ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರು ಹಗುರ ವಿಮಾನ ಲಕ್ಷ್ಯ-1: ಯಶಸ್ವೀ ಪರೀಕ್ಷೆ

Last Updated 8 ಫೆಬ್ರುವರಿ 2012, 9:30 IST
ಅಕ್ಷರ ಗಾತ್ರ

ಬಾಲಸೋರ್ (ಒಡಿಶಾ) (ಪಿಟಿಐ): ಭಾರತವು ದೇಶೀಯವಾಗಿ ಅಭಿವೃದ್ಧಿ ಪಡಿಸಿದ ಚಾಲಕ ರಹಿತ  ~ಲಕ್ಷ್ಯ-1~  ಕಿರು ಹಗುರ ವಿಮಾನವನ್ನು ಇಲ್ಲಿಗೆ ಸಮೀಪದ ಚಂಡಿಪುರ ಸಮಗ್ರ ಪರೀಕ್ಷಾ ವಲಯದಿಂದ ಬುಧವಾರ ಯಶಸ್ವಿಯಾಗಿ ಪರೀಕ್ಷಾರ್ಥ ಹಾರಿಸಲಾಯಿತು.

  ಕಂಪ್ಯೂಟರ್ ನಿಯಂತ್ರಿತ ಎಂಜಿನ್ ಗೆ ಜೋಡಿಸಲಾಗಿದ್ದ ~ಲಕ್ಷ್ಯ-1~ ವಿಮಾನವನ್ನು ಮಧ್ಯಾಹ್ನ 1.10ರ ವೇಳೆಗೆ ಯಶಸ್ವಿಯಾಗಿ ಹಾರಿಸಲಾಯಿತು. ಸಂಚಾರಿ ಉಡಾವಣಾ ವಾಹನದ ಮೂಲಕ ಈ ಪರೀಕ್ಷಾ ಹಾರಾಟ ನಡೆಸಲಾಯಿತು ಎಂದು ರಕ್ಷಣಾ ಮೂಲಗಳು ಹೇಳಿವೆ.

ಕಿರು ಹಗುರ ವಿಮಾನದ ಹಾರಾಟದ ಅವಧಿ ಸಾಮಾನ್ಯವಾಗಿ 30ರಿಂದ 35 ನಿಮಿಷಗಳು. ಆದರೆ ಈ ಅವಧಿಯ ವಿಸ್ತರಣೆ ಮತ್ತು ಮಾನದಂಡಗಳ ಪರೀಕ್ಷೆಗಾಗಿ ಈದಿನದ ಪರೀಕ್ಷಾ ಹಾರಾಟವನ್ನು ನಡೆಸಲಾಯಿತು ಎಂದು ಮೂಲಗಳು ತಿಳಿಸಿದವು.

ಮರುಬಳಕೆ ಮಾಡಬಲ್ಲಂತಹ ವೈಮಾನಿಕ ಗುರಿ ವ್ಯವಸ್ಥೆಯ ಸಬ್ ಸಾನಿಕ್ ~ಲಕ್ಷ್ಯ~ ನೆಲದಿಂದಲೇ ನಿಯಂತ್ರಿಸಬಹುದಾದ ದೂರ ನಿಯಂತ್ರಿತ ವಿಮಾನವಾಗಿದೆ.

2000ದಿಂದೀಚೆಗೆ ~ಲಕ್ಷ್ಯ~ವನ್ನು ಭಾರತೀಯ ವಾಯುಪಡೆಗೆ ಸೇರ್ಪಡೆ ಮಾಡಲಾಗಿದ್ದು, ಇದನ್ನು ಬೆಂಗಳೂರಿನಲ್ಲಿರುವ ಭಾರತದ ವೈಮಾನಿಕ ಅಭಿವೃದ್ಧಿ ಪ್ರತಿಷ್ಠಾನ (ಎಡಿಇ) ಅಭಿವೃದ್ಧಿ ಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT