ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಮ್ ಮಗಳ ಫೋಟೋಗೆ 20 ಲಕ್ಷ ಡಾಲರ್

Last Updated 2 ಜುಲೈ 2013, 19:59 IST
ಅಕ್ಷರ ಗಾತ್ರ

ಟಿ.ವಿ. ರಿಯಾಲಿಟಿ ಸ್ಟಾರ್ ಕಿಮ್ ಕರ್ದಾಷಿಯಾನ್ ಮತ್ತು ಆಕೆಯ ಬಾಯ್‌ಫ್ರೆಂಡ್ ಕನೆ ವೆಸ್ಟ್ ಅವರ ಇನ್ನೂ ತಿಂಗಳು ತುಂಬದ ಪುಟ್ಟ ಮಗಳು `ನಾರ್ಥ್ ವೆಸ್ಟ್'ಳ ಫೋಟೋ ಪ್ರಕಟಣೆಗಾಗಿ ನಿಯತಕಾಲಿಕವೊಂದು 20 ಲಕ್ಷ ಅಮೆರಿಕನ್ ಡಾಲರ್ ಹಣದ ಆಫರ್ ಇಟ್ಟಿದೆಯಂತೆ.

ಇದರ ಜೊತೆಗೆ ಕರ್ದಾಷಿಯಾನ್‌ಗೆ  ಕ್ರಿಸ್ ಜೆನ್ನಿರ್ ಅವರು ನಡೆಸಿಕೊಡುವ ಟಾಕ್‌ಶೋನಲ್ಲಿ ಮೊದಲ ಬಾರಿಗೆ ಮಗುವನ್ನು ತೋರಿಸಿಕೊಳ್ಳುವ ಇರಾದೆ ಇದೆ ಎಂಬ ಸುದ್ದಿ ಕೂಡ ಹರಿದಾಡಿತ್ತು. ಇದರ ಬೆನ್ನಲ್ಲೇ ಕರ್ದಾಷಿಯಾನ್ ತಮ್ಮ ಮಗಳ ಭರ್ಜರಿ ಫೋಟೋ ಶೂಟ್‌ಗೂ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಗಾಳಿಸುದ್ದಿ ಅಂತರ್‌ಜಾಲತಾಣಗಳಲ್ಲಿ ಓಡಾಡಿತ್ತು.

ಆದರೆ, ಈ ಗಾಳಿಸುದ್ದಿಯನ್ನು ಕಿಮ್ ಅಲ್ಲಗಳೆದಿದ್ದಾರೆ. `ಅಂತಹ ಯಾವುದೇ ಯೋಜನೆ ನಮ್ಮ ಮುಂದೆ ಇಲ್ಲ. ನಮ್ಮ ಮಗುವನ್ನು `ಕೀಪಿಂಗ್ ಅಪ್ ವಿತ್ ದಿ ಕರ್ದಾಷಿಯಾನ್ಸ್' ಟಾಕ್‌ಶೋದಲ್ಲಿ ಚಿತ್ರೀಕರಿಸುವ ಬಗ್ಗೆ ಜೆನ್ನರ್ ಜೊತೆ ಯಾವುದೇ ಮಾತುಕತೆ ನಡೆದಿಲ್ಲ ಎಂದಿರುವ ಕಿಮ್ ಮಗುವಿನ ಶೋಷಣೆಯನ್ನು ವಿರೋಧಿಸುವುದಾಗಿ ಹೇಳಿದ್ದಾರೆ. ಜೂನ್ 15ರಂದು ಮಗು ಜನಿಸಿದ್ದು, ಎರಡು ವಾರ ತುಂಬಿದೆಯಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT