ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರು ಟ್ರಾನ್ಸಿಸ್ಟರ್ ಸಂಶೋಧನೆ

Last Updated 20 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ನ್ಯೂಸೌತ್ ವೇಲ್ಸ್ ವಿಶ್ವವಿದ್ಯಾಲಯ, ಪುರ್‌ದ್ಯು ವಿವಿ ಹಾಗೂ ಮೆಲ್ಬರ್ನ್ ವಿವಿ ವಿಜ್ಞಾನಿಗಳ ತಂಡವೊಂದು ರಂಜಕದ ಅಣುವನ್ನು ಬಳಸಿ ವಿಶ್ವದಲ್ಲೇ ಅತ್ಯಂತ ಕಿರಿದಾದ ಟ್ರಾನ್ಸಿಸ್ಟರ್ ಸಿದ್ಧಪಡಿಸಿದೆ ಎಂದು  `ನೇಚರ್ ನ್ಯಾನೊ ಟೆಕ್ನಾಲಜಿ~ ಪತ್ರಿಕೆ ವರದಿ ಮಾಡಿದೆ.

`ಐವತ್ತು ವರ್ಷಗಳ ಹಿಂದೆ ಮೊದಲ ಟ್ರಾನ್ಸಿಸ್ಟರ್ ಅಭಿವೃದ್ಧಿಪಡಿಸಿದ್ದಾಗ, ಜಗತ್ತಿನಲ್ಲಿ ಕಂಪ್ಯೂಟರ್ ಈಗಿರುವ ಮಟ್ಟಿಗಿನ ಮಹತ್ವದ ಪಾತ್ರ ನಿರ್ವಹಿಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ~ ಎಂದು ಕಿರು ಟ್ರಾನ್ಸಿಸ್ಟರ್ ಅಭಿವೃದ್ಧಿಪಡಿಸಿದ ವಿಜ್ಞಾನಿಗಳ ತಂಡದ ಮುಖ್ಯಸ್ಥ ಮೈಕೆಲ್ ಸಿಮ್ಮನ್ಸ್ ಅಭಿಪ್ರಾಯ ಪಟ್ಟಿದ್ದಾರೆ.

ಇದೇ ರೀತಿ ಮುಂದಿನ ದಿನಗಳಲ್ಲಿ ಟ್ರಾನ್ಸಿಸ್ಟರ್‌ಗೆ ಸಂಬಂಧಿಸಿದ ನ್ಯಾನೊ ತಂತ್ರಜ್ಞಾನ ಕಲ್ಪಿಸಿಕೊಳ್ಳಲೂ ಆಗದಷ್ಟು ಜನಪ್ರಿಯವಾಗಬಹುದು ಎಂದಿದ್ದಾರೆ.

0.1  ನ್ಯಾನೊ ಮೀಟರ್ ಗಾತ್ರದಷ್ಟು ಕಿರಿದಾಗಿರುವ ಮೈಕ್ರೊಪ್ರೊಸೆಸರ್ ಬಳಸಿ ಅತ್ಯಂತ ಚಿಕ್ಕ ಟ್ರಾನ್ಸಿಸ್ಟರ್ ತಯಾರಿಸಬಹುದಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ  ಇನ್ನಷ್ಟು ಸಣ್ಣ ಗಾತ್ರದ ಕಂಪ್ಯೂಟರ್‌ಗಳನ್ನು ನೋಡುವ ಸಾಧ್ಯತೆ ಇದೆ. ಆದರೆ ಈ ಟ್ರಾನ್ಸಿಸ್ಟರ್ ಅನ್ನು  ಕನಿಷ್ಠ  ಮೈನಸ್196 ಡಿಗ್ರಿ ಸೆಲ್ಸಿಯಸ್‌ನಷ್ಟು ತಂಪಿನ ಪ್ರದೇಶದಲ್ಲಿಡಬೇಕು ಅಥವಾ ದ್ರವೀಕೃತ ನೈಟ್ರೋಜನ್‌ನಲ್ಲಿಯೂ ಇಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT