ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಂಗ್‌ಫಿಷರ್: 2ತಿಂಗಳ ಬಾಕಿ ವೇತನ ಪಾವತಿ

Last Updated 3 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಕಿಂಗ್‌ಫಿಷರ್ ಏರ್‌ಲೈನ್ಸ್ ಬಾಕಿ ಉಳಿಸಿಕೊಂಡಿದ್ದ 10 ತಿಂಗಳ ವೇತನದಲ್ಲಿ 2 ತಿಂಗಳ ವೇತನವನ್ನು ಸಿಬ್ಬಂದಿಗಳಿಗೆ ಬುಧವಾರ ಪಾವತಿಸಿದೆ.

`ಐಪಿಎಲ್' ಕ್ರಿಕೆಟ್ ಆರಂಭವಾಗಿರುವ ಹಿನ್ನೆಲೆಯಲ್ಲಿ ವಿಜಯ್ ಮಲ್ಯ, ಕಿಂಗ್‌ಫಿಷರ್ ಸಿಬ್ಬಂದಿಗೆ ವೇತನ ಪಾವತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಈಗ ಪಾವತಿಸಿರುವ ವೇತನ ಯಾವ ತಿಂಗಳಿಗೆ ಸೇರಿದ್ದು ಎನ್ನುವ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. 
ಸಾಲಕ್ಕೆ ಭದ್ರತೆಯಾಗಿ ನೀಡಿದ್ದ  `ಯುನೈಟೆಡ್ ಸ್ಪಿರಿಟ್' ಷೇರುಗಳನ್ನು ಮಾರಾಟ ಮಾಡದಂತೆ ಬ್ಯಾಂಕ್‌ಗಳಿಗೆ ತಡೆಯೊಡ್ಡಬೇಕೆಂಬ  ಕಿಂಗ್‌ಫಿಷರ್ ಏರ್‌ಲೈನ್ಸ್ ಮನವಿಯನ್ನು ಮುಂಬೈ ಹೈಕೋರ್ಟ್ ಮಂಗಳವಾರ ತಳ್ಳಿ  ಹಾಕಿತ್ತು. ಅದರ ಬೆನ್ನಲ್ಲೇ ವೇತನ ಪಾವತಿಯಾಗಿರುವುದು ವಿಶೇಷ.

`ಫಾರ್ಮುಲಾ-1' ರೇಸ್ ನಡೆದಾಗ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಮಣಿದ ಆಡಳಿತ ಮಂಡಳಿ ಒಂದು ತಿಂಗಳ ವೇತನ ಪಾವತಿಸಿತ್ತು. ಈಗ `ಐಪಿಎಲ್' ವೇಳೆ ಮತ್ತೆ ಪ್ರತಿಭಟನೆ ನಡೆಯಬಹುದು ಎಂಬ ಶಂಕೆಯಿಂದ 2 ತಿಂಗಳ ಬಾಕಿ ಪಾವತಿಸಲಾಗಿದೆ ಎಂದು  ಕಿಂಗ್‌ಫಿಷರ್ ಎಂಜಿನಿಯರ್ಸ್ ಒಕ್ಕೂಟದ ಸದಸ್ಯ ಎಸ್.ಸಿ ಮಿಶ್ರಾ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT