ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀನ್ಯಾ: ಕಾರ್ಯಾಚರಣೆ ಅಂತ್ಯ

Last Updated 25 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನೈರೋಬಿ (ಎಎಫ್‌ಪಿ): ಇಲ್ಲಿನ ವೆಸ್ಟ್‌­ಗೇಟ್‌ ಶಾಪಿಂಗ್‌ ಮಾಲ್‌ಗೆ ನುಗ್ಗಿ ಹತ್ಯಾ­­ಕಾಂಡ ನಡೆಸಿ, ಹಲವ­ರನ್ನು ಒತ್ತೆ­ಯಾಳುಗಳನ್ನಾಗಿರಿಸಿಕೊಂಡು, ಬೆದರಿಕೆ ಹಾಕಿದ್ದ ಉಗ್ರರ ವಿರುದ್ಧ ಸತತ ನಾಲ್ಕು ದಿನಗಳ ಕಾಲ ನಡೆದ ಕಾರ್ಯಾ­ಚರಣೆ ಮಂಗಳವಾರ ರಾತ್ರಿ ಕೊನೆ­ಗೊಂಡಿದೆ. ಈ ಸಂದರ್ಭದಲ್ಲಿ ಐವರು ಉಗ್ರರು ಹತ­ರಾ­ಗಿದ್ದು, 11 ಶಂಕಿತ­ರನ್ನು ಬಂಧಿಸಲಾಗಿದೆ.

ಈ ಮಧ್ಯೆ, ಹತ್ಯಾಕಾಂಡದಲ್ಲಿ ಸಾವ­ನ್ನಪ್ಪಿದವರಿಗೆ ಕೀನ್ಯಾ ಸರ್ಕಾರ ತೀವ್ರ ಶೋಕ ವ್ಯಕ್ತಪಡಿಸಿದೆ. ಜೊತೆಗೆ, ರಾಷ್ಟ್ರದಾ­ದ್ಯಂತ ಮೂರು ದಿನಗಳ ಕಾಲ ಶೋಕಾ­ಚರಣೆ ಘೋಷಿಸಿ ರಾಷ್ಟ್ರಧ್ವಜವನ್ನು ಅರ್ಧಮಟ್ಟ­ದಲ್ಲಿ ಹಾರಿಸುವಂತೆ ಸೂಚಿಸಿದೆ.

80 ತಾಸುಗಳಿಗೂ ಹೆಚ್ಚು ಕಾಲ ವೆಸ್ಟ್‌ಗೇಟ್‌ ಮಾಲ್‌ನಲ್ಲಿ ಹರಿದ ನೆತ್ತರು ಅಂತ್ಯವಾಗಿದೆ. ಈ ಹತ್ಯಾಕಾಂಡದಲ್ಲಿ 61 ನಾಗರಿಕರು ಮತ್ತು ಉಗ್ರರ ವಿರುದ್ಧ ಹೋರಾಡಿದ ಆರು ಯೋಧರು ಸೇರಿ 67 ಜನರು ಮೃತ­ಪಟ್ಟಿದ್ದಾರೆ. ಆದರೆ, ದಾಳಿಯಲ್ಲಿ 137 ಜನರು ಹತ್ಯೆಯಾಗಿದ್ದಾರೆ ಎಂದು ಸೋಮಾಲಿಯಾದ ಶಬಾಬ್‌ ಉಗ್ರರು ಹೇಳಿದ್ದಾರೆ.

‘ಈ ಘಟನೆಯಿಂದ ನಮಗೆ ತೀವ್ರ ಆಘಾತವಾಗಿದೆ. ಆದರೆ ನಾವು ಎದೆ­ಗುಂದಿಲ್ಲ. ಉಗ್ರರನ್ನು ಸದೆಬಡಿದಿ­ದ್ದೇವೆ.’ ಎಂದು ಕೀನ್ಯಾ ಅಧ್ಯಕ್ಷ ಉಹುರು ಕೆನ್ಯಾಟ ಮಂಗಳ­ವಾರ ರಾತ್ರಿ ರಾಷ್ಟ್ರವನ್ನುದ್ದೇ­ಶಿಸಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ.

‘ಪ್ರಬಲ ಸ್ಫೋಟದ ಕಾರಣ ಮಾಲ್‌ನ ಮೂರು ಅಂತಸ್ತುಗಳು ಕುಸಿದು ಬಿದ್ದಿವೆ. ಅವಶೇಷದಡಿಯಲ್ಲಿ ಉಗ್ರರು ಸೇರಿದಂತೆ ಅನೇಕರ ಶವಗಳು ಸಿಲುಕಿರುವ ಸಾಧ್ಯತೆ ಇದೆ’ ಎಂದು ಅವರು ತಿಳಿಸಿದ್ದಾರೆ.

ಆದರೆ, ಸಾವು­–ನೋವಿನ ಸಂಖ್ಯೆ ತಾತ್ಕಾಲಿಕ­ವಾದುದು, 12ಕ್ಕೂ ಹೆಚ್ಚು ಜನರು ನಾಪತ್ತೆಯಾಗಿ­ದ್ದಾರೆ ಪೊಲೀಸ್‌ ಮೂಲಗಳು ತಿಳಿಸಿವೆ. ಈ ಮಧ್ಯೆ, ರೆಡ್‌­ಕ್ರಾಸ್‌ ಸಂಸ್ಥೆಯು 63 ಜನರು ಇನ್ನೂ ಪತ್ತೆ­ಯಾಗಿಲ್ಲ ಎಂದಿದೆ.

ಸದ್ಯ ಮಾಲ್‌ನಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಶವಗಳು ಮತ್ತು ನಿರಪಾಯ­ವಾಗಿ ಕಂಡರೂ ಮುಟ್ಟಿದ ಕೂಡಲೇ ಸಿಡಿ­ಯುವಂತಹ ಕೆಲವು ಸ್ಫೋಟಕ ವಸ್ತು­ಗಳನ್ನು ಭದ್ರತಾ ಪಡೆಗಳು ವಶಪಡಿಸಿ­ಕೊಂ­ಡಿವೆ. ಸ್ಫೋಟಕ­ಗಳನ್ನು ಪತ್ತೆ ಹಚ್ಚಲು ವಿಶೇಷ ರೋಬೊಟ್‌ ಗಳನ್ನು ಬಳಸಲಾಗಿದೆ. ಶವಗಳು ಕೊಳೆತು ನಾರು­ತ್ತಿ­ರುವ ಕಾರಣ ಪರಿಹಾರ ಕಾರ್ಯಾಚ­ರ­ಣೆಗೆ ತೊಡಕಾ ಗಿದೆ. ಯೋಧರು ಮುಖ­ಗವಸು ಧರಸಿ ಶವಗಳನ್ನು ಸಾಗಿಸಿ­ದರು. ಶ್ವಾನ ದಳವು ಸ್ಫೋಟಕಗಳನ್ನು ಮತ್ತು ಕಟ್ಟಡದ ಅವಶೇಷದಡಿಯಲ್ಲಿ ಸಿಕ್ಕಿರುವ ಶವಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತವಾಗಿವೆ.

ಬ್ರಿಟನ್ ಪ್ರಜೆ ಬಂಧನ (ಲಂಡನ್‌ ವರದಿ): ಈ ಮಧ್ಯೆ, ನೈರೋಬಿಯ ವಿಮಾನ ನಿಲ್ದಾಣದಲ್ಲಿ ಬ್ರಿಟನ್‌ ಪ್ರಜೆ­ಯೊಬ್ಬ­ರನ್ನು ಕೀನ್ಯಾ ಪೊಲೀಸರು ಬಂಧಿಸಿದ್ದಾರೆ.

ಅಮೆರಿಕ, ಬ್ರಿಟನ್‌, ಇಸ್ರೇಲ್‌ಗಳಿಂದ ಬಂದಿರುವ ವಿಧಿವಿಜ್ಞಾನ ತಜ್ಞರು ಸಾಕ್ಷಾ್ಯ­ಧಾರಗಳನ್ನು ಸಂಗ್ರಹಿಸಲು ಕೀನ್ಯಾದ ತಜ್ಞರ ತಂಡಕ್ಕೆ ನೆರವು ನೀಡು­ತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ವೆಸ್ಟ್‌ಗೇಟ್‌ ಮಾಲ್‌­ನಲ್ಲಿ ನಡೆಸಿದ ಈ ಹತ್ಯಾಕಾಂಡವು ಕೀನ್ಯಾ ಇತಿಹಾಸದಲ್ಲೇ ಅತ್ಯಂತ ಭೀಕರವಾ­ದುದು ಎಂದಿದೆ.

ಹತ್ಯಾಕಾಂಡದಲ್ಲಿ ಬ್ರಿಟನ್‌ನ ಆರು, ಕೆನಾಡ ಮತ್ತು ಭಾರ­ತದ ತಲಾ ಇಬ್ಬರು, ಚೀನಾ ಮತ್ತು ಡಚ್‌ ರಾಷ್ಟ್ರ­ಗಳ ತಲಾ ಒಬ್ಬರು ಮಹಿಳೆ­ಯರು, ದಕ್ಷಿಣ ಆಫ್ರಿಕಾ ಮತ್ತು ದಕ್ಷಿಣ ಕೊರಿ­ಯಾದ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT