ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀಟನಾಶಕ ಸೇವಿಸಿ ಬಸವಳಿದ ನವಿಲುಗಳಿಗೆ ಚಿಕಿತ್ಸೆ

Last Updated 21 ಫೆಬ್ರುವರಿ 2012, 6:35 IST
ಅಕ್ಷರ ಗಾತ್ರ

ರಾಣೆಬೆನ್ನೂರು: ನಗರದಲ್ಲಿ ಮೇಡ್ಲೇರಿ ರಸ್ತೆಯಲ್ಲಿ ಗಂಗಾಜಲ ತಾಂಡಾದ ಬಳಿ ಬೆಳಿಗ್ಗೆ ವಾಕಿಂಗ್ ಹೋದಾಗ ಹೊಲದಲ್ಲಿ ಬೆಳೆಗಳಿಗೆ ಹೊಡೆದ ಕ್ರಿಮಿನಾಶಕ ತಿಂದು ನೆಲದಲ್ಲಿ ಬಿದ್ದು ಸಾವು ಬದುಕಿನ ಮಧ್ಯೆ ಒದ್ದಾಡುತ್ತಿರುವುದನ್ನು ಕಂಡ ಗ್ರಾಮ ಲೆಕ್ಕಾಧಿಕಾರಿ ಮತ್ತು ಅವರ ಸಹೋದರ ಕೂಡಲೇ ಘಟನಾ ಸ್ಥಳಕ್ಕೆ ಹೋಗಿ ಎರಡು ನವಿಲುಗಳನ್ನು ಎತ್ತಿಕೊಂಡು ಬಂದು ನೀರು ಕುಡಿಸಿ, ಉಸಿರಾಟಕ್ಕೆ ಅನುಕೂಲ ಮಾಡಿ ಪ್ರಥಮ ಚಿಕಿತ್ಸೆ ನೀಡಿದಾಗ ನವಿಲುಗಳು ನಿಟ್ಟುಸಿರು ಬಿಟ್ಟವು.

ಬಳಿಕ ಅವರು ನವಿಲುಗಳನ್ನು ಹೊತ್ತುಕೊಂಡು ತಮ್ಮ ಮನೆಗೆ ಒಯ್ದು ತಕ್ಷಣ ತಮ್ಮ ವಾರ್ಡ್‌ನಲ್ಲಿದ್ದ ನಿವೃತ್ತ ಪಶು ವೈದ್ಯ ಡಾ.ನಾಗೆಂದ್ರಪ್ಪ ಊದಗಟ್ಟಿ ಅವರಿಂದ ಚಿಕಿತ್ಸೆ ಕೊಡಿಸಿದಾಗ ಮತ್ತಷ್ಟು ಚೇತರಿಸಿಕೊಂಡವು.

ನಂತರ ಕೃಷ್ಣಮೃಗ ಅಭಯಾರಣ್ಯದಲ್ಲಿರುವ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆಗೆ ದೂರವಾಣಿ ಮೂಲಕ ಸಂಪರ್ಕಿಸಿ ಸೋಮವಾರ ಮಧ್ಯಾಹ್ನ ಎರಡು ನವಿಲುಗಳನ್ನು ಇಲಾಖೆ ಸಿಬ್ಬಂದಿಯವರಾದ ಬಿ.ಆರ್. ಲಕ್ಷ್ಮೀನಾರಾಯಣ, ಕೆ.ಸಿ.ಧರ್ಮಾಧಿಕಾರಿ, ಪರಶುರಾಮ ಖಂಡಪ್ಪಳವರ, ಚಂದ್ರಶೇಖರ ಜಾನವೇರಿ ಅವರಿಗೆ ಒಪ್ಪಿಸಲಾಯಿತು.

ಸಹೋದರರ ಪ್ರಾಣಿಗಳ ಮೇಲಿನ ಪ್ರೀತಿಯಿಂದ ಎರಡು ನವಿಲುಗಳನ್ನು ಪ್ರಾಣಾಪಾಯದಿಂದ ಪಾರು ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳು ಸಹೋದರರಿಗೆ ಅಭಿನಂದನೆ ಸಲ್ಲಿಸಿದರು.


ಪ್ರಾಣಿ ಪ್ರಿಯ ಕರೂರು ಗ್ರಾಮದ ಗ್ರಾಮಲ್ಲೆಕ್ಕಾಧಿಕಾರಿ ಕೊಟ್ರೇಶ ಕುರುಬರ ಸಹೋದರ ತಿರುಕೇಶ ಕುರುಬರ ಅವರು ಕೆಲಸದ ಒತ್ತಡ ಜಂಜಾಟದಲ್ಲಿ ಮನೆಯಲ್ಲಿ ಎಮು, ಗಿಳಿ, ನಾಯಿ, ಬೆಕ್ಕು, ಕೋಳಿ ಮುಂತಾದ ಪ್ರಾಣಿಗಳನ್ನು ಸಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT