇನ್ ವ್ಯಾಟ್ಸನ್ ಸಿ ಚಾವ್ಲಾ ಬಿ ಪ್ರವೀಣ್ ಕುಮಾರ್  24
ಸ್ಟುವರ್ಟ್ ಬಿನ್ನಿ ಸಿ ಚಾವ್ಲಾ ಬಿ ಮೆಕ್ ಲಾರೆನ್  30
ರಾಸ್ ಟೇಲರ್ ಎಲ್‌ಬಿಡಬ್ಲ್ಯು ಬಿ ಚಾವ್ಲಾ  00
ಅಶೋಕ್ ಮನೇರಿಯಾ ಸಿ ಮಾರ್ಷ್ ಬಿ ಭಟ್  34
ಅಭಿಷೇಕ್ ರಾವತ್ ಸಿ ಹ್ಯಾರಿಸ್ ಬಿ ಭಟ್   25
ದಿಶಾಂತ್ ಹರೇಂದ್ರ ಔಟಾಗದೇ  10
ಶೇನ್ ವಾರ್ನ್ ಔಟಾಗದೇ  05
ಇತರೆ: (ಲೆಗ್‌ಬೈ-1, ವೈಡ್-1)  02
ವಿಕೆಟ್ ಪತನ: 1-12 (ದ್ರಾವಿಡ್; 1.6), 2-18 (ಅಸ್ನೋಡ್ಕರ್;2.6), 3-47 (ವ್ಯಾಟ್ಸನ್; 6.3), 4-49        (ಟೇಲರ್; 7.6), 5-99 (ಬಿನ್ನಿ; 12.6), 6-124 (ಮನೇರಿಯಾ; 17.1), 7- 140 (ರಾವತ್;19.1).
ಬೌಲಿಂಗ್: ಪ್ರವೀಣ್ ಕುಮಾರ್ 4-0-22-2, ರ್ಯಾನ್ ಹಾರಿಸ್ 4-0-34-1, ಭಾರ್ಗವ್ ಭಟ್ 3-0-20-2, ಪಿಯೂಷ್ ಚಾವ್ಲಾ 4-0-24-1, ಪಾಲ್ ವಲ್ತಾಟಿ 2-0-19-0, ಮೆಕ್ ಲಾರೆನ್ 2-0-24-1, ಅಭಿಷೇಕ್ ನಾಯರ್ 1-0-3-0.
ಕಿಂಗ್ಸ್ ಇಲೆವನ್ ಪಂಜಾಬ್‌ಗೆ 48 ರನ್ ಜಯ
ಪಂದ್ಯ ಶ್ರೇಷ್ಠ: ಶಾನ್ ಮಾರ್ಷ್ (ಕಿಂಗ್ಸ್ ಇಲೆವನ್ ಪಂಜಾಬ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT