ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕಿನ್ನರಜೋಗಿ'ಗೆ ಅನಿಮೇಷನ್ ಸ್ಪರ್ಶ

Last Updated 5 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಬಾಯಿ ಮಾತಿನಲ್ಲೇ ತನ್ನ ಇರುವನ್ನು ಕಂಡುಕೊಂಡಿದ್ದ ಜನಪದ ಗೀತೆಗಳಿಗೆ ಅನಿಮೇಷನ್ ಸ್ಪರ್ಶ ಸಿಕ್ಕಿದೆ. ಇನ್ಫೋಬೆಲ್ಸ್ ಸಂಸ್ಥೆ ವಿಶೇಷವಾಗಿ ರೆಕಾರ್ಡ್ ಮಾಡಿರುವ ಡಿವಿಡಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ರಾಜ್ಯಸಭಾ ಸದಸ್ಯೆ ಬಿ. ಜಯಶ್ರಿ ಮತ್ತು ಹಿರಿಯ ಗಾಯಕ ಹಾಗೂ ಜಾನಪದ ಅಕಾಡೆಮಿ ಅಧ್ಯಕ್ಷರಾದ ಬಾನಂದೂರು ಕೆಂಪಯ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಡಿವಿಡಿಯಲ್ಲಿ 14 ಜನಪದ ಗೀತೆಗಳ ಜೊತೆ ಆರು ನೀತಿಕಥೆಗಳನ್ನು ಅನಿಮೇಶನ್ ರೂಪದಲ್ಲಿ ಪ್ರಸ್ತುತಪಡಿಸಲಾಗಿದೆ. ಹಾಡುಗಳಿಗೆ ಹಿನ್ನೆಲೆಯಲ್ಲಿ ಕಿನ್ನರಿಯನ್ನು ಬಳಸಿರುವುದು ವಿಶೇಷ. ಜತೆಗೆ ಸುಂದರ ಮತ್ತು ವರ್ಣಮಯವಾಗಿರುವುದು ಮತ್ತೊಂದು ಆಕರ್ಷಣೆ.

ಡಿವಿಡಿಗೆ ಪ್ರಣವ್ ಎನ್. ಅಯ್ಯಂಗಾರ್ ಸಂಗೀತ ನೀಡಿದ್ದು, ಗಾಯಕರಾದ ಮಂಜುನಾಥ್ ಮತ್ತು ದೀಪಾಶ್ರೀ ಅಯ್ಯಂಗಾರ್ ಹಾಡಿದ್ದಾರೆ. ನಿರ್ದೇಶನ ಜಯಾ ಕುಬೇರ್ ಅವರದು.ಡಿವಿಡಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಬಿ. ಜಯಶ್ರಿ ಅವರು `ಕನ್ನಡದ ಹಾಡುಗಳ ಮಾಧುರ‌್ಯವನ್ನು ಜೀವಂತಗೊಳಿಸುವ ಪ್ರಯತ್ನ ಇದಾಗಿದ್ದು, ಇದನ್ನು ಯುವಜನರು ಆನಂದಿಸಬಹುದು.

ಜನಪದ ಗೀತೆಗಳನ್ನು ಅನಿಮೇಟೆಡ್ ರೂಪದಲ್ಲಿ ಬಿಡುಗಡೆ ಮಾಡಿರುವ ಪ್ರಥಮ ಪ್ರಯತ್ನವಿದು. ನಮ್ಮ ಸಂಸ್ಕೃತಿ ಉಳಿಸಿಕೊಳ್ಳಲು ಮತ್ತು ಸಂಗೀತ ಮತ್ತು ಅದರ ವಿಶೇಷತೆಯ ಬಗ್ಗೆ ಜನತೆಗೆ ತಿಳಿಸಲು ಸಹಾಯಕವಾಗಿದೆ' ಎಂದು ಅಭಿಪ್ರಾಯಪಟ್ಟರು.

ಇಲ್ಲಿವರೆಗೂ ಜನಪದ ಗೀತೆಗಳು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಕೇವಲ ಬಾಯಿಮಾತಿನ ಮೂಲಕ ಅವರ ಊಹಾಶಕ್ತಿಯ ಮೂಲಕ ವರ್ಗಾವಣೆಯಾಗುತ್ತಿದ್ದವು. ಹೊಸ ಪೀಳಿಗೆಯ ವಿವಿಧ ಸಂಗೀತ ಪ್ರಕಾರಗಳಿಂದಾಗಿ ಅವು ನಶಿಸಿಹೋಗುವ ಸಾಧ್ಯತೆ ಇತ್ತು. ಆದರೆ ಬಾಯಿಮಾತಿನ ಈ ಗೀತೆಗಳನ್ನು ಅನಿಮೇಷನ್ ಡಿವಿಡಿಗಳ ಮೂಲಕ ಸಂಗ್ರಹಿಸಿ ಬಿಡುಗಡೆ ಮಾಡಿ `ಇನ್ಫೋಬೆಲ್ಸ್' ಮಹತ್ವದ ಸಾಧನೆ ಮಾಡಿದೆ ಎಂದು ಬಾನಂದೂರು ಕೆಂಪಯ್ಯ ಶ್ಲಾಘಿಸಿದರು.

ಇನ್ಫೋಬೆಲ್ಸ್‌ನ ವ್ಯವಸ್ಥಾಪಕ ಪಾಲುದಾರ ಎನ್. ಕುಬೇರ್ ಅವರು, `ನಮ್ಮ ಕನ್ನಡದ ಜನಪದ ಗೀತೆಗಳ ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಜೋಗಿಯನ್ನು ಅನಿಮೇಷನ್ ಮಾಡುವ ಮೂಲಕ ಯುವ ಜನರಿಗೆ ತಲುಪಿಸುವ ಪ್ರಯತ್ನ ಮಾಡಿದ್ದೇವೆ ಎಂದರು.ಡಿವಿಡಿ ಬೆಲೆ ರೂ.99 ಆಗಿದ್ದು ಎಲ್ಲಾ ಪ್ರಮುಖ ಪುಸ್ತಕ/ ಸಿಡಿ  ಮಾರಾಟ ಮಳಿಗೆಗಳು ಮತ್ತು ಹೈಪರ್ ಮಾರ್ಕೆಟ್‌ಗಳಲ್ಲಿ ದೊರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT