ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಸೆಯಲ್ಲಿ ಕಂಪ್ಯೂಟರ್!

Last Updated 13 ಜೂನ್ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ವಿಜ್ಞಾನಿಗಳ ನಿರಂತರ ಪ್ರಯತ್ನದ ಫಲವಾಗಿ ಅಂಗಿಯ ಕಿಸೆಯ್ಲ್ಲಲಿಯೇ  ಕೊಂಡೊಯ್ಯಬಹು ದಾದ ಕಂಪ್ಯೂಟರ್ ಸೃಷ್ಟಿಯಾಗಿದೆ!

ಸಾಮಾನ್ಯ ಪೆನ್‌ಡ್ರೈವ್‌ನಲ್ಲಿ (ಯುಎಸ್‌ಬಿ) ತೆಗೆದು ಕೊಂಡು ಹೋಗಬಹುದಾದ  ಈ ಸಾಫ್ಟ್‌ವೇರ್  ಅನ್ನು ಬೇಕಾದ ಕಂಪ್ಯೂಟರ್‌ಗಳಲ್ಲಿ ಬಳಸಬಹುದು. ಈ ತಂತ್ರಜ್ಞಾನದ ಮತ್ತೊಂದು ವಿಶೇಷವೆಂದರೆ  `ಯುಎಸ್‌ಬಿ~  ಬಳಸಿದ ನಂತರ ಬ್ರೌಸ್ ಮಾಡಿದ ಇತಿಹಾಸ ಅಥವಾ ದಾಖಲೆ ಮತ್ತೊಂದು ಕಂಪ್ಯೂಟರ್‌ನಲ್ಲಿ ಉಳಿಯಲಾರದು.

ಒಂದು ಕಂಪ್ಯೂಟರ್ ಕಾರ್ಯನಿರ್ವಹಿಸಲು ಅಗತ್ಯವಾಗಿ ಬೇಕಾದ  ಸಾಫ್ಟ್‌ವೇರ್‌ಗಳನ್ನು (ವಿಂಡೋಸ್)    ಹೊಂದಿದ ಸಮಗ್ರ ಕಾರ್ಯನಿರ್ವಹಣಾ ವ್ಯವಸ್ಥೆಯನ್ನು ಪೆನ್‌ಡ್ರೈವ್ (ಯುಎಸ್‌ಬಿ ಮೆಮೋರಿ ಸ್ಟಿಕ್)ನಲ್ಲಿ ಅಳವಡಿಸಲಾಗಿರುತ್ತದೆ. ಈ ಪೆನ್‌ಡ್ರೈವ್ ಅನ್ನು ಮತ್ತೊಂದು  ಕಂಪ್ಯೂಟರ್‌ನ ಸಿಪಿಯುಗೆ ಅಳವಡಿಸಿದಾಗ ಹೊಸದಾದ ಕಂಪ್ಯೂಟರ್ ಕಾರ್ಯನಿರ್ವಹಿಸಲು ಆರಂಭಿ ಸುತ್ತದೆ. ಈ ವ್ಯವಸ್ಥೆಗೆ `ಟೇಲ್ಸ್~ ಎಂದು ಹೆಸರಿಸಲಾಗಿದೆ.

ಕೆಲಸದ ಮುಗಿದ ತಕ್ಷಣ ಕಂಪ್ಯೂಟರ್ ಶಟ್‌ಡೌನ್ ಮಾಡಿ ಪೆನ್‌ಡ್ರೈವ್ ಹೊರ ತೆಗೆದು ಕಿಸೆಗೆ ಇಳಿಸಬಹುದು. ಪೆನ್‌ಡ್ರೈವ್ ಬಳಿಸಿದ ಒಂದೂ ಕುರುಹು ಇಲ್ಲವೇ ದಾಖಲೆ ಕಾಣ ಸಿಗುವುದಿಲ್ಲ. ಎಲ್ಲ ಫೈಲ್‌ಗಳೂ `ಟೇಲ್ಸ್~ನಲ್ಲಿ ಭದ್ರವಾಗಿರುತ್ತವೆ. ಈ ಬಗೆಯ `ಟೇಲ್ಸ್~ ತಂತ್ರಜ್ಞಾನ ರಹಸ್ಯ ಕಾರ್ಯಾಚರಣೆ, ಬೇಹುಗಾರಿಕೆಗೂ ಅನುಕೂಲವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT