ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಂಗ್ಸ್ ಇಲೆವೆನ್‌ಗೆ ರೋಚಕ ಜಯ

Last Updated 21 ಏಪ್ರಿಲ್ 2013, 18:48 IST
ಅಕ್ಷರ ಗಾತ್ರ

ಮೊಹಾಲಿ (ಪಿಟಿಐ):  ಕಠಿಣ ಗುರಿಯನ್ನು ದಿಟ್ಟತನದಿಂದ ಬೆನ್ನಟ್ಟಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್ ಟ್ವೆಂಟಿ-20 ಟೂರ್ನಿಯ ಪಂದ್ಯದಲ್ಲಿ ಭಾನುವಾರ ಪುಣೆ ವಾರಿಯರ್ಸ್ ಎದುರು ಏಳು ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು.

ಪಂಜಾಬ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ   ವಾರಿಯರ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 185 ರನ್ ಪೇರಿಸಿತು. ಈ ಗುರಿಗೆ ಪ್ರತಿಯಾಗಿ  ಕಿಂಗ್ಸ್ ಇಲೆವೆನ್ ಆರಂಭಿಕ ಬ್ಯಾಟ್ಸ್‌ಮನ್ ಮನ್‌ದೀಪ್ ಸಿಂಗ್ (77, 58ಎಸೆತ, 7ಬೌಂಡರಿ) ಹಾಗೂ ಡೇವಿಡ್ ಮಿಲ್ಲರ್ (ಔಟಾಗದೆ 80, 41ಎಸೆತ, 5ಬೌಂಡರಿ, 5 ಸಿಕ್ಸರ್) ಗಳಿಸಿದರು. ಇದರ ಪರಿಣಾಮ ಪ್ರೀತಿ ಜಿಂಟಾ ಒಡೆತದನ ಕಿಂಗ್ಸ್ ಇಲೆವೆನ್ ಒಂದು ಎಸೆತ ಬಾಕಿ ಇರುವಂತೆಯೇ ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.

ಕಿಂಗ್ಸ್ ಇಲೆವೆನ್ ತಂಡ ಗೆಲುವು ಸಾಧಿಸಲು ಕೊನೆಯ ಓವರ್‌ನಲ್ಲಿ 16 ರನ್‌ಗಳು ಅಗತ್ಯವಿದ್ದವು. ಈ ವೇಳೆ ಆರ್ಭಟಿಸಿದ ಮಿಲ್ಲರ್ ಎರಡು ಅಮೋಘ ಸಿಕ್ಸರ್‌ಗಳನ್ನು ಸಿಡಿಸಿ ಪಂದ್ಯದ ಗತಿಯನ್ನೇ ಬದಲು ಮಾಡಿದರು. ಕೊನೆಯ ಎರಡು ಎಸೆತಗಳಿದ್ದಾಗ ಆರು ರನ್ ಅಗತ್ಯವಿತ್ತು. ಲೂಕ್ ರೈಟ್ ಬೌಲಿಂಗ್‌ನಲ್ಲಿ ಮಿಲ್ಲರ್ ಸಿಕ್ಸರ್ ಎತ್ತುತ್ತಿದ್ದಂತೆ `ಡಗ್ ಔಟ್'ನಲ್ಲಿ ಕುಳಿತಿದ್ದ ಸಹ ಆಟಗಾರರು ಖುಷಿಯಿಂದ ಕುಣಿದಾಡಿದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ವಾರಿಯರ್ಸ್ ತಂಡಕ್ಕೆ ಆ್ಯರನ್ ಫಿಂಚ್ (64, 42 ಎಸೆತ, 8 ಬೌಂ, 2 ಸಿಕ್ಸರ್) ಮತ್ತು ರಾಬಿನ್ ಉತ್ತಪ್ಪ (37, 33 ಎಸೆತ, 4 ಬೌಂ) ವೊದಲ ವಿಕೆಟ್‌ಗೆ 10.3 ಓವರ್‌ಗಳಲ್ಲಿ 83 ರನ್ ಸೇರಿಸಿ ವಾರಿಯರ್ಸ್‌ಗೆ ಉತ್ತಮ ಆರಂಭ ನೀಡಿದರು. 

ವಾರಿಯರ್ಸ್ ತಂಡದ ಮೊತ್ತ 180ರ ಗಡಿ ದಾಟಲು ಲೂಕ್ ರೈಟ್ ತೋರಿದ ಅಬ್ಬರದ ಆಟ ಕಾರಣ. ಮೊದಲ ಐಪಿಎಲ್ ಪಂದ್ಯವನ್ನಾಡಿದ ಇಂಗ್ಲೆಂಡ್‌ನ ಈ ಆಟಗಾರ 10 ಎಸೆತಗಳಲ್ಲಿ 34 ರನ್ ಸಿಡಿಸಿದರು. ತಾವೆದುರಿಸಿದ ಮೊದಲ ಆರೂ ಎಸೆತಗಳನ್ನು ಬೌಂಡರಿಗಟ್ಟಿದ ಅವರು ಮತ್ತೊಂದು ಎಸೆತವನ್ನು ಸಿಕ್ಸರ್‌ಗೆ ಅಟ್ಟಿ ರನ್ ವೇಗವನ್ನು ಹೆಚ್ಚಿಸಿದರು.
 

ಸ್ಕೋರ್ ವಿವರ :
ಪುಣೆ ವಾರಿಯರ್ಸ್ 20 ಓವರ್‌ಗಳಲ್ಲಿ 185ಕ್ಕೆ4
ರಾಬಿನ್ ಉತ್ತಪ್ಪ  ಸಿ  ಗಿಲ್‌ಕ್ರಿಸ್ಟ್ ಬಿ ಅವಾನಾ  37
ಆ್ಯರನ್ ಫಿಂಚ್ ಸಿ ಮನನ್ ವೊಹ್ರಾ ಬಿ ಗೋನಿ  64
ಯುವರಾಜ್ ಸಿ ಗುರುಕೀರತ್ ಬಿ ಮಹಮೂದ್  34
ಸ್ಟೀವನ್ ಸ್ಮಿತ್ ಔಟಾಗದೆ  06
ಲೂಕ್ ರೈಟ್ ಸಿ ಡೇವಿಡ್ ಹಸ್ಸಿ ಬಿ ಮಹಮೂದ್  34
ಅಭಿಷೇಕ್ ನಾಯರ್ ಔಟಾಗದೆ  02
ಇತರೆ: (ಲೆಗ್ ಬೈ-4, ವೈಡ್-4)  08

ವಿಕೆಟ್ ಪತನ: 1-83 (ಉತ್ತಪ್ಪ; 10.3), 2-124 (ಫಿಂಚ್; 15.1), 3-142 (ಯುವರಾಜ್; 17.1), 4-180 (ರೈಟ್; 19.2).
ಬೌಲಿಂಗ್: ಪ್ರವೀಣ್ ಕುಮಾರ್ 4-1-36-0, ಅಜರ್ ಮಹಮೂದ್ 4-0-42-2, ಪರ್ವಿಂದರ್ ಅವಾನಾ 4-0-38-1, ಮನ್‌ಪ್ರೀತ್ ಗೋನಿ 4-0-32-1, ಪಿಯೂಷ್ ಚಾವ್ಲಾ 4-0-33-0.

ಕಿಂಗ್ಸ್ ಇಲೆವೆನ್ 19.5 ಓವರ್‌ಗಳಲ್ಲಿ  3 ವಿಕೆಟ್‌ಗೆ 186
ಗಿಲ್‌ಕ್ರಿಸ್ಟ್ ಸಿ ಉತ್ತಪ್ಪ ಬಿ ಭುವನೇಶ್ವರ ಕುಮಾರ್  04
ಮನ್‌ದೀಪ್ ಸಿಂಗ್ ಔಟಾಗದೆ  77
ಅಜರ್ ಮಹಮೂದ್ ಎಲ್‌ಬಿಡಬ್ಲ್ಯು ಬಿ  ಮೆಂಡಿಸ್  00
ಮನನ್ ವೊಹ್ರಾ ಬಿ ಯುವರಾಜ್ ಸಿಂಗ್  22
ಡೇವಿಡ್ ಮಿಲ್ಲೆರ್ ಔಟಾಗದೆ  80

ಇತರೆ: (ಲೆಗ್ ಬೈ-2, ವೈಡ್-1)  03
ವಿಕೆಟ್ ಪತನ: 1-4 (ಗಿಲ್‌ಕ್ರಿಸ್ಟ್; 0.3), 2-5 (ಮಹಮೂದ್; 1.1), 3-58 (ವೊಹ್ರಾ; 6.4).
ಬೌಲಿಂಗ್: ಭುವನೇಶ್ವರ ಕುಮಾರ್ 4-0-31-1, ಅಜಂತಾ ಮೆಂಡಿಸ್ 4-0-38-1, ಅಶೋಕ್ ದಿಂಡಾ 4-0-37-0, ರಾಹುಲ್ ಶರ್ಮ  3-0-28-0, ಯುವರಾಜ್ ಸಿಂಗ್ 2-0-15-1, ಲೂಕ್ ರೈಟ್ 2.5-0-35-0.
ಫಲಿತಾಂಶ: ಕಿಂಗ್ಸ್ ಇಲೆವೆನ್ ಪಂಜಾಬ್‌ಗೆ 7 ವಿಕೆಟ್‌ಗಳ ಗೆಲುವು
ಪಂದ್ಯ ಶ್ರೇಷ್ಠ: ಡೇವಿಡ್ ಮಿಲ್ಲರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT