ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರುತೆರೆಯಲ್ಲಿ ಕೋಮಲ್!

Last Updated 16 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಳ್ಳಿತೆರೆಯಲ್ಲಿ ಸಾಲು ಸಾಲು ಹಾಸ್ಯೋತ್ಸವ ನಡೆಸುವ ಕೋಮಲ್‌ಗೆ ಕಿರುತೆರೆ ಮೇಲೆ ಇದ್ದಕ್ಕಿದ್ದಂತೆ ಪ್ಯಾರ್ ಆಗ್‌ಬುಟ್ಟೈತೆ!

ಪ್ರೇಕ್ಷಕರನ್ನು ನಗಿಸುವುದನ್ನೇ ಉದ್ದೇಶವಾಗುಳ್ಳ ಜೀ ವಾಹಿನಿಯ `ಕಾಮಿಡಿ ಕಿಲಾಡಿಗಳು ವಿತ್ ಕೋಮಲ್~ ಕಾಮಿಡಿ ಶೋನಲ್ಲಿ ಕೋಮಲ್ ಕಾಣಿಸಿಕೊಳ್ಳುತ್ತಿದ್ದಾರೆ.

`ಕಾಮಿಡಿ ಕಿಲಾಡಿಗಳು ವಿತ್ ಕೋಮಲ್~ ಕಾರ್ಯಕ್ರಮದಲ್ಲಿ ಕೋಮಲ್ ಅವರದ್ದು ತೀರ್ಪುಗಾರರ ಪಾತ್ರ. ಅಷ್ಟು ಮಾತ್ರವಲ್ಲ, ಕಾರ್ಯಕ್ರಮ ನಿರ್ಮಾಣದ ಹೊಣೆ ಹೊತ್ತಿರುವ ಅವರು ಶೀರ್ಷಿಕೆ ಗೀತೆಯನ್ನೂ ಹಾಡಿದ್ದಾರೆ.

ಕೋಮಲ್ ಅವರ ಕಾರ್ಯಕ್ರಮದ ಪರಿಕಲ್ಪನೆ ವಿಭಿನ್ನವಾಗಿದೆ. ಪ್ರತೀ ಸಂಚಿಕೆಯಲ್ಲಿ ಒಬ್ಬ `ಕಿಂಗ್ ಕಾಮಿಡಿಯನ್~ ನಾಯಕತ್ವದಲ್ಲಿ ಹಾಸ್ಯ ಕಲಾವಿದರ ಬಳಗ ನಗಿಸುವುದಕ್ಕೆ ತಯಾರಾಗಿರುತ್ತದೆ. ಅದಕ್ಕೆ ಪ್ರತಿಯಾಗಿ ಮತ್ತೊಂದು ತಂಡ ಪ್ರಬಲ ಸವಾಲು ಒಡ್ಡುತ್ತದೆ. ಯಾವ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೋ ಅವರಿಗೆ ಅಂತಿಮವಾಗಿ `ಕರ್ನಾಟಕದ ಕಾಮಿಡಿ ಕಲಾವಿದರ ಅತ್ಯುತ್ತಮ ತಂಡ~ ಎನ್ನುವ ಪಟ್ಟ.

ಪ್ರತಿ ಸಂಚಿಕೆಯಲ್ಲಿ ತೀರ್ಪುಗಾರರ ಜೊತೆ ಸೆಲೆಬ್ರಿಟಿಗಳೂ ಇರಲಿದ್ದು, ಅವರೂ ಸ್ಪರ್ಧಿಗಳಿಗೆ ಸವಾಲುಗಳನ್ನು ಎಸೆಯಲಿದ್ದಾರೆ.ಜನಪ್ರಿಯ ರೇಡಿಯೋ ಜಾಕಿ ರ‌್ಯಾಪಿಡ್ ರಶ್ಮಿ ಮತ್ತು ಹಾಸ್ಯನಟ ಬರ್ಕತ್ ಅಲಿ ಜೊತೆಗಿರುತ್ತಾರೆ.

ಫೆ.16ರ ಗುರುವಾರದಿಂದ `ಕಾಮಿಡಿ ಕಿಲಾಡಿಗಳು ವಿತ್ ಕೋಮಲ್~ ಪ್ರಸಾರ ಶುರುವಾಗಿದೆ. ಪ್ರಸಾರದ ಸಮಯ ಪ್ರತಿ ಗುರುವಾರ ಮತ್ತು ಶುಕ್ರವಾರ ರಾತ್ರಿ 9.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT