ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರುತೆರೆಯಲ್ಲಿ ‘ಪ್ಲೇ ಹೋಂ’

Last Updated 12 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮಕ್ಕಳು ಮತ್ತು ಪೋಷಕರ ನಡುವಿನ ಪ್ರೀತಿಯನ್ನು ತೆರೆಯ ಮೇಲೆ ತರುವ ಪ್ರಯತ್ನಕ್ಕೆ ಜೀ ಕನ್ನಡ ವಾಹಿನಿ ಮುಂದಾಗಿದೆ. ‘ಛೋಟಾ ಚಾಂಪಿಯನ್’ ಹೆಸರಿನ ಈ ರಿಯಾಲಿಟಿ ಶೋ ಪೋಷಕರು ಮತ್ತು ಮಕ್ಕಳ ಅನುಬಂಧಕ್ಕೆ ವೇದಿಕೆಯಾಗಲಿದೆ. ಸೆಪ್ಟೆಂಬರ್ ೧೪ ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ ೯ಗಂಟೆಗೆ ಈ ಶೋ ಪ್ರಸಾರವಾಗಲಿದೆ.

ಮಕ್ಕಳ ಮನಸ್ಸನ್ನು ಪೋಷಕರು ಎಷ್ಟರ ಮಟ್ಟಿಗೆ ಅರ್ಥ ಮಾಡಿಕೊಂಡಿರುತ್ತಾರೆ ಎನ್ನುವುದು ಕಾರ್ಯಕ್ರಮದಲ್ಲಿ ಅನಾವರಣಗೊಳ್ಳಲಿದೆಯಂತೆ. ಮಕ್ಕಳ ಚುರುಕುತನವನ್ನು ಮನರಂಜನಾತ್ಮಕವಾಗಿ ನಿರೂಪಿಸುವ ಹೊಣೆಯನ್ನು ಸೃಜನ್‌ ಲೋಕೇಶ್‌ಗೆ ವಹಿಸಲಾಗಿದೆ.

೨ರಿಂದ ೩ವರ್ಷದೊಳಗಿನ ಮಕ್ಕಳು ಈ ಶೋನಲ್ಲಿ ಭಾಗವಹಿಸುತ್ತಿದ್ದು, ಶೋಗೆ ನಡೆಸಿದ ಅಡಿಷನ್‌ನಲ್ಲಿ ೧೫೦ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರಂತೆ. ಇವರಲ್ಲಿ ೩೦ ಮಕ್ಕಳನ್ನು ಆಯ್ಕೆ ಮಾಡಲಾಗಿದೆ ಎಂದು ಕಾರ್ಯಕ್ರಮಕ್ಕೆ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು ಸೃಜನ್‌ ಲೋಕೇಶ್.

ತಂದೆ– ತಾಯಿ ಮಾತ್ರವಲ್ಲದೇ ಸಹೋದರ, ಸಹೋದರಿಯರು, ಅಜ್ಜಿ–ಅಜ್ಜಂದಿರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಮಕ್ಕಳ ತೊದಲು ನುಡಿ ಮತ್ತು ಪ್ರತಿಭೆಯನ್ನು ವೀಕ್ಷಕರಿಗೆ ಪರಿಚಯಿಸಲು ಸೃಜನ್ ಕೂಡ ಸಾಕಷ್ಷು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರಂತೆ.

ಅಬ್ಬಯ್ಯನಾಯ್ಡು ಸ್ಟುಡಿಯೊದಲ್ಲಿ ಚಿತ್ರೀಕರಣ ಪ್ರಾರಂಭವಾಗಿದ್ದು, ಅಲ್ಲಿ ಪ್ಲೇ ಹೋಂ ವಾತಾವರಣ ಸೃಷ್ಟಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ವಿದ್ಯಾರ್ಥಿ ವೇತನ, ಸ್ಥಿರ ಠೇವಣಿ ನೀಡಲಾಗುತ್ತದೆ.
ಜೀ ವಾಹಿನಿಯ ನಾನ್ ಫಿಕ್ಷನ್ ಮುಖ್ಯಸ್ಥ ಬಾಲರಾಜು ನಾಯ್ಡು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT