ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಂಗ್‌ಫಿಷರ್‌ ಗಾಲ್ಫ್; ನಾಯರ್‌ ಚಾಂಪಿಯನ್‌

Last Updated 4 ಡಿಸೆಂಬರ್ 2013, 6:46 IST
ಅಕ್ಷರ ಗಾತ್ರ

ಮಡಿಕೇರಿ: ಮರ್ಕರಾ ಡೌನ್ಸ್ ಗಾಲ್ಫ್‌ ಕ್ಲಬ್‌ ಹಾಗೂ ಕಿಂಗ್‌ಫಿಷರ್‌ ಸಂಸ್ಥೆಯ ಪ್ರಾಯೋಜಕತ್ವದಡಿ ನಡೆದ 28ನೇ ಕಿಂಗ್‌ಫಿಷರ್‌ ಗಾಲ್ಫ್‌ ಚಾಂಪಿಯನ್‌ಷಿಪ್‌ ಸ್ಪರ್ಧೆಯಲ್ಲಿ ಆರ್‌.ಬಿ.ಸಿ. ನಾಯರ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದರು.

ಕೊಡಗು ಜಿಲ್ಲೆಯ ಮಡಿಕೇರಿ, ಪಾಲಿಬೆಟ್ಟ ಹಾಗೂ ಬಿಟ್ಟಂಗಾಲದಲ್ಲಿರುವ ಮೂರು ಗಾಲ್ಫ್‌ ಮೈದಾನದಲ್ಲಿ ನಡೆದ ಪಂದ್ಯಾವಳಿಯ ಓಪನ್‌ ವಿಭಾಗದಲ್ಲಿ ಬೆಂಗಳೂರಿನ ವಾಯುದಳದಲ್ಲಿ ಸೇವೆ ಸಲ್ಲಿಸುತ್ತಿರುವ ಆರ್‌.ಬಿ.ಸಿ ನಾಯರ್‌ 74 ಅಂಕಗಳನ್ನು ಗಳಿಸುವ ಮೂಲಕ ಕಿಂಗ್‌ಫಿಷರ್‌ ಚಾಂಪಿಯನ್‌ಷಿಪ್‌ ತಮ್ಮದಾಗಿಸಿಕೊಂಡರು.

ಈ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧೆಡೆಯ 125 ಗಾಲ್ಫ್‌ ಆಟಗಾರರು ಪಾಲ್ಗೊಂಡಿದ್ದರು.

18 ವರ್ಷದೊಳಗಿನ ಸಿ.ಜಿ.ಎಲ್‌. ವಿಭಾಗದಲ್ಲಿ ಎ.ಎಂ. ಚಿಟ್ಟಿಯಪ್ಪ, 19ರಿಂದ 36 ವರ್ಷದೊಳಗಿನ ವಿಭಾಗದಲ್ಲಿ ಶ್ವೇತಾರಾಮು ಪ್ರಶಸ್ತಿ ಪಡೆದರು. ಟ್ರೈಯಂಗುಲರ್‌ ರೌಂಡ್‌ನಲ್ಲಿ ಪ್ರಮೋದ್‌ ಕುರಿಯನ್‌, 18ವರ್ಷದೊಳಗಿನ ವಿಭಾಗದಲ್ಲಿ ಸಿ.ಎಂ. ಅಪ್ಪಣ್ಣ 19ರಿಂದ 36 ವರ್ಷದೊಳಗಿನ ವಿಭಾಗದಲ್ಲಿ ಬಾಬು ರೆಡ್ಡಿ ಪ್ರಶಸ್ತಿ ಪಡೆದರೆ, ಎಂಡಿಜಿಸಿ ರೌಂಡ್‌ ಮುಕ್ತ ವಿಭಾಗದಲ್ಲಿ ಕೆ.ಪಿ. ರಂಜಿತ್‌ ಪ್ರಶಸ್ತಿ ಪಡೆದರು.

18 ವರ್ಷದೊಳಗಿನವರ ವಿಭಾಗದಲ್ಲಿ ನವೀನ್‌ ವಾಹಿ, 19ರಿಂದ 36 ವರ್ಷದೊಳಗಿನ ವಿಭಾಗದಲ್ಲಿ ಶ್ವೇತಾರಾಮು, 14 ಗುಳಿಗಳ ಉದ್ದ ಹೊಡೆತದಲ್ಲಿ ವರುಣ್‌ ಗಣಪತಿ ಗುಳಿ ಹತ್ತಿರ ಹೊಡೆತದಲ್ಲಿ ಗಿರಿ ಬೋಪಣ್ಣ, ಗರಿಷ್ಠ ಸಂಖ್ಯೆಯ ಬಿರ್‌ಡೀಸ್‌ನಲ್ಲಿ ಎಂ.ಎ. ಪೂವಯ್ಯ, ತಾಳ್ಮೆಯ ಆಟಗಾರರ ವಿಭಾಗದಲ್ಲಿ ಕೆ.ಎ. ಕಾರ್ಯಪ್ಪ ಹಾಗೂ ಅತಿ ಹತ್ತಿರದ ವಿಭಾಗದಲ್ಲಿ ಮೈಕಲ್‌ ರೋಡ್ರಿಗಸ್‌ ಅವರು ಪ್ರಶಸ್ತಿ ಗಳಿಸಿದರು.

18 ವರ್ಷದೊಳಗಿನ ಕಠಿಣ ಹ್ಯಾಂಡಿಕ್ಯಾಪ್‌ ವಿಭಾಗದಲ್ಲಿ ಪಿ.ಕೆ. ಬೋಪಣ್ಣ (ಪ್ರಥಮ), ಹರೀಶ್‌ ಅಪ್ಪಣ್ಣ (ದ್ವಿತೀಯ), ಮುಕ್ತ ವಿಭಾಗದಲ್ಲಿ ಪ್ರಮೋದ್‌ ಕುರಿಯನ್‌ (ಪ್ರಥಮ), ಸಿ.ಎನ್‌. ಶಿವರಾಮು (ದ್ವಿತೀಯ). 65 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಎಂ.ಜಿ. ಗಣೇಶ್‌ (ಪ್ರಥಮ), ಸಿ.ಎಂ. ಮುತ್ತಣ್ಣ (ದ್ವಿತೀಯ), ಹಿರಿಯರ ಮುಕ್ತ ವಿಭಾಗದಲ್ಲಿ  ಮುತ್ತಣ್ಣ ಕಾರ್ಯಪ್ಪ (ಪ್ರಥಮ), ಮೂರ್ತಿ (ದ್ವಿತೀಯ), ಸ್ಟೇಬಲ್‌ ಲೋಡರ್‌ ನೆಟ್‌ನ 19ರಿಂದ 36 ವರ್ಷದೊಳಗಿನ ವಿಭಾಗದಲ್ಲಿ ವಿ.ಪ್ರಕಾಶ್‌ (ಪ್ರಥಮ), ಬಾಬುರೆಡ್ಡಿ (ದ್ವಿತೀಯ), 18 ವರ್ಷದೊಳಗಿನವರ ವಿಭಾಗದಲ್ಲಿ ಮಾಲಿ ಶಶಿ ಕಿರಣ್‌ (ಪ್ರಥಮ), ಎ.ಎಂ. ಚಿಟ್ಟಿಯಪ್ಪ (ದ್ವಿತೀಯ), ಸ್ಟೇಬಲ್‌ ಲೋರ್ಡ್‌ ಮುಕ್ತ ವಿಭಾಗದಲ್ಲಿ ಪ್ರಮೋದ್‌ ಕುರಿಯನ್‌ (ಪ್ರಥಮ),  ಆರ್‌.ಸಿ.ಬಿ.ನಾಯರ್‌ (ದ್ವಿತೀಯ).

18 ವರ್ಷದೊಳಗಿನವರ ಸ್ಟ್ರೋಕ್‌ ವಿಭಾಗದಲ್ಲಿ ಮಾಲಿ ಶಶಿ ಕಿರಣ್‌ (ಪ್ರಥಮ), ಎ.ಎಂ. ಚಿಟ್ಟಿಯಪ್ಪ (ದ್ವಿತೀಯ), ಮುಕ್ತ ವಿಭಾಗದಲ್ಲಿ ಆರ್‌ಬಿಸಿ ನಾಯರ್‌ (ಪ್ರಥಮ), ಪ್ರಮೋದ್‌ ಕುರಿಯನ್‌ (ದ್ವಿತೀಯ), 18 ವರ್ಷದೊಳಗಿನವರ ತಂಡ ವಿಭಾಗದಲ್ಲಿ ಕೆ.ಯು. ವಿಕ್ರಾಂತ್‌ ಹಾಗೂ ಕೆ.ಎಂ. ತಿಮ್ಮಯ್ಯ (ಪ್ರಥಮ), ಕೆ.ಪಿ. ರಂಜಿತ್‌ ಹಾಗೂ ಸಿ.ಬಿ. ಮುತ್ತಣ್ಣ (ದ್ವಿತೀಯ). ತಂಡ ವಿಭಾಗ– ಮುಕ್ತ ವಿಭಾಗದಲ್ಲಿ  ಪ್ರಮೋದ್‌ ಕುರಿಯನ್‌ ಹಾಗೂ ಸಿ.ಎಂ. ಅಪ್ಪಣ್ಣ (ಪ್ರಥಮ), ವಿಂಗ್‌ ಕಮಾಂಡರ್‌ ನಾಯರ್‌ ಹಾಗೂ ಸಿ.ಎನ್‌. ಶಿವರಾಮ್‌ (ದ್ವಿತೀಯ) ಸ್ಥಾನ ಪಡೆದರು.

ಟಾಟಾ ಕಾಫಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಮೀದ್‌ ಹಕ್‌ ಬಹುಮಾನ ವಿತರಿಸಿದರು. ಕಿಂಗ್‌ಫಿಷರ್‌ ಮಾರುಕಟ್ಟೆಯ ವ್ಯವಸ್ಥಾಪಕ ಕಲ್ಮಾಡಂಡ್‌ ಅಯ್ಯಪ್ಪ, ಐಚೆಟ್ಟೀರ ಕೆ.ಅನಿಲ್‌, ಕಾರ್ಯದರ್ಶಿ ನಾಗಪ್ಪನ್, ಕ್ರೀಡಾಕೂಟ ಸಂಚಾಲಕ ಕೆ.ಪಿ. ರಂಜಿತ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT